ಬೆಳ್ತಂಗಡಿ ಲಯನ್ಸ್ ಸೇವಾ ತೇರು: ಬಿ.ಕೆ. ಧನಂಜಯ ರಾವ್

Advt_NewsUnder_1
Advt_NewsUnder_1
Advt_NewsUnder_1

belthangady lions theru prgmಬೆಳ್ತಂಗಡಿ : ಬೆಳ್ತಂಗಡಿಯ ಪೂರ್ವ ಹೆಸರು ಬೋಳು ತೇರು ಎಂದಾಗಿದ್ದು, ಆ ಹೆಸರಿನ ಅಂತಿಮ ಪದದಿಂದಲೇ ಈ ವರ್ಷ ಬೆಳ್ತಂಗಡಿ ಲಯನ್ಸ್ ಕ್ಲಬ್ ತೇರು ಎನ್ನುವ ಹೆಸರಿನಿಂದ ಸೇವಾ ಚಟುವಟಿಕೆಯನ್ನು ಆರಂಭಿಸಿರುವುದು ಶುಭ ಲಕ್ಷಣವಾಗಿದೆ ಎಂದು ಬೆಳ್ತಂಗಡಿಯ ನ್ಯಾಯವಾದಿ ಬಿ.ಕೆ ಧನಂಜಯ ರಾವ್ ಹೇಳಿದರು.
ಅವರು ಬೆಳ್ತಂಗಡಿ ಲಯನ್ಸ್ ಕ್ಲಬ್‌ನಲ್ಲಿ ಜುಲೈ ತಿಂಗಳ ಪ್ರಥಮ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಬಾಧ್ಯಕ್ಷತೆಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲ.ಧರಣೇಂದ್ರ ಕೆ ಜೈನ್ ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ಮುಖ್ಯ ಅತಿಥಿಗಳಾಗಿ ಪ್ರಾಂತ್ಯ 10ರ ಪ್ರಾಂತ್ಯಾಧ್ಯಕ್ಷ ಲ.ನಿತ್ಯಾನಂದ ನಾವರ, ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ನಿಕಟ ಪೂರ್ವಾಧ್ಯಕ್ಷ ಲ.ಸುಶೀಲ ಎಸ್.ಹೆಗ್ಡೆ, ಲಯನ್ಸ್ ಕ್ಲಬ್‌ನ ಪ್ರಥಮ ಉಪಾಧ್ಯಕ್ಷ ಲ.ಮೇಧಿನಿ ಡಿ.ಗೌಡ, ಕಾರ್ಯದರ್ಶಿ ಲ.ಸುರೇಶ್ ಶೆಟ್ಟಿ ಲಾಯಿಲ, ಕೋಶಾಧಿಕಾರಿ ಲ.ವಿನ್ಸೆಂಟ್ ಟಿ. ಡಿ ಸೋಜಾ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು. ದಿನದ ಅದೃಷ್ಟ ವ್ಯಕ್ತಿಯಾಗಿ ಲ| ರಾಜೀವ ಡಿ.ಗೌಡ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.