ಬೆಳಾಲು : ಶ್ರೀ ಮಾಯಾ ಮಹಾದೇವ ದೇವಸ್ಥಾನ ಮಾಯಾ ಬೆಳಾಲು ಇದರ ನೂತನ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರ ನೇಮಕ ಮಾಡಿ ದ.ಕ ಧಾರ್ಮಿಕ ದತ್ತಿ ಇಲಾಖೆ ಆದೇಶ ನೀಡಿರುತ್ತದೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಹೆಚ್. ಪದ್ಮ ಗೌಡ ನೇಮಕಗೊಂಡಿರುತ್ತಾರೆ. ಇವರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಕಳೆದ ವರ್ಷ ಬ್ರಹ್ಮಕಲಶೋತ್ಸವ ಜರಗಿತು. ಇವರು ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷರಾಗಿ, ಬೆಳಾಲು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ವ್ಯವಸ್ಥಾಪನಾ ಸಮಿತಿಯ ಇತರ ಸದಸ್ಯರುಗಳಾಗಿ ಪುಷ್ಪದಂತ ಜೈನ್ ಮಾಯಾಗುತ್ತು, ರಾಜಪ್ಪ ಗೌಡ ಪುಚ್ಚೆಹಿತ್ಲು, ಕೊರಗಪ್ಪ ಯಾನೆ ನಾಣ್ಯಪ್ಪ ಪೂಜಾರಿ ಮುಂಡ್ರೊಟ್ಟು, ಗಂಗಯ್ಯ ಗೌಡ ಅದವೂರು, ಪ್ರಧಾನ ಅರ್ಚಕ ಕೇಶವ ರಾಮಯಾಜಿ, ಪರಿಶಿಷ್ಟ ಜಾತಿ/ಪಂಗಡದಿಂದ ದಿನೇಶ ಎಂ., ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ಸುಕನ್ಯಾ ನಾರಾಯಣ ಮಂಜನೊಟ್ಟು, ಶ್ರೀಮತಿ ಚಂದ್ರಾವತಿ ಕೊಲ್ಲಿಮಾರು, ಇವರುಗಳು ನೇಮಕಗೊಂಡಿರುತ್ತಾರೆ. ಈವರೇಗೆ ಸಹಾಯಕ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾ ಇದ್ದರು.