ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸೇವಾ ರತ್ನ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

3

ಕೂಡಲಸಂಗಮ ಬಸವಭಾರತಿ ಪದವಿಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಸವಧರ್ಮ ಪೀಠ ಕೂಡಲಸಂಗಮ ವತಿಯಿಂದ ಪೀಠಾಧ್ಯಕ್ಷೆ ಮಹಾಜಗದ್ಗುರು ಡಾ| ಮಾತೆ ಮಹಾದೇವಿಯವರು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರಿಗೆ ಸೇವಾರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕರಂಗದಲ್ಲಿ ಅಪಾರ ಸೇವೆ ಸಲ್ಲಿಸಿದ ಡಾ| ವೀರೇಂದ್ರ ಹೆಗ್ಗಡೆಯವರ ವಿಶೇಷ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.
ಸಮಾಜದಲ್ಲಿರುವ ಅಸಮಾನತೆ ಭೇದ-ಭಾವ ಹೋಗಲಾಡಿಸಲು ೫೦೦ ವರ್ಷಗಳ ಹಿಂದೆಯೇ ಬಸವಣ್ಣನವರು ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿಸಿಕೊಂಡಿದ್ದರು. ಇಂದಿಗೂ ಸಮಾಜದಲ್ಲಿ ಅಸಮಾನತೆಯನ್ನು ಕಾಣುತ್ತಿದ್ದೇವೆ. ಆದ್ದರಿಂದ ಯುವಜನಾಂಗ ಬಸವಣ್ಣನವರ ತತ್ವ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಏಸು ಕ್ರಿಸ್ತ, ಮಹಮದ್ ಪೈಗಂಬರ್, ಬುದ್ಧ, ಮಹಾವೀರ, ಬಸವಣ್ಣನವರು ಸಮಾನತೆಗಾಗಿ ಹೋರಾಡಿದ ಫಲವಾಗಿ ಇಂದು ಸಮಾಜದಲ್ಲಿ ಸಮಾನತೆಯನ್ನು ಕಾಣುತ್ತಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಾವು ರೈತರಲ್ಲಿ ಸ್ವಾವಲಂಬನೆಯಾಗಿ ಬದುಕುವುದರ ಗ್ಗೆ ತಿಳಿಸಿಕೊಡುವುದರ ಜೊತೆಗೆ ಮಹಿಳೆಯರ ಸ್ವ ಸಹಾಯ ಸಂಘಟನೆ ಮೂಲಕ ಆರ್ಥಿಕ, ಕೌಟುಂಬಿಕ, ಸಾಮಾಜಿಕ ಪರಿವರ್ತನೆ ಮಾಡಲಾಗುತ್ತಿದೆಯೆಂದು ನೂತನ ಬಸವ ಭಾರತಿ ಪದವಿ ಪೂರ್ವ ಕಾಲೇಜಿನ ಕಟ್ಟಡವನ್ನು ಉದ್ಘಾಟಿಸಿ ಡಾ| ಡಿ ವೀರೇಂದ್ರೆ ಹೆಗ್ಗಡೆಯವರು ಮಾತಾನಾಡಿದರು.
ಈ ಶುಭ ಸಂದರ್ಭದಲ್ಲಿ ಬಸವಣ್ಣನ ಐಕ್ಯ ಮಂಟಪ ಮತ್ತು ಸಂಗಮೇಶ್ವರ ದೇವಸ್ಥಾನ ಹಾಗೂ ಏಷ್ಯಾ ಖಂಡದಲ್ಲೆ ಅತೀ ಸುಂದರವಾದ ಅನುಭವ ಮಂಟಪವನ್ನು ಡಾ| ಹೆಗ್ಗಡೆಯವರು ವೀಕ್ಷಣೆ ಮಾಡಿದರು. ಡಾ| ಹೆಗ್ಗಡೆಯವರನ್ನು ಮಹಾದೇಶ್ವರ ಸ್ವಾಮೀಜಿಯವರು, ಹುನುಗುಂದ ವಿಧಾನ ಸಭಾಕ್ಷೇತ್ರ ಶಾಸಕರಾದ ವಿಜಯಾನಂದ ಕಾಶಪ್ಪನವರು, ಕೂಡಲ ಸಂಗಮದ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಧಾರವಾಡದ ಎಸ್.ಡಿ.ಎಂ ಸಂಸ್ಥೆಯ ಕಾರ್ಯದರ್ಶಿ ಜೀವಂಧರ್‌ಜೈನ್ ಮತ್ತು ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ ರೈ ಬರಮಾಡಿಕೊಂಡು ಕ್ಷೇತ್ರ ಪರಿಚಯವನ್ನು ಮಾಡಿಕೊಟ್ಟರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.