ಸೂಳಬೆಟ್ಟು : ಸಾಕ್ಷರತಾ ಕ್ರೀಡಾಂಗಣದ ಉದ್ಘಾಟನೆ ಹಾಗೂ ಗಿಡ ವಿತರಣೆ

1

ಸೂಳಬೆಟ್ಟು: ಆಟದ ಮೈದಾನದ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದ ಅಳದಂಗಡಿ ಸನಿಹದ ಸೂಳಬೆಟ್ಟು ಕಿ.ಪ್ರಾ.ಶಾಲೆಯ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳಿಗೆ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಸುಮಾರು ರೂ. ೧,೫೦,೫೦೦ ವೆಚ್ಚದಲ್ಲಿ ಆಟವಾಡಲು ಅನುಕೂಲವಾಗುವಂತೆ ಶಾಲಾ ಮೈದಾನದಲ್ಲಿ ಜಾರು ಬಂಡಿ, ತಿರುಗುವ ಬಂಡಿ ಮೊದಲಾದ ಪರಿಕರಗಳನ್ನು ಅಳವಡಿಸಿರುವ ಸಾಕ್ಷರತಾ ಕ್ರೀಡಾಂಗಣದ ಉದ್ಘಾಟನೆ ಹಾಗೂ ಗಿಡ ವಿತರಿಸುವ ಸಮಾರಂಭ ಜು.೧೪ ರಂದು ಶಾಲಾ ವಠಾರದಲ್ಲಿ ನೆರವೇರಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಮಿತ್ತಮಾರು ಅವರು, ರೋಟರಿ ಸದಸ್ಯರ ಸೇವಾ ಕಾರ್ಯ ಅನುಕರಣೀಯವಾದದ್ದು. ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಅವರು ನೀಡಿರುವ ಕೊಡುಗೆ ಅತ್ಯಂತ ಉತ್ತಮವಾಗಿದೆ ಎಂದರು.
ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಡಾ| ಸುಧೀರ್ ಪ್ರಭು ವಹಿಸಿದ್ದರು. ಅತಿಥಿಗಳಾಗಿ ತಾ.ಪಂ. ಸದಸ್ಯೆ ವಿನೂಷಾ ಪ್ರಕಾಶ್, ಶಾಲಾ ಮುಖ್ಯೋಪಾಧ್ಯಾಯಿನಿ ಶಕುಂತಲಾ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪ್ರಮೋದ್ ವೇದಿಕೆಯಲ್ಲಿದ್ದರು.
ಸ್ವಾಗತಿಸಿ, ಪ್ರಸ್ತಾವಿಸಿದ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಡಿ.ಎಮ್. ಗೌಡ ಅವರು, ಇಲ್ಲಿನ ಕ್ರೀಡಾಂಗಣ ನಿರ್ಮಾಣಕ್ಕೆ ರೋಟರಿ ಜಿಲ್ಲೆಯಿಂದ ರೂ.೬೮,೦೦೦ ನೀಡಲಾಗಿದ್ದು ಉಳಿದ ೮೨,೫೦೦ ರೂ.ಗಳನ್ನು ರೋಟರಿ ಸದಸ್ಯರಾದ ಡಾ| ಶಶಿಧರ ಡೋಂಗ್ರೆ, ಸುಲ್ಕೇರಿಮೊಗ್ರು ಸಿಎ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ಶೆಟ್ಟಿ ಹಾಗೂ ಡಿ.ಎಂ.ಗೌಡ ನೀಡಿ ಸಹಕರಿಸಿದ್ದಾರೆ. ಸೂಳಬೆಟ್ಟಿನಲ್ಲಿ ಮಕ್ಕಳಿಗೆ ಆಟಕ್ಕೆ ಅನನೂಕೂಲವಿತ್ತು ಎಂದು ತಿಳಿದ ಕ್ಲಬ್ ಕ್ರೀಡಾಂಗಣ ನಿರ್ಮಿಸಿ ಪರಿಹಾರ ಕಂಡುಕೊಂಡಿದೆ ಎಂದರು.
ಸಮಾರಂಭದಲ್ಲಿ ಪುರೋಹಿತ ಪದ್ಮನಾಭ ಜೋಶಿ, ಕೃಷಿಕರಾದ ಮುರಲೀಧರ ಗೋಖಲೆ, ಪ್ರವೀಣಚಂದ್ರ ಮೆಹೆಂದಳೆ, ವಿಶ್ವನಾಥ ಡೋಂಗ್ರೆ, ಸುಬ್ರಹ್ಮಣ್ಯ ಸಾಲಿಯಾನ್, ಹರೀಶ್ ಸಾಲಿಯಾನ್, ಆನಂದ, ಅಣ್ಣು, ಎಸ್‌ಕೆಡಿಆರ್‌ಡಿಪಿ ಅಳದಂಗಡಿ ವಲಯ ಅಧ್ಯಕ್ಷ ನಾರಾಯಣ ಸಾಲಿಯಾನ್, ಉದ್ಯಮಿ ಅನಂತ ಮರಾಠೆ, ಅಂಗನವಾಡಿ ಕಾರ್ಯಕರ್ತೆ ಶಕುಂತಲಾ, ಅಕ್ಷರ ದಾಸೋಹದ ಕಾರ್ಯಕರ್ತೆ ಮಮತಾ, ಸುಜಾತಾ ಹಾಗೂ ದೇಜಮ್ಮ, ರಿಕ್ಷಾ ಮಾಲಕ ಮೋಹನ ಹೆಗ್ಡೆ, ಸೂಳಬೆಟ್ಟು ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿ ಪ್ರಣತಿ, ಸಹಾಯಕಿ ನಾಗವೇಣಿ, ರೋಟರಿಕ್ಲಬ್ ಸದಸ್ಯರಾದ ಡಾ| ಶಶಿಧರ ಡೋಂಗ್ರೆ, ಜಗದೀಶ್ ಪ್ರಸಾದ್, ಬಿ.ಕೆ. ಧನಂಜಯರಾವ್, ಪ್ರಕಾಶ್ ತುಳುಪುಳೆ, ಸುನಿಲ್ ಶೆಣೈ, ಯಶವಂತ ಪಟವರ್ಧನ್, ದಯಾನಂದ ನಾಯಕ್, ಶ್ರೀಕಾಂತ ಕಾಮತ್, ನಾರಾಯಣ ಭಟ್, ನಿತ್ಯಾನಂದ ಶೆಟ್ಟಿ, ಅಳದಂಗಡಿ ಗ್ರಾ.ಪಂ. ಮಾಜಿ ಸದಸ್ಯ ಮೋಹನದಾಸ ಅಳದಂಗಡಿ, ರೋಟರಿ ಆನ್ಸ್ ಸದಸ್ಯೆಯರಾದ ಡಾ| ಸುಶ್ಮಾ ಡೋಂಗ್ರೆ, ಪಲ್ಲವಿ ತುಳುಪುಳೆ, ಶೈಲಾ ಕಾಮತ್, ರಾಜಶ್ರೀ ಧನಂಜಯರಾವ್, ಡಾ| ದೀಪಾಲಿ ಡೋಂಗ್ರೆ ಮತ್ತಿತರು ಭಾಗವಹಿಸಿದ್ದರು.
ಮಕ್ಕಳಿಗೆ, ಪೋಷಕರಿಗೆ ಗಿಡಗಳನ್ನು ವಿತರಿಸಲಾಯಿತು. ಪತ್ರಕರ್ತ ದೀಪಕ್ ಆಠವಳೆ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶಾಲಾ ಸಹ ಶಿಕ್ಷಕಿ ಲೀನಾ ವೇಗಸ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.