HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯಿಂದ ಡಾ| ಹೆಗ್ಗಡೆ ಭೇಟಿ

Gejjegiriಬೆಳ್ತಂಗಡಿ : ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ದೇಯಿ ಬೈದ್ಯೆತಿ – ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ನಿರ್ಮಾಣ ಗೊಳ್ಳುತ್ತಿರುವ ವಿವಿಧ ಶ್ರದ್ದಾ ಕೇಂದ್ರಗಳ ಪುನರುತ್ಥಾನ ಯೋಜನೆಗಳ ಬಗ್ಗೆ ಚರ್ಚಿಸಿದರು.
ಕೋಟಿ ಚೆನ್ನಯ ಮೂಲಸ್ಥಾನ ಗರೋಡಿ, ದೇಯಿ ಬೈದ್ಯೆತಿ – ಗುರು ಪಟ್ಟದ ಸಾಯನ ಬೈದ್ಯರ ಧರ್ಮ ಚಾವಡಿ, ಆದಿದೈವ ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ, ಕೊರತಿ ದೈವಗಳ ಸಾನಿಧ್ಯ, ಸರೋಳಿ ಸೈಮಂಜ ಕಟ್ಟೆ, ದೇಯಿ ಬೈದ್ಯೆತಿ ಮಹಾ ಸಮಾಧಿ, ಬೆರ್ಮೆರೆ ಗುಂಡ ಇವೇ ಮುಂತಾದ ಶ್ರದ್ದಾ ಬಿಂದುಗಳ ಪುನರುತ್ಥಾನ ಯೋಜನೆಯ ಕೆಲಸ ಕಾಮಗಾರಿಗಳು ಕ್ಷೇತ್ರದಲ್ಲಿ ಭರದಿಂದ ಸಾಗುತ್ತಿರುವ ವಿಚಾರ ತಿಳಿದು ಡಾ| ಹೆಗ್ಗಡೆಯವರು ಹರ್ಷ ವ್ಯಕ್ತಪಡಿಸಿದರು.
ಈ ಬಗ್ಗೆ ಇದ್ದ ನನ್ನ ಕನಸು ಸಾಕಾರಗೊಳ್ಳುತ್ತಿದ್ದು ತನಗೆ ಸಂತಸ ತಂದಿದೆ. ಈ ಕಾರ್ಯವು ಬೇಗನೆ ಸಾಕಾರಗೊಳ್ಳಲೆಂದು ಆಶಯ ವ್ಯಕ್ತಪಡಿಸುವುದರೊಂದಿಗೆ ಮೂಲಸ್ಥಾನದ ಪುನರುತ್ಥಾನ ಯೋಜನೆಯ ನೀಲ ನಕ್ಷೆಯನ್ನು ಪರಿಶೀಲಿಸಿ ಗೆಜ್ಜೆಗಿರಿಯಲ್ಲಿ ಥೀಮ್ ಪಾರ್ಕ್ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಬರುವ ಭಕ್ತಾಭಿಮಾನಿಗಳಿಗೆ ಮೂಲ ಸೌಕರ್ಯ ಒದಗಿಸುವ ವ್ಯವಸ್ಥೆಗಳನ್ನು ಕೂಡ ಮಾಡುವಂತೆ ಸಲಹೆ ನೀಡಿದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಡಾ| ಹೆಗ್ಗಡೆಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಕ್ಷೇತ್ರದ ತಾಂತ್ರಿಕ ಸಲಹೆಗಾರ ಆರ್ಟಿಟೆಕ್ ಸಂತೋಷ್ ಕುಮಾರ್ ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ, ಕಾರ್ಯಧ್ಯಕ್ಷರಾದ ಪೀತಾಂಬರ ಹೇರಾಜೆ, ಜಯಂತ ನಡುಬೈಲ್, ಉಪಾಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್, ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ, ತಂತ್ರಿಗಳಾದ ಲೋಕೇಶ್ ಶಾಂತಿ, ಸಂತೋಷ್ ಕೋಟ್ಯಾನ್ ಉಗ್ಗೆಲ್‌ಬೆಟ್ಟು, ರವಿ ಪೂಜಾರಿ ಚಿಲಿಂಬಿ, ಚಂದ್ರಶೇಖರ ಉಚ್ಚಿಲ್, ಸೋಮನಾಥ ಬಂಗೇರ ವರ್ಪಾಳೆ, ಸದಾನಂದ ಪೂಜಾರಿ ಉಂಗಿಲಬೈಲು, ನಿತ್ಯಾನಂದ ನಾವರ, ಪ್ರವೀಣ ಕೆಲೆಂಜಿಗುತ್ತು, ರಾಜೇಂದ್ರ ಮಂಗಳೂರು, ಪ್ರಭಾಕರ ಧರ್ಮಸ್ಥಳ, ಪ್ರಶಾಂತ್ ಪೂಜಾರಿ, ಶೇಖರ ಬಂಗೇರ, ನಾರಾಯಣ ಮಚ್ಚಿನ, ಪುರುಷೋತ್ತಮ ಇನ್ನಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.