ನೂತನ ಆಸ್ಪತ್ರೆಗೆ ಚಾರ್ಮಾಡಿ, ತೋಟತ್ತಾಡಿ ಮತ್ತು ಚಿಬಿದ್ರೆ ಗ್ರಾಮ ವ್ಯಾಪ್ತಿ ಬರುತ್ತಿದ್ದು, ಇಲ್ಲಿ ಒಟ್ಟು 15 ಸಾವಿರ ಜನಸಂಖ್ಯೆ ಇದೆ. 6 ಹಾಸಿಗೆಯ ಈ ಆಸ್ಪತ್ರೆಗೆ ಒಬ್ಬರು ವೈದ್ಯರು, ಒಬ್ಬರು ಸ್ಟಾಪ್ ನರ್ಸ್, ಒಬ್ಬರು ಗುಮಾಸ್ತ, 3 ಕಿರಿಯ ಆರೋಗ್ಯ ಸಹಾಯಕಿಯರು, 2 ಗ್ರೂಪ್ ಡಿ ನೌಕರ ಹುದ್ದೆ ಮಂಜೂರಾಗಿದೆ. ಅಲ್ಲದೆ ಆಸ್ಪತ್ರೆಗೆ ಬೇಕಾದ ಔಷಧಿಯೂ ಮಂಜೂರಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ತಿಳಿಸಿದ್ದಾರೆ.
ಚಾರ್ಮಾಡಿ: ದ.ಕ. ಜಿಲ್ಲಾ ಪಂಚಾಯತು, ತಾಲೂಕು ಪಂಚಾಯತು ಬೆಳ್ತಂಗಡಿ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳ್ತಂಗಡಿ, ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ ಇದರ ಆಶ್ರಯದಲ್ಲಿ ಚಾರ್ಮಾಡಿಯಲ್ಲಿ ಸುಮಾರು 1.30ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಜು.10 ರಂದು ಶಾಸಕ ಹಾಗೂ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಚಾರ್ಮಾಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕೆಂಬುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ. ಇಲ್ಲಿ ಆಸ್ಪತ್ರೆ ಮಂಜೂರಾಗಿದ್ದರೂ ಇದನ್ನು ಎಲ್ಲಿ ನಿರ್ಮಿಸಬೇಕೆಂಬ ಬಗ್ಗೆ ಜನರಿಗಿದ್ದ ಗೊಂದಲದಿಂದಾಗಿ ಇದು ಆರಂಭಕ್ಕೆ ತಡವಾಗಿದೆ. ಈಗ ಸೂಕ್ತವಾದ ಜಾಗವನ್ನು ನಾನೇ ಪರಿಶೀಲನೆ ಮಾಡಿ ಇಲ್ಲಿ ರೂ.1.30 ಕೋಟಿ ವೆಚ್ಚದ ಕಟ್ಟಡಕ್ಕೆ ಇಂದು ಶಂಕುಸ್ಥಾಪನೆ ನಡೆದಿದೆ. ಇದರ ಕಾಮಗಾರಿ ಶೀಘ್ರವಾಗಿ ನಡೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆಯನ್ನು ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ, ಉಜಿರೆ ಕ್ಷೇತ್ರದ ಜಿ.ಪಂ. ಸದಸ್ಯೆ ಶ್ರೀಮತಿ ನಮಿತಾ ಪೂಜಾರಿ, ಚಾರ್ಮಾಡಿ ಕ್ಷೇತ್ರದ ತಾ.ಪಂ. ಸದಸ್ಯ ಕೊರಗಪ್ಪ ಗೌಡ ಅರಣಪಾದೆ, ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ| ಸಿಕಂದರ್ ಪಾಷ, ತಾಲೂಕು ಪಂಚಾಯತು ಕಾರ್ಯನಿರ್ವಾಹಣಾಧಿಕಾರಿ ಎ.ಎನ್. ಗುರುಪ್ರಸಾದ್ ಭಾಗವಹಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಕೆ. ಕಲಾಮಧು ಶೆಟ್ಟಿ, ಕೆ.ಹೆಚ್.ಎಸ್.ಡಿ.ಆರ್.ಪಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಘುಚಂದ್ರ ಹೆಬ್ಬಾರ್, ಸಮಾಜ ಸೇವಕ
ಹಸನಬ್ಬ ಚಾರ್ಮಾಡಿ, ಪ್ರಗತಿಪರ ಕೃಷಿಕ ಅನಂತ ರಾವ್ ಚಾರ್ಮಾಡಿ, ಗ್ರಾ.ಪಂ. ಉಪಾಧ್ಯಕ್ಷೆ ರೇವತಿ, ಸದಸ್ಯರಾದ ರವಿಪೂಜಾರಿ, ರಹೀಂ, ಶಾಂಭವಿ, ಗೋಪಾಲಕೃಷ್ಣ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಬಾಬು ಪೂಜಾರಿ ವಲಸರಿ, ಯಶೋಧರ ವಲಸರಿ, ಪುಟ್ಟ ಕುಲಾಲ್, ಇಲ್ಯಾಸ್ ಕಕ್ಕಿಂಜೆ, ಕಟ್ಟಡದ ಇಂಜಿನಿಯರ್ ರಿಜ್ವಾನ್ ಮೊದಲಾದವರು ಉಪಸ್ಥಿತರಿದ್ದರು.
ತಾ.ಪಂ. ಸದಸ್ಯ ಕೊರಗಪ್ಪ ಗೌಡ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಧನ್ಯವಾದವಿತ್ತರು. ಆಸ್ಪತ್ರೆ ನಿರ್ಮಾಣ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಚಾರ್ಮಾಡಿ ಭಾಗದ ಜನರು ಹಲವು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರು. ಇದೀಗ ಆಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರುವುದರೊಂದಿಗೆ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ನನಸಾಗುತ್ತಿದೆ.