ಕರ್ತವ್ಯ ಪಾಲಿಸುವುದೇ ಶ್ರೇಷ್ಠವಾದ ಗುರುತತ್ವ : ಬ್ರಹ್ಮಾನಂದ ಶ್ರೀ

Advt_NewsUnder_1
Advt_NewsUnder_1
Advt_NewsUnder_1

Kanyadi gurupoojeಧರ್ಮಸ್ಥಳ : ಜೀವನದಲ್ಲಿ ತಮ್ಮ ಕರ್ತವ್ಯ ಪಾಲಿಸುವುದೇ ಶ್ರೇಷ್ಠವಾದ ಗುರುತತ್ವ, ಗುರು ಪೀಠಕ್ಕೆ ಸಲ್ಲಿಸುವ ಗೌರವ ದೇವರಿಗೆ ಸಲ್ಲುತ್ತದೆ. ಎಂದು ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.
ಅವರು ಜು.9ರಂದು ಶ್ರೀರಾಮ ಕ್ಷೇತ್ರದಲ್ಲಿ ನಡೆದ ಗುರು ಪೌರ್ಣಿಮ ಸಮಾರಂಭದಲ್ಲಿ ಗುರುಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ತಮ್ಮ ತಮ್ಮ ಧರ್ಮವೇ ಶ್ರೇಷ್ಠ ಮತ್ತೊಂದು ಧರ್ಮದ ಕುರಿತು ತಪ್ಪು ಭಾವನೆಯನ್ನು ಮೂಡಿಸುವುದು ಸರಿಯಲ್ಲ. ಸತ್ಯ, ಧರ್ಮದಿಂದ ಭಗವಂತನನ್ನು ಒಲಿಸಬಹುದು. ಮಾನವನ ಮನಸ್ಸು ಸುಂಟರಗಾಳಿಯಂತೆ ತಿರುಗುತ್ತಾ ಇರುತ್ತದೆ. ಶ್ರದ್ಧಾ ಭಕ್ತಿಯಿಂದ ನಿರಂತರ ಧ್ಯಾನದಿಂದ ಮನಸ್ಸನ್ನು ಹತೋಟಿಗೆ ತರಬೇಕು. ಆತ್ಮದಲ್ಲಿ ಗುರುವನ್ನು ಸ್ಮರಿಸುತ್ತಾ ಇರುವುದರಿಂದ ಗುರುಬಲ ಲಭಿಸಿ ಮೋಕ್ಷ ಪ್ರಾಪ್ತಿಯಾ ಗುವುದು. ಈ ಮೂಲಕ ಶ್ರೇಷ್ಠವಾದ ಗುರು ಪರಂಪರೆಗಾಗಿ ಸಂಸ್ಕಾರಯುತ ಶಿಕ್ಷಣವನ್ನು ಹೆತ್ತವರು ತಮ್ಮ ಮಕ್ಕಳಿಗೆ ನೀಡಬೇಕು. ಇಂದು ಆಂಗ್ಲ ಮಾಧ್ಯಮ ಶಿಕ್ಷಣ ಅಗತ್ಯ ಆದರೆ ಆಚಾರ ವಿಚಾರಗಳಲ್ಲಿ ಭಾರತೀಯ ಸಂಸ್ಕೃತಿ ಇರಲಿ ಎಂದರು.
ಕಾರ್ಯಕ್ರಮದ ಮೊದಲು ವೇ| ಮೂ| ಲಕ್ಷ್ಮೀಪತಿ ಗೋಪಾಲಾಚಾರ್ಯ ರಿಂದ ಸ್ವಾಮೀಜಿಯವರ ಪಾದಪೂಜೆ, ಗುರುಪೂಜೆ, ಬೆಳ್ಳಿ ಕಿರೀಟಧಾರಣೆ ನಡೆಯಿತು. ಕಾರ್ಯಕ್ರಮದ ಮೊದಲು ಸತ್ಯನಾರಾಯಣ ಪೂಜೆ, ಕು| ಶ್ರದ್ಧಾ ಕಾಸರಗೋಡು ಇವರಿಂದ ಶ್ರೀನಿವಾಸ ಕಲ್ಯಾಣೋತ್ಸವ ಹರಿಕಥಾ ಸತ್ಸಂಗ ಜರಗಿತು.
ಈ ಸಂದರ್ಭದಲ್ಲಿ ಶ್ರೀ ಗುರುದೇವ ಟ್ರಸ್ಟಿಗಳಾದ ಚಿತ್ತರಂಜನ್ ಗರೋಡಿ, ಮೋಹನ್ ಉಜ್ಜೋಡಿ, ಭಟ್ಕಳದ ಜೆ.ಎನ್ ನಾಯ್ಕ ಮತ್ತು ಮಾಜಿ ಶಾಸಕ ಜೆ.ಡಿ. ನಾಯ್ಕ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗಿರಥ ಜಿ, ಬಿಲ್ಲವ ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಶ್ರೀಮತಿ ಸುಜಿತಾ ವಿ. ಬಂಗೇರ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಧಾರ್ಮಿಕ ದತ್ತಿ ಪರಿಷತ್‌ನ ಸದಸ್ಯ ಮುಕುಂದ ಸುವರ್ಣ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯ, ಬೆಳ್ತಂಗಡಿಯ
ವಿಶ್ವನಾಥ ಆರ್. ನಾಯಕ್, ಉತ್ತರ ಕನ್ನಡ ಮತ್ತು ಸ್ಥಳೀಯ ಶ್ರೀರಾಮ ಸೇವಾ ಸಮಿತಿ ಸಮಿತಿಗಳ ಪದಾಧಿಕಾರಿಗಳು, ರಾಜಕೀಯ ನಾಯಕರುಗಳು, ಸದಸ್ಯರುಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ವಾಮೀಜಿಗಳ ಶಿಷ್ಯವೃಂದದವರು, ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯದ ಮಕ್ಕಳು ಮತ್ತು ಶಿಕ್ಷಕ ವೃಂದದವರು, ಕ್ಷೇತ್ರದ ಸಿಬ್ಬಂದಿವರ್ಗದವರು, ರಥಬೀದಿ ವ್ಯಾಪಾರಸ್ಥರು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀ ಗುರುದೇವ ಮಠದ ಟ್ರಸ್ಟಿ ತುಕರಾಮ ಸಾಲಿಯಾನ್ ಸ್ವಾಗತಿಸಿದರು. ಶ್ರೀ ರಾಮಸೇವಾ ಸಮಿತಿಯ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ: ಕನ್ನಿಕಾ ಕನ್ಯಾಡಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.