ಬೆಳ್ತಂಗಡಿಯಲ್ಲಿ ವಿಶೇಷ ಮಕ್ಕಳ ಮೌಲ್ಯಾಂಕನ ಶಿಬಿರ ವಿಕಲಾಂಗ ಮಕ್ಕಳಿಗೂ ಬದುಕುವ, ಶಿಕ್ಷಣದ ಹಕ್ಕಿದೆ: ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಗೀತಾ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

vikalanga makkala moulyankana shibhiraಬೆಳ್ತಂಗಡಿ : ವಿಕಲಾಂಗ ಮಗುವಾದರೂ ಅದು ಅಮೂಲ್ಯ, ಅದಕ್ಕೆ ಬದುಕುವ ಹಕ್ಕಿದೆ, ಶಿಕ್ಷಣದ ಹಕ್ಕಿದೆ. ಇದನ್ನು ನೀಡಲು ಶಿಕ್ಷಣ ಇಲಾಖೆ ತಯಾರಿದೆ. ಇದಕ್ಕಾಗಿ ಸರಕಾರ ಸಾಕಷ್ಟು ಅನುದಾನ ಮತ್ತು ಒಂದೊಂದು ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಗೆ 2 ಅಥವಾ 3 ಮಂದಿ ಪರಿಣತ ಶಿಕ್ಷಕರನ್ನು ಕರ್ತವ್ಯಕ್ಕೆ ಮೀಸಲಿರಿಸಿದ್ದು, ಅವರು ತ್ಯಾಗ ಮನೋಭಾವದಿಂದ ವಿಕಲಾಂಗರ ಸೇವೆ ಮಾಡಬೇಕಾಗಿದೆ. ಎಂದು ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಗೀತಾ ಅವರು ಹೇಳಿದರು.
ಜು. 3 ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಲಯನ್ಸ್ ಕ್ಲಬ್ ಬೆಳ್ತಂಗಡಿ, ಜೇಸಿಐ ಉಜಿರೆ, ಇವರ ಆಯೋಜಕತ್ವದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದಡಿಯಲ್ಲಿ ವಿಶೇಷ ಮಕ್ಕಳ ಮೌಲ್ಯಾಂಕನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಧರಣೇಂದ್ರ ಕೆ ಜೈನ್, ಉಜಿರೆ ಜೇಸಿಐ ಪೂರ್ವಾಧ್ಯಕ್ಷ ಜೇಸಿ ರಮೇಶ್ ಪೈಲಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘದ ಅಧ್ಯಕ್ಷ ಶಿವಶಂಕರ್ ಭಟ್ ಕಾರ್ಯಕ್ರಮಕ್ಕೆ ಶುಭ ಕೋರಿದರು.
ವೇದಿಕೆಯಲ್ಲಿ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಜೇಮ್ಸ್ ಕುಟಿನ್ಹಾ, ವಾಣಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಲಕ್ಷ್ಮೀನಾರಾಯಣ್, ಪಟ್ಟಣ ಪಂಚಾಯತ್ ಸದಸ್ಯರಾದ ಮಮತಾ ವಿ. ಶೆಟ್ಟಿ ಮತ್ತು ಲಲಿತಾ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಆಶಾಲತಾ ಶಂಭುಶಂಕರ್, ಅಮಿತಾನಂದ ಹೆಗ್ಡೆ, ಸುರೇಶ್ ಆಚಾರ್, ಕಲ್ಪತರು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಕಂದದ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇಲ್ಲಿನ ಪದಾಧಿಕಾರಿಗಳು ಉಪಸ್ಥಿತರಿದ್ದು ಪೂರಕ ಸಹಕಾರ ನೀಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾ| ಕಾರ್ಯದರ್ಶಿ ರಘುಪತಿ ಕೆ. ರಾವ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಸಂಪನ್ಮೂಲ ಇಲಾಖೆ ಅಧಿಕಾರಿ ಗಣೇಶ್ ಪೈ ಸ್ವಾಗತಿಸಿ ಪ್ರಸ್ತಾವನೆಗೈದರು. ಸೂರ್ಯನಾರಾಯಣ ಪುತ್ತೂರಾಯ ವಂದಿಸಿದರು. ತಾಲೂಕಿನ ವಿಕಲಾಂಗ ಮಕ್ಕಳ ತಪಾಸಣೆ, ಪೂರಕ ಔಷಧಿಗಳ ಒದಗಣೆ, ಪ್ರಯಾಣ ಭತ್ಯೆ ಇತ್ಯಾಧಿ ಸೌಲಭ್ಯ ನೀಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.