ಬೆಳಾಲಿನಲ್ಲಿ ಪತ್ರಿಕಾ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1

Belalinalli Pathrika Dinacharaneಬೆಳಾಲು : ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಮತ್ತುಡಾ| ವಿಸಿ.ರಾಯ್ ಜನ್ಮದಿನಾಚರಣೆ ಜರಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಜಾರಪ್ಪ ಪೂಜಾರಿಯವರು ಮಾತನಾಡುತ್ತಾ ಎಲ್ಲರನ್ನೂ ತಲಪುವ ಪರಿಣಾಮಕಾರಿ ಮಾಧ್ಯಮ ಪತ್ರಿಕೆ. ಈ ಮೂಲಕ ಸಾಮಾನ್ಯ ಜನತೆಗೂ ತಿಳುವಳಿಕೆ ಜಾಗೃತಿ ಮೂಡಿಸುವ ಕೆಲಸ ಆಗುತ್ತದೆ. ಇತ್ತೀಚೆಗೆ ಟಿ.ವಿ., ಮೊಬಾಲ್‌ಗಳಿಂದ ಓದುವ ಹವ್ಯಾಸ ಕಡಿಮೆ ಆಗಿದೆ ಎಂದರೂ ತಿಳುವಳಿಕೆ ಉಳ್ಳವರು ಯಾವತ್ತೂ ಪತ್ರಿಕೆ ಮತ್ತು ಪುಸ್ತಕವನ್ನು ಆಯ್ದುಕೊಳ್ಳುತ್ತಾರೆ. ವಿದ್ಯಾರ್ಥಿಗಳೂ ಆ ಮೂಲಕ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಹಾರೈಸಿದರು.
ಮುಖ್ಯೋಪಾದ್ಯಾಯ ರಾಮಕೃಷ್ಣ ಭಟ್‌ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಮಾರ್ಗದರ್ಶಿ ಶಿಕ್ಷಕ ಕೃಷ್ಣಾನಂದರವರ ನಿರ್ದೇಶನದಲ್ಲಿ ಕಾರ್‍ಯಕ್ರಮ ಜರಗಿತು. ಎಲ್ಲಾ ಶಿಕ್ಷಕ, ಸಿಬ್ಬಂದಿಗಳು ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ದಿನದ ಅಂಗವಾಗಿ ಹಮ್ಮಿಕೊಂಡ ವರದಿಗಾರಿಕೆ ಮತ್ತು ವಾಚನ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಪೌಝಿಯಾ ಸ್ವಾಗತಿಸಿ, ಕೊರಗಪ್ಪ ವಂದಿಸಿದರು. ಪವಿತ್ರಾ ಮತ್ತು ಮೋಕ್ಷಾ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.