ವೀರಕೇಸರಿ ಬೆಳ್ತಂಗಡಿಯ ಸೇವಾ ಯೋಜನೆ ಸೇವಾ ಯೋಜನೆಯಾಗಿ 3 ಕುಟುಂಬಗಳಿಗೆ 45 ಸಾವಿರ ರೂ. ವಿತರಣೆ

Advt_NewsUnder_1
Advt_NewsUnder_1
Advt_NewsUnder_1

Veerakesari sahaya1 ವರ್ಷದಲ್ಲಿ 30 ಸೇವಾ ಯೋಜನೆ ಪೂರೈಕೆ.
 2ನೇ ವರ್ಷಕ್ಕೆ ಪಾದಾರ್ಪಣೆಗೈದ ಜೂನ್ ತಿಂಗಳಲ್ಲಿ 3 ಸೇವಾ ಯೋಜನೆ
 ತೆಂಕಕಾರಂದುರು ಗ್ರಾಮದ ವಿದ್ಯಾರ್ಥಿನಿ ಪವಿತ್ರಳ ಶೈಕ್ಷಣಿಕ ವೆಚ್ಚವಾಗಿ ರೂ.10 ಸಾವಿರ ಧನ ಸಹಾಯ
 ಮರದಿಂದ ಬಿದ್ದು ಮಲಗಿದ್ದಲ್ಲೆ ಇರುವ ಇಳಂತಿಲ ಗ್ರಾಮದ ಪಾರಡ್ಕ ಮನೆಯ ಪದ್ಮನಾಭ ಇವರಿಗೆ ರೂ.15 
ಸಾವಿರ ಧನ ಸಹಾಯ
ಎಲುಬಿನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಎಸ್.ಡಿ.ಎಂ. ಐ.ಟಿ. ಕಾಲೇಜಿನ ವಿಧ್ಯಾರ್ಥಿ ಕಾರ್ತಿಕ್ ಸಾವಂತ್‌ಗೆ ರೂ.20 ಸಾವಿರ ಧನ ಸಹಾಯ

ಬೆಳ್ತಂಗಡಿ : ಸೇವೆಯೇ ನಮ್ಮ ಉಸಿರು ಎಂಬ ದ್ಯೆಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ವೀರ ಕೇಸರಿ ಬೆಳ್ತಂಗಡಿ ಸಂಘಟನೆ ಕಳೆದ 1 ವರ್ಷದ ಅವಧಿಯಲ್ಲಿ ವಿಧ್ಯಾದಾನ ಮತ್ತು ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ 30 ಯೋಜನೆಗಳನ್ನೂ ಪೂರೈಸಿ ಯಶಸ್ವಿ 1ನೇ ವರ್ಷದ ಪಯಣ ಮುಗಿಸಿ 2 ವರ್ಷದ ಪಯಣದಲ್ಲಿ 3 ಕುಟುಂಬಗಳಿಗೆ ನೆರವಾಗುವ ಮೂಲಕ ಈ ತಿಂಗಳಲ್ಲಿ 31 ಮತ್ತು 32 ಮತ್ತು 33ನೇ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿತು.
31 ನೇ ಯೋಜನೆಯಾಗಿ ಬೆಳ್ತಂಗಡಿ ತಾಲೂಕು ತೆಂಕಕಾರಂದುರು ಗ್ರಾಮದ ಪವಿತ್ರ ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅವಳ ಶೈಕ್ಷಣಿಕ ವೆಚ್ಚವಾಗಿ 10,000 ರೂ. ಹಸ್ತಾಂತರಿಸಲಾಯಿತು.
32ನೇ ಯೋಜನೆಯಾಗಿ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪಾರಡ್ಕ ಮನೆಯ ಪದ್ಮನಾಭ ಇವರು 7 ವರ್ಷದ ಹಿಂದೆ ಮರದಿಂದ ಬಿದ್ದು ಮಲಗಿದ್ದಲ್ಲೆ ಇರುವ ಇವರ ಅಸಹಾಯಕತೆ ಕಂಡು ಆರ್ಥಿಕವಾಗಿ ಹಿಂದುಳಿದ ಇವರಿಗೆ ಗುಂಪಿನ ಸದಸ್ಯರ ನೆರವಿನಿಂದ ಸಂಗ್ರಹಿಸಿದ 15,000 ರೂ ಹಸ್ತಾಂತರಿಸಲಾಯಿತು.
33ನೇ ಯೋಜನಯಾಗಿ ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನ 2ನೇ ವರ್ಷದ ವಿಧ್ಯಾರ್ಥಿ ಕಾರ್ತಿಕ್ ಸಾವಂತ್ ಎಂಬ ಹುಡುಗ ಎಲುಬಿನ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು ಮನೆಯಲ್ಲಿ ಆರ್ಥಿಕವಾಗಿ ಬಹಳ ಹಿಂದುಳಿದವರಾಗಿದ್ದು ಇದನ್ನು ಮನಗಂಡ ಅವನ ಸ್ನೇಹಿತರು ಮತ್ತು ಎಸ್.ಡಿ.ಎಂ. ಐ.ಟಿ. ಕಾಲೆಜಿನ ವಿದ್ಯಾರ್ಥಿಗಳು ವೀರ ಕೇಸರಿ ತಂಡಕ್ಕೆ ಮನವಿ ನೀಡಿದ್ದರು. ಈ ಮನವಿಗೆ ಸ್ಪಂದಿಸಿದ ತಂಡ ಎಲ್ಲಾ ಸಹಾಯ ಮನೋಭಾವದ ಮನಸ್ಸುಗಳ ಮೂಲಕ ಸಂಗ್ರಹಿಸಿದ 20,000 ರೂ ಗಳನ್ನೂ ಹಸ್ತಾಂತರಿಸಲಾಯಿತು. ಈ ಮೂರು ಸೇವಾ ಯೋಜನೆಗಳಿಗೆ ಒಟ್ಟಿಗೆ 45,000 ರೂ ಗಳನ್ನೂ ಹಸ್ತಾಂತರ ಮಾಡಲಾಯಿತು ಈ ಯೋಜನೆಯ ಯಶಸ್ಸಿನೊಂದಿಗೆ 33 ಸಹಾಯ ಯೋಜನೆಗಳನ್ನು ತಲುಪಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.