HomePage_Banner_
HomePage_Banner_

ಲಯನ್ಸ್ ಕ್ಲಬ್ ಪ್ರಾಂತ್ಯಾಧ್ಯಕ್ಷರಾಗಿ ಲ| ನಿತ್ಯಾನಂದ ನಾವರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Nithyananda Navara 3ಬೆಳ್ತಂಗಡಿ : 101ನೇ ವರ್ಷದ ಸಂಭ್ರಮದಲ್ಲಿರುವ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಇದರ ಪ್ರಾಂತ್ಯ 10ರ ನೂತನ ಪ್ರಾಂತ್ಯಾಧ್ಯಕ್ಷರಾಗಿ ಲ| ನಿತ್ಯಾನಂದ ನಾವರ ಅವರನ್ನು ನೇಮಕಗೊಳಿಸಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಎಚ್. ಆರ್ ಹರೀಶ್ ಚಿಕ್ಕಮಗಳೂರು ಆದೇಶ ನೀಡಿದ್ದಾರೆ. ಪ್ರಾಂತ್ಯ 10 ರಲ್ಲಿ ಎರಡು ವಲಯಗಳಿದ್ದು ಮೂಡಬಿದ್ರೆ, ಆಲಂಗಾರು, ಶಿರ್ತಾಡಿ, ತೋಡಾರು, ಮಿಜಾರು, ನಾರಾವಿ, ಅಳದಂಗಡಿ, ವೇಣೂರು ಹಾಗೂ ಬೆಳ್ತಂಗಡಿ ಲಯನ್ಸ್ ಕ್ಲಬ್‌ಗಳು ಇವರ ವ್ಯಾಪ್ತಿಗೆ ಒಳಪಡುತ್ತದೆ.
ಅಳದಂಗಡಿ ಸಮೀಪದ ಪಿಲ್ಯ ನಿವಾಸಿ ಪ್ರಗತಿಪರ ಕೃಷಿಕ, ಜೀವವಿಮಾ ಸಲಹೆಗಾರ ಹಾಗೂ ಯುವ ಉದ್ಯಮಿಯಾಗಿರುವ ನಿತ್ಯಾನಂದ ನಾವರ ಅವರು ಬೆಳ್ತಂಗಡಿ ಲಯನ್ಸ್ ಕ್ಲಬ್ ಸದಸ್ಯರಾಗಿ, ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ಅರುಣ್ ಶೆಟ್ಟಿ ಯವರ ಜಿಲಾ ಸಂಪುಟದಲ್ಲಿ ಕನ್ವೀನರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2013-14 ರಲ್ಲಿ ಬೆಳ್ತಂಗಡಿ ಲಯನ್ಸ್ ಅಧ್ಯಕ್ಷರಾಗಿದ್ದಾಗ ಅಳದಂಗಡಿಯಲ್ಲಿ ಪ್ರಯಾಣಿಕರ ತಂಗುದಾಣ, 2015-16 ರಲ್ಲಿ ವಲಯಾಧ್ಯಕ್ಷರಾಗಿದ್ದ ಸಂದರ್ಭ ಪಿಲ್ಯ ಗುಡ್‌ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಗೆ ಆವರಣ ಗೋಡೆ ನಿರ್ಮಾಣ ಶಾಶ್ವತ ಕಾಮಗಾರಿ ನೀಡಿದ ಹೆಗ್ಗಳಿಕೆ ಇವರ ಮೇಲಿದೆ.
ಇವರು ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿ, ನಾವರ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರಾಗಿ, ಕೋಶಾಧಿಕಾರಿಯಾಗಿ, ಯುವವಾಹಿನಿ ಬೆಳ್ತಂಗಡಿ ನಿರ್ದೇಶಕರಾಗಿ, ಗೆಜ್ಜೆಗಿರಿ ನಂದನಬಿತ್ತಿಲ್ ಇದರ ತಾ| ಸಮಿತಿ ಕಾರ್ಯದರ್ಶಿಯಾಗಿ, ಜನಜಾಗೃತಿ ವೇದಿಕೆ ನಾರಾವಿ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.