ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನೂತನ ವ್ಯವಸ್ಥಾಪನ ಸಮಿತಿಗೆ ಅಧಿಕಾರ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

venur mahalingeshwara temple adikara hastatantaraವೇಣೂರು: ಸರ್ಕಾರದ ಆದೇಶ ದಂತೆ ದೇವಳದ ಆಡಳಿತವನ್ನು ಯಾವುದೇ ಭತ್ತೆ ಇಲ್ಲದೆ ಕಳೆದ 2 ವರ್ಷದಿಂದ ನಡೆಸಿದ್ದೇನೆ. ಈ ಪುಣ್ಯದ ಕೆಲಸದಿಂದ ನೆಮ್ಮದಿಯೂ ದೊರಕಿದೆ. ಇಲ್ಲಿನ ದೇವಳದ ಯಾವುದೇ ಆದಾಯ ಸರ್ಕಾರದ ಖಜಾನೆಗೆ ಸೇರಿಲ್ಲ. ಭಕ್ತರ ಹಣವನ್ನು ದೇವಳದ ಅಭಿವೃದ್ಧಿಗಾಗಿಯೇ ವಿನಿಯೋಗಿಸಲಾಗುತ್ತಿದೆ ಎಂದು ವೇಣೂರು ಶ್ರೀ ಮಹಾಲಿಂ ಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ಹೇಳಿದರು.
ಅವರು ಜು. 3ರಂದು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಯ್ಕೆಯಾದ ನೂತನ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಗೆ ರಾಜಕೀಯ ರಹಿತವಾಗಿ ಸಹಕಾರ ನೀಡುವವರು ಇಲ್ಲಿದ್ದಾರೆ. ಇದರಿಂದಲೆ ದೇವಳದ ಸುಧಾರಣೆಗೆ ಅವಕಾಶ ಸಿಕ್ಕಿದೆ. ಸರ್ಕಾರದ ಸೂಚನೆಯಂತೆ ಸಿಸಿಟಿವಿ, ಸಿಡಿಲು ನಿರೋಧಕ ಉಪಕರಣ ಅಳವಡಿಸಲಾಗಿದೆ. ವ್ಯವಸ್ಥಿತ ಕಚೇರಿ, ಅಡುಗೆ ಪಾತ್ರೆಗಳು, ಅಡುಗೆ ಶೆಡ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಮುಂದಿನ ವ್ಯವಸ್ಥಾಪನ ಸಮಿತಿ ದೇವಳದ ಜೀರ್ಣೋದ್ಧಾರ ಸಮಿತಿ ರಚನೆಗೆ ಒತ್ತು ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದೇವಳದ ಮಾಜಿ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಮಾತನಾಡಿ, ದೇವಳದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದವೇ ವ್ಯವಸ್ಥಾಪನ ಸಮಿತಿಗೆ ಆಯ್ಕೆಯಾಗಿರುವುದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ವ್ಯವಸ್ಥಾಪನ ಸಮಿತಿ ನೂತನ ಅಧ್ಯಕ್ಷ ಭಾಸ್ಕರ ಬಲ್ಯಾಯ, ಪ್ರಧಾನ ಅರ್ಚಕ ಟಿ. ವಿಷ್ಣುಮೂರ್ತಿ ಭಟ್, ಸದಸ್ಯರುಗಳಾದ ಸತೀಶ್ ಹೆಗ್ಡೆ, ಶಶಿಧರ ಶೆಟ್ಟಿ, ಶಿವಪ್ರಭಾ ರಾವ್, ವಿಮಲ ಚಂದ್ರ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯ ಅಶೋಕ್ ಪಾಣೂರು ಸ್ವಾಗತಿಸಿ ದೇವಳದ ಸಿಬ್ಬಂದಿ ಕೊರಗಪ್ಪ ಎಂ. ವಂದಿಸಿದರು. ಭಾಸ್ಕರ ಪೂಜಾರಿ ನಾಯರ್‍ಮೇರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.