ಕೊಲ್ಲಿ-ಕಾಜೂರು ರೂ.2 ಕೋಟಿ ವೆಚ್ಚದ ನೂತನ ಸೇತುವೆ ಲೋಕಾರ್ಪಣೆ

Killuru sethuve udgatane

Killuru sethuveತಾಲೂಕಿಗೆ ಈ ವರ್ಷ ಅತೀ ಹೆಚ್ಚು ಕಾಮಗಾರಿ ಮಂಜೂರು: ಬಂಗೇರ

ಮಿತ್ತಬಾಗಿಲು : ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾದ ಕೊಲ್ಲಿ-ಕಾಜೂರು ಸಂಪರ್ಕದ ನೇತ್ರಾವತಿ ಹೊಳೆಗೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಮೂಲಕ ಸುಮಾರು ರೂ.2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆಯನ್ನು ಜು.4ರಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಕೆ. ವಸಂತ ಬಂಗೇರ ಅವರು ಉದ್ಘಾಟಿಸಿ ಲೋಕಾರ್ಪಣೆಗೈದರು.
ನಂತರ ಮಾತನಾಡಿದ ಶಾಸಕರು ಬೆಳ್ತಂಗಡಿ ತಾಲೂಕಿಗೆ ಬೇರೆ, ಬೇರೆ ಯೋಜನೆಯಲ್ಲಿ 11 ಸೇತುವೆಗಳು ಮಂಜೂರಾಗಿದ್ದು, ಈ ದಿನ ಕಣಾಲ್‌ನಲ್ಲಿ ರೂ.60 ಲಕ್ಷ, ಕುಂಡಡ್ಕದಲ್ಲಿ ರೂ.38 ಲಕ್ಷ, ಕಾಜೂರಿನಲ್ಲಿ ರೂ.2 ಕೋಟಿ ವೆಚ್ಚದ ಸೇತುವೆ ಉದ್ಘಾಟನೆಯಾಗಿದೆ. ಪುದುವೆಟ್ಟು ಗ್ರಾಮದಲ್ಲಿ ಅಲ್ಲಿಯ ಜನರ ಹಲವು ವರ್ಷಗಳ ಬೇಡಿಕೆಯಾದ ಸೇತುವೆಯನ್ನು ರೂ.7.50 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಈಗಾಗಲೇ ಉದ್ಘಾಟನೆ ಮಾಡಿದ್ದೇನೆ ಎಂದು ತಿಳಿಸಿದರು.
ತಾಲೂಕಿನ ಎಲ್ಲಾ ಲೋಕೋಪಯೋಗಿ ಇಲಾಖಾ ರಸ್ತೆ, ರಾಷ್ಟ್ರೀಯ ಹೆದ್ದಾರಿಯನ್ನು ಪೂರ್ತಿ ಡಾಮರೀಕರಣಗೊಳಿ ಸಲಾಗಿದೆ. ಮಾಜಿ ಶಾಸಕರಾಗಿದ್ದ ವೈಕುಂಠ ಬಾಳಿಗರು ತಾಲೂಕಿಗೆ ತಂದಿದ್ದ ವಿದ್ಯುತ್‌ನ್ನು ತಾಲೂಕಿನ 81 ಗ್ರಾಮಗಳ ಮನೆ, ಮನೆಗೆ ಕೊಂಡೊಯ್ಯುವ ಕೆಲಸ ಮಾಡಿದ್ದೇನೆ. ಗುರುವಾಯನಕೆರೆ ತನಕ ಬರುತ್ತಿದ್ದ ಖಾಸಗಿ ಬಸ್ಸನ್ನು ಬೆಳ್ತಂಗಡಿಗೆ ತರಿಸಿದ್ದೇನೆ ಈ ರೀತಿ ಎಲ್ಲಾ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಸೇತುವೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದೇನೆ. 1983ರಲ್ಲಿ ತಾಲೂಕು ಹೇಗಿತ್ತು, 2017 ಈಗ ಹೇಗಿದೆ ಎಂಬುದನ್ನು ಜನರೇ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇನ್ನೂ ಅನೇಕ ಬೇಡಿಕೆಗಳು ಜನರಿಂದ ಬರುತ್ತಿದ್ದು, ಇವುಗಳನ್ನು ಕ್ರೋಢಿಕರಿಸಿ ಮುಖ್ಯಮಂತ್ರಿ, ಗ್ರಾಮೀಣ ಅಭಿವೃದ್ಧಿ ಸಚಿವರು, ಲೋಕೋಪಯೋಗಿ ಇಲಾಖಾ ಸಚಿವರಿಗೆ ಕಳುಹಿಸಿದ್ದೇನೆ. ಇವುಗಳು ಶೀಘ್ರವಾಗಿ ಮಂಜೂರು ಆಗಲಿದೆ. ತಾಲೂಕಿಗೆ ಅತೀ ಹೆಚ್ಚು ಕಾಮಗಾರಿ ಈ ವರ್ಷ ಮಂಜೂರು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದ.ಕ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಹಾಗೂ ತಾ.ಪಂ ಮಾಜಿ ಅಧ್ಯಕ್ಷ ಮುಕುಂದ ಸುವರ್ಣ ಅವರು ಮಾತನಾಡಿ, ಕೊಲ್ಲಿ-ಕಾಜೂರು ಸೇತುವೆ 25 ವರ್ಷಗಳ ಬೇಡಿಕೆ, ಇದಕ್ಕಾಗಿ ಕಾಜೂರು ಉರೂಸ್‌ಗೆ ಬರುತ್ತಿದ್ದ ಅನೇಕ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾ ಗಲಿಲ್ಲ, ಆದರೆ ಶಾಸಕ ವಸಂತ ಬಂಗೇರ ಅವರು ಇದನ್ನು ಮಾಡಿಸಿ ತೋರಿಸಿದ ಧೀಮಂತ ಶಾಸಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾ.ಪಂ. ಸದಸ್ಯ ಜಯರಾಮ ಅಲಂಗಾರು ಮಾತನಾಡಿ, ಕೊಲ್ಲಿ-ಕಾಜೂರಿನಲ್ಲಿ ಸೇತುವೆ ನಿರ್ಮಿಸಿದ ಶಾಸಕರಿಗೆ ಈ ಭಾಗದ ಜನರ ಪೂರ್ಣ ಆಶೀರ್ವಾದ ದೊರೆಯಲಿದೆ ಎಂದರು. ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಕಾಮತ್ ಮಾತನಾಡಿ ಶಾಸಕ ವಸಂತ ಬಂಗೇರರು ಸಾಧನೆಯ ಶಕಪುರುಷರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಂಗಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ ಮಾತನಾಡಿ ದಿಡುಪೆ-ಎಳನೀರು ರಸ್ತೆ ಬಂಗೇರರ ಸತತ ಪ್ರಯತ್ನದಿಂದ ಕೆಲ ವರ್ಷಗಳ ಹಿಂದೆ ಮಂಜೂರಾಗಿ ಆರಂಭಕ್ಕೆ ಎಲ್ಲಾ ತಯಾರಿಯಾದರೂ, ವ್ಯಕ್ತಿಯೋರ್ವರ ಅಡ್ಡಿಯಿಂದ ಇದು ಸಾಧ್ಯವಾಗದೇ ಇಂದಿಗೂ ಅದೇ ಸ್ಥಿತಿಯಲ್ಲಿದೆ ಈ ರಸ್ತೆ ಹೇಗಾದರೂ ಮಾಡಿ ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ತಾ.ಪಂ ಉಪಾಧ್ಯಕ್ಷೆ ವೇದಾವತಿ, ಬೆಳ್ತಂಗಡಿ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ ಅಜಿಲ, ಅಭಿಯಂತರಾದ ತೌಸೀಫ್ ಅಹಮ್ಮದ್, ಗುರುಪ್ರಸಾದ್, ಜಿತೇಂದ್ರ, ಬಂಗಾಡಿ ಸಿ.ಎ ಬ್ಯಾಂಕಿನ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಕಾಜೂರು ದರ್ಗಾದ ಅಧ್ಯಕ್ಷ ಪಿ.ಎ ಮಹಮ್ಮದ್, ಗ್ರಾ.ಪಂ ಸದಸ್ಯೆ ಪ್ರಮೀಳಾ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗ್ರೇಸಿಯಾನ್ ವೇಗಸ್, ಬಿ. ಹೆಚ್ ಹಮೀದ್, ಮಲವಂತಿಗೆ ಗ್ರಾ.ಪಂ ಸದಸ್ಯ ಕೆ.ಯು ಮಹಮ್ಮದ್, ಬಂಗಾಡಿ ಸಿ.ಎ ಬ್ಯಾಂಕ್ ನಿರ್ದೇಶಕ ವೀರೇಶ್ವರ ಮರಾಠೆ, ಹಿರಿಯರಾದ ದಾಸಪ್ಪ ಗೌಡ, ತಾ.ಪಂ ಮಾಜಿ ಸದಸ್ಯ ಗಣೇಶ್ ಕಣಾಲ್, ನಾವೂರು ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಗೌಡ, ಎನ್.ಎಂ ಯಾಕೂಬ್, ಯೂಸುಫ್ ಶರೀಫ್, ನಿಝಾಮ್, ಗುತ್ತಿಗೆದಾರ ಉದಯಕುಮಾರ್ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು. ಕೊಲ್ಲಿ ದೇವಸ್ಥಾನದ ಅರ್ಚಕ ಶಂಕರನಾರಾಯಣ ತೋಡ್ತಿಲ್ಲಾಯ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಅನೂಫ್ ಜೆ. ಪಾಯಸ್ ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.