ಹೆದ್ದಾರಿ ಡಿನೋಟಿಫೈ ರಾಜ್ಯ ಸರಕಾರಕ್ಕೆ ಅಧಿಕಾರ ನ. ಪಂ. ವ್ಯಾಪ್ತಿಯ ಮದ್ಯದಂಗಡಿಗಳು ಸೇಫ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

liquor-medಬೆಳ್ತಂಗಡಿ: ನಗರ ಪ್ರದೇಶದ ಮೂಲಕ ಹಾದು ಹೋಗುವ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಜು.೪ರಂದು ಸುಪ್ರೀಂ ಕೋರ್ಟು ಅಭಿಪ್ರಾಯ ಪಟ್ಟಿದ್ದರಿಂದ ಬೆಳ್ತಂಗಡಿ ನಗರದ ಮೂಲಕ ಹಾದು ಹೋಗುವ ಹೆದ್ದಾರಿ ಬದಿಯ ಮದ್ಯದಂಗಡಿ ಹಾಗೂ ಬಾರ್ ಮಾಲಕರು ನಿಟ್ಟುಸಿರು ಬಿಡುವಂತಾಗಿದೆ.
ಬೆಳ್ತಂಗಡಿ ನಗರ ಪಂಚಾಯತು ವ್ಯಾಪ್ತಿಯಲ್ಲಿ ಶ್ವೇತ, ಅನಿಲ್, ತ್ರೀ ಸ್ಟಾರ್ ಸೇರಿದಂತೆ ಮೂರು ಮದ್ಯ ಮಾರಾಟದ ಅಂಗಡಿಗಳು ಹಾಗೂ ಡಿ.ಕೆ. ಮತ್ತು ಗಾರ್ಡನ್ ಸೇರಿ ಎರಡು ಬಾರ್‌ಗಳು ಕಾರ್ಯಾಚರಿಸುತ್ತಿದ್ದು, ಸುಪ್ರೀಂ ಕೋರ್ಟು ನಗರ ವ್ಯಾಪ್ತಿಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರ ಇದೆ ಎಂದು ಅಭಿಪ್ರಾಯ ಪಟ್ಟಿರುವುದರಿಂದ ಇದೀಗ ಬೀಗ ಜಡಿಯಲಾಗಿದ್ದ ಈ ಮದ್ಯಮಾರಾಟದ ಅಂಗಡಿಗಳು ರಾಜ್ಯ ಸರಕಾರ ಡಿನೋಟಿಫೈ ಮಾಡಿದ ನಂತರ ಪರವಾನಿಗೆ ನವೀಕರಣಗೊಂಡು ಎಂದಿನಂತೆ ಮತ್ತೆ ಹಿಂದೆ ಇದ್ದ ಸ್ಥಳಗಳಲ್ಲೇ ತೆರೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಹೆದ್ದಾರಿಗಳ ಬದಿಯಲ್ಲಿ ಮದ್ಯದ ಅಂಗಡಿಗಳು ಇರುವುದು ಅಪಘಾತಗಳಿಗೆ ಕಾರಣವಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಬೇಕೆಂದು ಕೆಲ ನಾಗರಿಕರು ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿದ
ಹಿನ್ನೆಲೆಯಲ್ಲಿ ಇದರ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟು ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು 20 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪಟ್ಟಣಗಳಲ್ಲಿ ಹೆದ್ದಾರಿಯಿಂದ 500 ಮೀಟರ್‌ದೂರ ಅದಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಊರುಗಳಲ್ಲಿ 220 ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕು ಎಂದು ಆದೇಶ ನೀಡಿತ್ತು. ಇದರನ್ವಯ ಜೂ.30ಕ್ಕೆ ಪರವಾಣಿಗೆ ಕೊನೆಗೊಂಡ ಮದ್ಯಮಾರಾಟದ ಅಂಗಡಿಗೆ ಅಬಕಾರಿ ಇಲಾಖೆ ಬೀಗ ಜಡಿದಿತ್ತು.
ಪಂಜಾಬ್ ಸರಕಾರ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧದ ನಿಯಮದಿಂದ ಪಾರಾಗಲು ಚಂಡೀಗಢದ ನಗರ ವ್ಯಾಪ್ತಿಯಲ್ಲಿರುವ ಹೆದ್ದಾರಿಗಳನ್ನು ಜಿಲ್ಲಾ ಮತ್ತು ನಗರ ರಸ್ತೆಗಳೆಂದು ಡಿನೋಟಿಫೈ ಮಾಡಿತ್ತು. ಇದನ್ನು ಪ್ರಶ್ನಿಸಿ ಎನ್‌ಜಿಒ ವೊಂದು ಸ್ಥಳೀಯ ಹೈಕೋರ್ಟುಗೆ ಹೋಗಿತ್ತು. ಆದರೆ ಹೈಕೋರ್ಟು ತನಿಖೆ ನಡೆಸಿ ಸರಕಾರದ ಆದೇಶದ ಬಗ್ಗೆ ಸಕಾರಾತ್ಮಕ ತೀರ್ಪು ನೀಡಿದ್ದರಿಂದ, ಎನ್‌ಜಿಒ ಸುಪ್ರೀಂ ಕೋರ್ಟಿಗೆ ಮೇಲ್ಮನಿ ಸಲ್ಲಿಸಿತ್ತು.
ನ್ಯಾಯಾಲಯದಲ್ಲಿ ಮುಖ್ಯ ನ್ಯಾ| ಜೆ.ಎಸ್. ಖೇಹರ್, ನ್ಯಾ| ಡಿ.ವೈ ಚಂದ್ರಚೂಡ್ ಅವರಿದ್ದ ದ್ವಿಸದಸ್ಯ ಪೀಠ, ನಗರದ ಹೊರಗೆ ಇರುವ ಹೆದ್ದಾರಿಗಳಲ್ಲಿ ಚಾಲಕರು ವಾಹನಗಳನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುವುದರಿಂದ, ಕುಡಿದು ವಾಹನ ಓಡಿಸುವುದರಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿದೆ ಎಂಬ ಕಾರಣಕ್ಕಾಗಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಆದರೆ ನಗರ ಮಿತಿಯೊಳಗೆ ಇರುವ ಹೆದ್ದಾರಿಗಳಲ್ಲಿ ವಾಹನಗಳನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಲು ಸಾಧ್ಯವಿಲ್ಲ ಇಲ್ಲಿಯ ಹೆದ್ದಾರಿಗಳನ್ನು ರಾಜ್ಯ ಸರಕಾರ ಡಿನೋಟಿಫೈ ಮಾಡಿದರೂ ತಪ್ಪಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೆ ಮುಂದಿನ ವಿಚಾರಣೆಯು ಜು.11ರಂದು ನಡೆಯಲಿದ್ದು, ಅದರೊಳಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ. ರಾಜ್ಯ ಸರಕಾರ ಹೆದ್ದಾರಿಗಳನ್ನು ಡಿನೋಟಿಫೈ ಮಾಡಲು ಒಂದೆರಡು ತಿಂಗಳು ಬೇಕಾಗಬಹುದು. ಈಗಾಗಲೇ ರಾಜ್ಯ ಸರಕಾರ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಬಗ್ಗೆಯೂ ಕೇಂದ್ರ ಬಳಿ ಪ್ರಸ್ತಾಪಿಸಿದೆ. ಆದರೆ ಕೇಂದ್ರ ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.