ಕಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ : ಕಾರು ಚಾಲಕನಿಗೆ ಗಾಯ

car dikki 1

car dikkiತಣ್ಣೀರುಪಂಥ : ಕಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಡಿಕ್ಕಿಯಾದ ಪರಿಣಾಮ ಕಾರು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಣ್ಣೀರುಪಂಥ ಗ್ರಾಮ ಕಲ್ಲೇರಿಯಲ್ಲಿ ನಡೆದಿದೆ.
ಕಡಬದ ಕಳಾರ ನಿವಾಸಿ ಮೋಹನ್ ಪೈ ಎಂಬವರ ಮಗ ಸಾಯಿಪ್ರಸನ್ನ ಪೈ(42ವ) ಗಂಭೀರವಾಗಿ ಗಾಯಗೊಂಡವರು. ಸಾಯಿ ಪ್ರಸನ್ನ ಪೈಯವರು ಜೂ. 30ರಂದು ಬೆಳ್ತಂಗಡಿ ಕಡೆಯಿಂದ ನ್ಯಾನೋ ಕಾರಿನಲ್ಲಿ ಉಪ್ಪಿನಂಗಡಿ ಕಡೆಗೆ ಬರುತ್ತಿರುವಾಗ ಧರ್ಮಸ್ಥಳದಿಂದ ಪುತ್ತೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದೆ. ಪ್ರಸನ್ನ ಪೈ ಯವರನ್ನು ಸ್ಥಳೀಯರ ಸಹಕಾರದಿಂದ ಉಪ್ಪಿನಂಗಡಿಯ ಖಾಸಗಿ ಆಸ್ಪತೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.