ಧರ್ಮಸ್ಥಳದಲ್ಲಿ ಯಕ್ಷದೇವ ವಿಶಂತಿ ಕಲೋತ್ಸವ ಯಕ್ಷಗಾನ ಕಲೆಯಿಂದ ಸಂಸ್ಕೃತಿಯ ಸಂವರ್ಧನೆ : ಡಾ| ಬಿ. ಯಶೋವರ್ಮ

Advt_NewsUnder_1
Advt_NewsUnder_1
Advt_NewsUnder_1

Dharmasthala yakshadeva vishanthiಉಜಿರೆ : ನಾವು ಶಿಕ್ಷಣ ಹಾಗೂ ಆರ್ಥಿಕವಾಗಿ ಬೆಳೆದಿದ್ದೇವೆ. ಆದರೆ ಸಾಂಸ್ಕೃತಿಕವಾಗಿ ಬೆಳೆಯಲು ಮಣ್ಣಿನ ಕಲೆಯಿಂದ ಮಾತ್ರ ಸಾಧ್ಯ. ಯಕ್ಷಗಾನದಲ್ಲಿ ಮಣ್ಣಿನ ವಾಸನೆಯಿದೆ. ಇಂದು ಟಿ.ವಿ. ಯಲ್ಲಿ ಬರುತ್ತಿರುವ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ನಾಶ ಮಾಡುವ ಕಾರ್ಯಕ್ರಮಗಳಾಗುತ್ತಿವೆ. ಸಮಾಜದ ಅಂತರಂಗದಲ್ಲಿ ಸಂಸ್ಕೃತಿಯ ಸಂವರ್ದನೆ, ಪರಿವರ್ತನೆಯಾಗಬೇಕಾಗಿದೆ. ಯಕ್ಷಗಾನ ಕಲೆಯಿಂದ ನಮ್ಮ ಸಂಸ್ಕೃತಿಯ ಉಜ್ವಲ ಭವಿಷ್ಯವನ್ನು ನಿರೀಕ್ಷಿಸಬಹುದೆಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ನುಡಿದರು. ಅವರು ಜೂ. 27 ರಂದು ಧರ್ಮಸ್ಥಳ ಶ್ರೀ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ವಿಶಂತಿ ಕಲೋತ್ಸವ ಸರಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಮಾ ಉಗ್ರಾಣ ಮುತ್ಸದ್ದಿ ಭುಜಬಲಿ ಧರ್ಮಸ್ಥಳ ಕಾರ್ಯಕ್ರಮ ಉದ್ಘಾಟಿಸಿ, ಧರ್ಮಸ್ಥಳ ಪ್ರೌಢಶಾಲೆ ಮುಖ್ಯ ಶಿಕ್ಷಕ ಜನಾರ್ದನ ತೋಳ್ಪಾಡಿತ್ತಾಯ ಯಕ್ಷಗಾನ ಬಣ್ಣದ ವೇಷಧಾರಿ ದಿ| ಜನಾರ್ದನ ರಾವ್ ಕನ್ಯಾಡಿ ಸಂಸ್ಮರಣೆ ಗೈದರು. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಯಕ್ಷಗಾನ ಭಾಗವತ ದಿವಾಕರ ಆಚಾರ್ಯರನ್ನು ಸಂಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹರಿದಾಸ ಗಾಂಭೀರ ಸಮ್ಮಾನಿತರನ್ನು ಅಭಿನಂದಿಸಿದರು. ಯಕ್ಷದೇವ ಮಿತ್ರ ಕಲಾ ಮಂಡಳಿಯ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಮೂಡಬಿದ್ರಿ, ಹಿರಿಯ ಭಾಗವತ ಜಯರಾಮ ಕುದ್ರೆಂತ್ತಾಯ ಮತ್ತು ಮಹೇಶ್ ರಾವ್ ಕನ್ಯಾಡಿ ಉಪಸ್ಥಿತರಿದ್ದರು. ಯಕ್ಷಭಾರತಿ ಅಧ್ಯಕ್ಷ ಹರಿದಾಸ ಗಾಂಭೀರ, ಯಕ್ಷ ಮಿತ್ರ ಮಂಡಳಿಯ ರತ್ನವರ್ಮ ಜೈನ್ ಮತ್ತಯ ತಿರುಳು ಶಿವಳ್ಳಿ ಸಭಾ ಧರ್ಮಸ್ಥಳ ವಲಯಾಧ್ಯಕ್ಷ ಗಿರೀಶ ಕುದ್ರೆಂತಾಯ ಕಾರ್ಯಕ್ರಮ ಸಂಯೋಜಿಸಿದ್ದರು. ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯ ಕಾರ್ಯಾಧ್ಯಕ್ಷ ದೇವಾನಂದ ಭಟ್ ಸ್ವಾಗತಿಸಿ, ಪ್ರಸ್ತಾವಿಸಿದರು. ಶ್ರೀನಿವಾಸ್ ರಾವ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸುನಿಲ್ ಕುಮಾರ್ ಜೈನ್ ವಂದಿಸಿದರು. ಉದಯೋನ್ಮುಖ ಕಲಾವಿದರಿಂದ ಯಕ್ಷವನಿತಾ ಗಾನ ವೈಭವ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.