ತಾಲೂಕು ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಮಹಾಸಭೆ ನೂತನ ಅಧ್ಯಕ್ಷರಾಗಿ ಅಜಯ್, ಕಾರ್ಯದರ್ಶಿ ವಿನ್ಸಿ

suddi COLORpdf BLDY.p65ಬೆಳ್ತಂಗಡಿ : ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಇದರ ತಾಲೂಕು ಅಧ್ಯಕ್ಷರಾಗಿ ಅಜಯ್ ಎ.ಜೆ ಬೆಳ್ತಂಗಡಿ ಇವರು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. ಕರ್ನಾಟಕ ರಾಜ್ಯ ಮಲೆಯಾಲಿ ಕ್ರಿಶ್ಚಿಯನ್ ಅಸೋಸಿಯೇಶನ್ ರಾಜ್ಯಾ ಧ್ಯಕ್ಷ ಎ.ಸಿ ಜಯರಾಜ್ ಅವರ ಅಧ್ಯಕ್ಷತೆಯಲ್ಲಿ ಜೂ. 27 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಪ್ರ. ಕಾರ್ಯದರ್ಶಿಯಾಗಿ ವಿನ್ಸಿ ಬಂಗಾಡಿ, ಸಂಘಟನಾ ಕಾರ್ಯ ದರ್ಶಿಗಳಾಗಿ ಬರ್ಕ್‌ಮೆನ್ಸ್ ಕೊಯ್ಯೂರು ಮತ್ತು ಫ್ರಾನ್ಸಿಸ್ ಚೆರಿಯನ್ ಬಂಗಾಡಿ, ಉಪಾಧ್ಯಕ್ಷರಾಗಿ ಬಿಜು ವೇಣೂರು, ಸೆಬಾಸ್ಟಿಯನ್ ಕಾಯರ್ತಡ್ಕ, ಜೋಜೋ ನಿರ್ಮಲ ನೆರಿಯ, ಕುರಿಯಕೋಸ್ ಶಿಬಾಜೆ, ಮತ್ತು ಜೋನಿ ಗಂಡಿಬಾಗಿಲು, ಜೊತೆ ಕಾರ್ಯದರ್ಶಿಯಾಗಿ ಜೋಸ್ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಬಿ.ಸಿ ಜೇಮ್ಸ್ ಕಾಶಿಬೆಟ್ಟು ಇವರು ಆಯ್ಕೆಯಾಗಿದ್ದಾರೆ. ಇದೇ ಸಂದರ್ಭ ಜಿಲ್ಲಾ ಸಮಿತಿ ಸದಸ್ಯರಾಗಿ ಎ.ಸಿಮ್ಯಾಥ್ಯೂ ಅವರನ್ನು ಮೇಲ್ಘಟಕಕ್ಕೆ ಆಯ್ಕೆಗೊಳಿಸಲಾಯಿತು.
ಯುವ ವಿಭಾಗದ ಅಧ್ಯಕ್ಷರಾಗಿ ಸಜೇಶ್ ಧರ್ಮಸ್ಥಳ, ಪ್ರ. ಕಾರ್ಯದರ್ಶಿಯಾಗಿ ಜಸ್ಟಿನ್ ಕೊಕ್ಕಡ, ಉಪಾಧ್ಯಕ್ಷರಾಗಿ ಶಿಂಟೋ ಶಿಬಾಜೆ ಇವರನ್ನು ಆರಿಸಲಾಯಿತು.
ರಾಜ್ಯ ಸಮಿತಿ ಕಾರ್ಯದರ್ಶಿ ಸಾಬು, ಜಿಲ್ಲಾ ಸಮಿತಿಯ ಶಿಬಿ ಧರ್ಮಸ್ಥಳ, ಆಗಸ್ಟಿನ್ ನಡ, ವಿ. ಜೆ ಸೆಬಾಸ್ಟಿಯನ್ ಕೊಕ್ಕಡ, ಶಿಜೋ ಜೋಸ್ ವೇಣೂರು, ರೆಜಿ ಟಿ ಕುರಿಯನ್ ವೇಣೂರು, ಜೇಮ್ಸ್ ಮಂಜೊಟ್ಟಿ, ಆಂಟನಿ ಬೆಳ್ತಂಗಡಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.