ಬೆಳ್ತಂಗಡಿ : ಮಗನೊಬ್ಬ ಹೆತ್ತ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಂಚಲು ಪ್ರಯತ್ನ ನಡೆಸಿ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಜೂ. 18ರಂದು ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ಎಂಬಲ್ಲಿ ವರದಿಯಾಗಿದೆ. ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ಎಂಬಲ್ಲಿ ವಾಸವಾಗಿರುವ, ಮೆಸ್ಕಾಂ ನಿವೃತ್ತ ಸಹಾಯಕ ಇಂಜಿನಿಯರ್ ಕೂಸಪ್ಪ ಗೌಡ ಎಂಬವರ ಪತ್ನಿ ರಾಧಮ್ಮ (55ವ) ಎಂಬವರು ಗಂಭೀರವಾಗಿ ಗಾಯಗೊಂಡವರು. ಇವರ ಮಗ ಹರೀಶ್ ಗೌಡ ಮತ್ತು ಆತನ ಪತ್ನಿ ದಿವ್ಯಪ್ರಭಾ ಎಂಬವರು ಸೇರಿಕೊಂಡು ರಾಧಮ್ಮರವರ ಮೇಲೆ ಹಲ್ಲೆ ನಡೆಸಿದಲ್ಲದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನ ನಡೆಸಿರುವ ಧುರುಳರು. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ರಾಧಮ್ಮರವರನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.