ಜಲಮೂಲಗಳ ಸಂರಕ್ಷಣೆಗೆ ಕ್ಷೇತ್ರದಿಂದ ಪ್ರೋತ್ಸಾಹ : ಡಾ.ಹೆಗ್ಗಡೆ

dharmasthala betiಕೊಕ್ಕಡ : ನೇತ್ರಾವತಿ ನದಿ ಮೂಲಗಳಿಗೆ ಕೋಳಿ ತ್ಯಾಜ್ಯಗಳನ್ನು ನಿರಂತರವಾಗಿ ಎಸೆದು ಮಲಿನ ಗೊಳಿಸುತ್ತಿರುವ ವಿರುದ್ದ ಇತ್ತೀಚೆಗೆ ಗೋಳಿತೊಟ್ಟುವಿನಲ್ಲಿ ಸಂಘಟಿಸಲಾದ ಬೃಹತ್ ಜನಜಾಗೃತಿ ಸಭೆಯ ಬಳಿಕ ನದಿ ಮೂಲಗಳನ್ನು ರಕ್ಷಿಸುವ ಸಲುವಾಗಿ ರಚನೆಗೊಂಡ ದ.ಕ. ಜಿಲ್ಲಾ ಜಲಮೂಲಗಳ ಸಂರಕ್ಷಣಾ ವೇದಿಕೆಯ ವತಿಯಿಂದ ಜೂ.4 ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡಿ ಗೋಳಿತೊಟ್ಟಿನಲ್ಲಿ ಮೇ.17 ರಂದು ನಡೆದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ ಬಗ್ಗೆ ವಿವರವನ್ನು ಸಲ್ಲಿಸಲಾಯಿತು.
ಈ ಸಂದರ್ಭ ಹೆಗ್ಗಡೆಯವರು ಮಾತನಾಡಿ ಪರಿಸರವನ್ನು ಸ್ವಚ್ಚವಾಗಿಡುವಂತಹ ಜಾಗೃತಿಯನ್ನು ಮೂಡಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ. ಇಚಿಲಂಪಾಡಿಯ ನೀತಿ ಟ್ರಸ್ಟ್‌ನ ಮೂಲಕ ಆರಂಭವಾದ ಈ ಜಲಮೂಲಗಳ ಸಂರಕ್ಷಣೆಯ ಕಾರ್ಯಕ್ಕೆ ಶ್ರೀ ಕ್ಷೇತ್ರದಿಂದಲೂ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಂಗ ಸಂಸ್ಥೆ ಜನಜಾಗೃತಿ ವೇದಿಕೆ ನೇತೃತ್ವದಲ್ಲಿ ಮುಂದೆಯೂ ಇಂತಹ ಜಲಮೂಲಗಳನ್ನು ಸಂರಕ್ಷಿಸುವ ಅಭಿಯಾನ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಈಗ ರಚನೆ ಗೊಂಡ ಸಮಿತಿಯ ವತಿಯಿಂದ ಜಿಲ್ಲಾ ಸಂಸದರಿಗೆ ಮತ್ತು ಶಾಸಕರುಗಳಿಗೆ ಪತ್ರವನ್ನು ಬರೆದು ಸಂಬಂದಪಟ್ಟ ಅಧಿಕಾರಿಗಳಿಗೆ ಪ್ರಧಾನ ಮಂತ್ರಿಯವರ ಸ್ವಚ್ಚ ಭಾರತ ಯೋಜನೆಯ ಅನುಷ್ಟಾನದಲ್ಲಿ ಜಲ ಮೂಲಗಳನ್ನು ಸಂರಕ್ಷಿಸುವ ವಿಷಯಗಳನ್ನೂ ಸೇರಿಸಿಕೊಳ್ಳುವಂತೆ ಅನುಷ್ಠಾನಿಸಲು ಮಾಹಿತಿ ನೀಡಿದರು.  ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಸೀತರಾಮ ಶೆಟ್ಟಿ ,ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ನೇತ್ರಾವತಿ ನದಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಉಪ್ಪಿನಂಗಡಿಯ ವೈದ್ಯರಾದ ಡಾ. ನಿರಂಜನ ರೈ, ನೂತನವಾಗಿ ರಚನೆಗೊಂಡಿರುವ ದ.ಕ. ಜಿಲ್ಲಾ ಜಲಮೂಲಗಳ ಸಂರಕ್ಷಣಾ ವೇದಿಕೆಯ ಅಧ್ಯಕ್ಷ, ಜನಜಾಗೃತಿ ವೇದಿಕೆ ಪುತ್ತೂರು ಇದರ ಅಧ್ಯಕ್ಷರೂ ಆಗಿರುವ ಪದ್ಮನಾಭ ಶೆಟ್ಟಿ, ಕಾರ್ಯಾಧ್ಯಕ್ಷ ರವಿಚಂದ್ರ ಗೌಡ ಹೊಸವೊಕ್ಲು, ಪ್ರಧಾನ ಕಾರ್ಯದರ್ಶಿ ನೀತಿ ಟ್ರಸ್ಟ್ ಸಂಘಟನೆಯ ರಾಜ್ಯಾಧ್ಯಕ್ಷ ಜಯನ್ ಟಿ. ಇಚಿಲಂಪಾಡಿ, ಉಪ್ಪಾರಪಳಿಕೆ ಶ್ರದ್ದಾ ಯುವಕ ಮಂಡಲದ ಅಧ್ಯಕ್ಷ ಯೋಗೀಶ್ ಆಲಂಬಿಲ, ಮತ್ತು ಇನ್ನಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.