ಬೆಳ್ತಂಗಡಿ ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಮನೋಹರ ಬಳಂಜ ಆಯ್ಕೆ

  manu

ಮನೋಹರ ಬಳಂಜ

shibhi

ಶಿಬಿ ಧರ್ಮಸ್ಥಳ

ಬೆಳ್ತಂಗಡಿ ಪತ್ರಕರ್ತ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಸಂಘದ ಅಧ್ಯಕ್ಷ ದೇವಿ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಇಂದು(ಜೂ.3) ಪತ್ರಿಕಾ ಭವನದಲ್ಲಿ ನಡೆಯಿತು.
2016-17 ನೇ ಸಾಲಿನ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ವರದಿಗಾರ ಮನೋಹರ ಬಳಂಜ, ಕಾರ್ಯದರ್ಶಿಯಾಗಿ ವಾರ್ತಾ ಭಾರತಿ ಪ್ರತಿಯ ವರದಿಗಾರ ಶಿಬಿ ಧರ್ಮಸ್ಥಳ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ವರದಿಗಾರ ಭುವನೇಶ್, ಜೊತೆ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವೇಣೂರು ವರದಿಗಾರ ಪದ್ಮನಾಭ ಕುಲಾಲ್, ಕೋಶಾಧಿಕಾರಿಯಾಗಿ ಹೊಸದಿಗಂತ ಪತ್ರಿಕೆಯ ವರದಿಗಾರ ದೀಪಕ್ ಅಠವಳೆ ಸರ್ವಾನುಮತಗಳಿಂದ ಆಯ್ಕೆಯಾದರು.
ಸಭೆಯಲ್ಲಿ ಸಂಘದ ಸದಸ್ಯರುಗಳಾದ ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಬಿ.ಎಸ್ ಕುಲಾಲ್, ಉದಯವಾಣಿ ವರದಿಗಾರ ಲಕ್ಷ್ಮೀ ಮಚ್ಚಿನ, ಸಂಯುಕ್ತ ಕರ್ನಾಟಕ ವರದಿಗಾರರಾದ ಪುಷ್ಪರಾಜ್ ಶೆಟ್ಟಿ, ಶ್ರೀನಿವಾಸ ತಂತ್ರಿ, ಪ್ರಜಾವಾಣಿ ವರದಿಗಾರ ಆರ್.ಎನ್. ಪೂವಣಿ, ಸುದ್ದಿ ಪತ್ರಿಕೆಯ ವರದಿಗಾರ ಆಶ್ರಫ್ ಆಲಿಕುಂಞ, ಮಂಜುನಾಥ್ ರೈ, ಹೊಸಸಂಜೆ ಪತ್ರಿಕೆಯ ವರದಿಗಾರ ಧನಕೀರ್ತಿ ಆರಿಗ, ಕರಾವಳಿ ಅಲೆಯ ವರದಿಗಾರ ಆಚು ಬಾಂಗೇರು, ನಮ್ಮ ಕುಡ್ಲ ವರದಿಗಾರ ಸಂಜೀವ, ವೆಬ್ ಪತ್ರಿಕೆಯ ವರದಿಗಾರ ಋಷಿಕೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.