HomePage_Banner_
HomePage_Banner_
HomePage_Banner_

ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಬೇಕು : ಜಗನ್ನಾಥ ಕಾಮತ್

Advt_NewsUnder_1

jsb devasthana mandiragala shabeಬೆಳ್ತಂಗಡಿ : ಜಿ.ಎಸ್.ಬಿ. ದೇವಾಲಯಗಳ ಒಕ್ಕೂಟದ ವತಿಯಿಂದ ಪುತ್ತೂರು ವಲಯದ ದೇವಾಲಯ ಮತ್ತು ಮಂದಿರಗಳ ಸಭೆ ಶ್ರೀ ವೆಂಕಟರಮಣ ದೇವಸ್ಥಾನ, ಲಾಯಿಲದಲ್ಲಿ ನಡೆಯಿತು.
ಒಕ್ಕೂಟದ ಕಾರ್ಯದರ್ಶಿ ಟಿ. ಗಣಪತಿ ಪೈ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶ್ರೀ ದೇವಳ ಅಥವಾ ಮಂದಿರ ಸಮಾಜದ ಆರಾಧನ ಶ್ರದ್ಧಾ ಕೇಂದ್ರವಾಗಿದೆ. ಸಮಾಜದ ಯುವ ಪೀಳಿಗೆಯ ಶಿಕ್ಷಣ ಮತ್ತು ಉದ್ಯೋಗಕ್ಕೆ ಪೂರಕವಾದ ಪ್ರೋತ್ಸಾಹ ಸಿಗುತ್ತಿದೆ. ಈ ನಿಟ್ಟಿನಲ್ಲಿ ಯುವಜನತೆ ಶ್ರೀ ದೇವಳದ ಧಾರ್ಮಿಕ ಕಾರ್ಯಕ್ರಮದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಚಿಂತಿಸಬೇಕಿದೆ. ಪ್ರತಿಯೊಂದು ದೇವಸ್ಥಾನ ಮತ್ತು ಮಂದಿರದ ಆಡಳಿತ ಮಂಡಳಿಯವರು ಭದ್ರತೆಯ ದೃಷ್ಟಿಕೋನದಿಂದ ಕಡ್ಡಾಯವಾಗಿ ಸಿಸಿ ಕ್ಯಾಮರ ಅಳವಡಿಸುವಿಕೆಯ ಬಗ್ಗೆ ನಿರ್ಧರಿಸಬೇಕಿದೆ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಂಗಳೂ ರಿನ ಹಿರಿಯ ಲೆಕ್ಕ ಪರಿಶೋಧಕ ಸಿ.ಎ.ಜಗನ್ನಾಥ ಕಾಮತ್ ಮಾತನಾಡುತ್ತಾ ದೇವಸ್ಥಾನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಬೇಕು. ಎಲ್ಲಾ ದೇವಸ್ಥಾನಗಳು ಸರಿಯಾದ ರೀತಿಯಲ್ಲಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದಾಗ ಐಕ್ಯಮತೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕೇಂದ್ರ ಮತ್ತು ರಾಜ್ಯ ಸರಕಾರ ದೇವಾಲಯಗಳಿಗೆ ಸಂಬಂಧಿಸಿದಂತೆ ತಂದಿರುವ ಹಲವಾರು ಕಾನೂನು ಕಾಯ್ದೆಗಳ ಬಗ್ಗೆ, ಜಿಎಸ್‌ಟಿ ಕುರಿತಾಗಿ ಮತ್ತು ಇತರ ತೆರಿಗೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಶ್ರೀ ದೇವಳ ಅಥವಾ ಮಂದಿರದ ಆಸ್ತಿಯ ಕಾಗದ ಪತ್ರಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಆಗ ಯಾವುದೇ ಕಾನೂನಿನ ತೊಡಕು ಉಂಟಾಗುವುದಿಲ್ಲ ಎಂದು ಮಂಗಳೂರಿನ ಹಿರಿಯ ವಕೀಲ ಅಮೃತ್ ಕಿಣಿ ಹೇಳಿದರು. ಉಪಸ್ಥಿತರಿದ್ದ ಸಮಾಜ ಬಾಂಧವರು ಪ್ರಶ್ನೋತ್ತರ ಮೂಲಕ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು. ಈ ಸಭೆಯಲ್ಲಿ ಶೃಂಗೇರಿ, ಸುಳ್ಯ, ಪುತ್ತೂರು, ಬಂಟ್ವಾಳ, ಹೊಸ್ಮಾರು, ಉಪ್ಪಿನಂಗಡಿ, ಉಜಿರೆ, ಪುಂಜಾಲಕಟ್ಟೆ, ಗುರುವಾಯ ನಕೆರೆ ಮತ್ತು ವೇಣೂರಿನ ಮಂದಿರ ಮತ್ತು ದೇವಳದ ಆಡಳಿತ ಮಂಡಳಿಯವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ಅನುವಂಶಿಯ ಮೊಕ್ತೇಸರ ಕೆ. ಸುನೀಲ್ ಶೆಣೈ ಉಪಸ್ಥಿತರಿದ್ದರು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಬಿ. ಶ್ರೀನಿವಾಸ ಭಟ್ ಪ್ರಾರ್ಥಿಸಿದರು. ಒಕ್ಕೂಟದ ಜೊತೆ ಕಾರ್ಯದರ್ಶಿ ಮತ್ತು ಶ್ರೀ ವೆಂಕಟರಮಣ ದೇವಸ್ಥಾನ ಲಾಯಿಲ ಇದರ ಆಡಳಿತ ಮೊಕ್ತೇಸರ ಮೂರ್ಜೆ ವಿವೇಕಾನಂದ ಪ್ರಭು ಸ್ವಾಗತಿಸಿದರು. ಒಕ್ಕೂಟದ ಕೋಶಾಧಿಕಾರಿ ರಾಧಾಕೃಷ್ಣ ಭಕ್ತ ಧನ್ಯವಾದವಿತ್ತರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.