ಜೀರ್ಣೋದ್ಧಾರಗೊಳ್ಳುತ್ತಿರುವ ರುದ್ರಗಿರಿ ಶ್ರೀ ಮೃತ್ಯುಂಜಯ ಕ್ಷೇತ್ರ ಶಾಸಕ ವಸಂತ ಬಂಗೇರ ಭೇಟಿ : ಸರಕಾರ ನೆರವು ಒದಗಿಸಲು ಭರವಸೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

rudragiri devasthanakke MLA betiತಣ್ಣೀರುಪಂತ: ಇತಿಹಾಸ ಪ್ರಸಿದ್ಧ ತಣ್ಣೀರುಪಂತ ಗ್ರಾಮದ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕೆಲಸಗಳು ಭರದಿಂದ ಸಾಗುತ್ತಿದ್ದು, ಮೇ 25ರಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಕ್ಷೇತ್ರಕ್ಕೆ ಭೇಟಿ ನೀಡಿದರು.
ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ನೆರವು ಹಾಗೂ ಸರಕಾರದಿಂದ ದೊರೆಯಬಹುದಾದ ಎಲ್ಲಾ ಸಹಕಾರವನ್ನು ತೆಗೆಸಿಕೊಡುವುದಾಗಿ ಭರವಸೆಯಿತ್ತರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯವರು ದೇವಸ್ಥಾನದಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಮಾಹಿತಿಯನ್ನು ಶಾಸಕರಿಗೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿ ವೇ| ಮೂ| ಕೇಶವ ಜೋಗಿತ್ತಾಯ ಇವರ ಉಪಸ್ಥಿತಿಯಲ್ಲಿ ನಡೆದ ಜೀರ್ಣೋದ್ಧಾರ ಸಮಿತಿ ಸಮಾಲೋಚನಾ ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷರಾಗಿ ಶಾಸಕ ಕೆ. ವಸಂತ ಬಂಗೇರರನ್ನು ಸರ್ವಾನುಮತದಿಂದ ಆರಿಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಪ್ರಸನ್ನ ಬೊಲ್ದಡ್ಕ ಹಾಗೂ ಕಾರ್ಯದರ್ಶಿಯಾಗಿ ಯೋಗೀಶ್ ಅಳಕೆ ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶ್ರೀ ಕ್ಷೇ.ಧ. ಸಮುದಾಯ ಅಭಿವೃದ್ಧಿ ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಅವರು ಜೀರ್ಣೋದ್ಧಾರ ಕಾರ್ಯಕ್ಕೆ ಉತ್ತಮ ಸಲಹೆಗಳನ್ನು ನೀಡಿದರು. ಮುಂದಿನ ಜೀರ್ಣೋದ್ಧಾರ ಕಾರ್ಯಗಳನ್ನು ಗೌರವಾಧ್ಯಕ್ಷ ಶಾಸಕರ ನೇತೃತ್ವದಲ್ಲಿ ಮುಂದುವರಿಸಲು ತೀರ್ಮಾನಿಸಲಾಯಿತು.
ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಸಿ.ಹೆಚ್. ಎರಡು ವರ್ಷಗಳ ಲೆಕ್ಕಪತ್ರ ಮಂಡಿಸಿದರು. ಟ್ರಸ್ಟ್ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಯೋಗೀಶ್ ಅಳಕೆ ವಂದಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುಜೀತಾ ಬಂಗೇರ, ನಿರಂಜನ್ ಬಾವಂತಬೆಟ್ಟು, ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಟ್ರಸ್ಟ್ ಉಪಾಧ್ಯಕ್ಷ ಸುರೇಶ್ ಗೌಡ, ಟ್ರಸ್ಟಿಗಳಾದ ದುಗ್ಗಪ್ಪ ಗೌಡ, ಪೂವಪ್ಪ ಬಂಗೇರ, ಚಂದ್ರಹಾಸ ಪಕಳ, ವಿಷ್ಣು ಭಟ್, ರಂಗಪ್ಪ ಪೂಜಾರಿ, ಶ್ರೀಧರ ಬಟ್ಟಂಡ, ಕಮಲಾಕ್ಷ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರುಗಳಾದ ಪ್ರಭಾಕರ ಗೌಡ ಪೊಸಂದೋಡಿ, ದಿನೇಶ್ ಗೌಡ ಪೊಸಂದೋಡಿ, ರಜನಿನಾಥ್, ಹರೀಶ್ ಕುದ್ಕೋಳಿ, ರಾಘವ ಸನ್ನಿಧಿ, ಅರ್ಚಕ ಅಶೋಕ್ ಭಟ್, ಶಿವರಾಮ ಭಟ್, ವೆಂಕಟೇಶ್ ಭಟ್, ಗ್ರಾ.ಪಂ. ಮಾಜಿ ಸದಸ್ಯ ರಾಘವ ಪೂಜಾರಿ, ಸೀತಾರಾಮ ಶೆಟ್ಟಿ, ಓಬಯ್ಯ ಬಂಗೇರ, ಅಜಿತ್ ಅಳಕೆ, ಉದಯ, ರಂಜಿತ್ ಅಳಕೆ, ಬಾಲಕೃಷ್ಣ ಪೂಜಾರಿ ಅಳಕೆ, ಹರೀಶ್ ಕುದ್ಕೋಳಿ, ಬಾಲಕೃಷ್ಣ ಶೆಟ್ಟಿ ಬೊಲ್ನಡ್ಕ, ಲಿಂಗಪ್ಪ ಗೌಡ, ಪೂವಪ್ಪ ಗೌಡ, ಶಿವಪ್ಪ ಗೌಡ ಅಳಕೆ, ಪದ್ಮನಾಭ ಗೌಡ, ಅಣ್ಣಿ ಪೂಜಾರಿ, ಬಾಲಕೃಷ್ಣ ಪಕಳ, ಶ್ರೀಧರ ಕರ್ಕೇರಾ, ಅಚ್ಚುತ ಆಚಾರ್ಯ, ಅಶೋಕ, ಕುಂಞಪ್ಪ ಕುಲಾಲ್, ಮಾಧವ ಶೆಟ್ಟಿಗಾರ್, ವಿಶ್ವನಾಥ ಕುಲಾಲ್, ನವೀನ್‌ಚಂದ್ರ ಅಂತರ, ಶಶಿ ಕರ್ಪಾಡಿ, ಯಶೋಧರ ಅಳಕೆ, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.