HomePage_Banner_
HomePage_Banner_
HomePage_Banner_

ಕುಕ್ಕಾವು ನೂತನ ಮಸ್ಜಿದ್ ಉದ್ಘಾಟನೆ, ಸೌಹಾರ್ದ ಸಮಾವೇಶ

Advt_NewsUnder_1

kukkavuಮಿತ್ತಬಾಗಿಲು : ರಹ್ಮಾನಿಯಾ ಜುಮ್ಮಾ ಮಸೀದಿ ಮತ್ತು ದರ್ಗಾಶರೀಫ್ ಕಾಜೂರು ಇದರ ಅಂಗ ಸಂಸ್ಥೆಯಾದ ನೂರುಲ್ ಹುದಾ ಮದರಸ ಕುಕ್ಕಾವು ನೂತನ ಮಸೀದಿ ಉದ್ಘಾಟನೆ ಮತ್ತು ಏಕದಿನ ಮತ ಪ್ರವಚನವು ಮೇ 23 ಮತ್ತು 24 ರಂದು ನಡೆಯಿತು.
ಸಭಾಧ್ಯಕ್ಷತೆಯನ್ನು ಕಾಜೂರು ತಂಙಳ್ ವಹಿಸಿದ್ದು ಆಶೀರ್ವಚನ ನೀಡಿದರು. ಮಸೀದಿ ಉದ್ಘಾಟನೆ ನಿಮಿತ್ತ ಸೌಹಾರ್ದ ಸಂಗಮ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಇದನ್ನು ಕಡಿರುದ್ಯಾವರ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಕುಮಾರ್ ವಳಂಬ್ರ ನೆರವೇರಿಸಿದರು. ಅರೆಬಿಕ್ ಭಾಷಣವನ್ನು ಅಶ್ರಫ್ ಸಅದಿ ಮಲ್ಲೂರು ಉಸ್ತಾದ್ ನೆರವೇರಿಸಿದರು. ಮದರಸ ಮುಖ್ಯೋಪಾಧ್ಯಾಯ ಬಿ.ಎ. ಶರೀಫ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತವನ್ನು ಕುಕ್ಕಾವು ಸಮಿತಿ ಅಧ್ಯಕ್ಷ ಕೆ.ಎ. ಅಬೂಬಕ್ಕರ್ ನೆರವೇರಿಸಿದರು.
ವೇದಿಕೆಯಲ್ಲಿ ಬದ್ರುದ್ದೀನ್ ಹಾಜಿ ಕುಕ್ಕಾಜೆ, ಪಿ.ಎ. ಮುಹಮ್ಮದ್ ಕಾಜೂರು, ಅಬ್ದುಲ್ ಖಾದಿರ್ ಮಾಲಿಕ್ ಇಂಜಿನಿಯರ್ ಬೊಳ್ಳಾಯಿ, ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ನಾರಾಯಣ ಪಾಟಾಳಿ, ಕೆ. ಶೇಖಬ್ಬ ಕುಕ್ಕಾವು, ಜಯರಾಮ ಆಲಂಗಾರು, ಸುದರ್ಶನ ರಾವ್ ಗಜಂತೋಡಿ, ಕೆ.ಎಂ. ಇಬ್ರಾಹಿಂ ಕಾಜೂರು, ಕೆ.ಯು. ಮುಹಮ್ಮದ್, ಅಶ್ರಫ್ ಆಲಿಕುಂಞಿ ಮುಂಡಾಜೆ, ನೋಣಯ್ಯ ಗೌಡ, ರಾಮಣ್ಣ ಕುಂಬಾರ, ಜೆ.ಎಚ್. ಅಬ್ಬಾಸ್, ಅಬ್ದುಲ್ ಹಕೀಂ ಮುಸ್ಲಿಯಾರ್, ಅಬ್ದುರ್ರಶೀದ್ ಹನೀಫಿ, ಯೋಗೀಶ್ ಬಾಸ್ ನೆರಿಯ, ರಮೇಶ್ ಮೆಸ್ಕಾಂ, ಪದ್ಮನಾಭ ಗೌಡ, ನೋಣಯ್ಯ ಪೂಜಾರಿ, ಕೆ.ಎಚ್. ಉಮರ್, ಎಚ್.ಎಸ್. ಇಬ್ರಾಹಿಂ ಅಶ್ರಫಿ, ಕೆ.ಎಚ್. ಹಸೈನಾರ್, ಇಕ್ಬಾಲ್, ಚಂದ್ರಶೇಖರ ಗೌಡ ಮೊದಲಾದ ಗಣ್ಯರುಗಳು ಭಾಗಿಯಾಗಿದ್ದರು. ಮೇ 23 ರಂದು ಬಿ.ಕೆ. ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮತಪ್ರವಚನ ನಡೆಸಿಕೊಟ್ಟರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.