HomePage_Banner_
HomePage_Banner_
HomePage_Banner_

ಉಪತಹಶೀಲ್ದಾರ್ ಚೆನ್ನಪ್ಪ ಗೌಡ ಸೇವಾ ನಿವೃತ್ತಿ

Advt_NewsUnder_1

Chennappa gowda -ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಚುನಾವಣಾ ಶಾಖೆಯಲ್ಲಿ ಉಪತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚೆನ್ನಪ್ಪ ಗೌಡ ಅವರು ಮೇ.31 ರಂದು ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ.
ಇವರು ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 39 ವರ್ಷಗಳ ಕಾಲ ವಿವಿಧ ಊರುಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರು. 1978 ಡಿ.14 ರಂದು ಆಗಿನ ಕಾರ್ಕಳ ತಾಲೂಕು ಕಲ್ಲಮುಂಡ್ಕೂರು ಗ್ರಾಮದ ಗ್ರಾಮಕರಣಿಕರಾಗಿ ಮತ್ತು ಪಂಚಾಯತು ಕಾರ್ಯದರ್ಶಿಯಾಗಿ ಚೆನ್ನಪ್ಪ ಗೌಡರು ಸರಕಾರಿ ಸೇವೆಗೆ ಸೇರಿದ್ದರು. 1978ರಿಂದ 1993ರವರೆಗೆ ಕಾರ್ಕಳ ತಾಲೂಕಿನ ನಿಡ್ಡೋಡಿ, ದರೆಗುಡ್ಡೆ, ಕಾಂತಾವರ, ಬೆಳ್ಮಣ್ ಗ್ರಾಮಗಳಲ್ಲಿ ಗ್ರಾಮಕರಣಿಕರಾಗಿ ಕಾರ್ಯನಿರ್ವಹಿಸಿ ಅಲ್ಲಿಂದ ವರ್ಗಾವಣೆಗೊಂಡು 1993 ರಿಂದ 2004ರವರೆಗೆ ಬೆಳ್ತಂಗಡಿ ತಾಲೂಕಿನ ಬೆಳಾಲು, ಶಿಶಿಲ, ಹತ್ಯಡ್ಕ, ಲಾಲ ಗ್ರಾಮಗಳಲ್ಲಿ ಗ್ರಾಮಕರಣಿಕರಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದರು.
2004ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಭಡ್ತಿಗೊಂಡು 2008ರವರೆಗೆ ಬೆಳ್ತಂಗಡಿ ತಾಲೂಕು ಪಂಚಾಯತು ಕಚೇರಿಯಲ್ಲಿ ಕಾರ್ಯನಿರ್ವಹಿಸಿ 2008ರಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಚುನಾವಣಾ ಶಾಖೆಗೆ ವರ್ಗಾವಣೆಗೊಂಡಿದ್ದರು. ಸುಮಾರು ನಾಲ್ಕು ವರ್ಷಗಳ ಸೇವೆಯ ಬಳಿಕ 2012 ಆಗಸ್ಟ್‌ನಲ್ಲಿ ಉಪತಹಶೀಲ್ದಾರ್ ಆಗಿ ಭಡ್ತಿಗೊಂಡು ಮಡಿಕೇರಿ ತಾಲೂಕು ಸಂಪಾಜೆ ನಾಡ ಕಚೇರಿಗೆ ವರ್ಗಾವಣೆಗೊಂಡು ಅಲ್ಲಿ ಸೇವೆ ಸಲ್ಲಿಸಿದ್ದರು. 2013 ಮಾರ್ಚ್‌ನಲ್ಲಿ ಪುನಃ ಬೆಳ್ತಂಗಡಿ ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ವರ್ಗಾವಣೆಗೊಂಡು ಇದುವರೆಗೆ ಸೇವೆ ಸಲ್ಲಿಸಿ, ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.