ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಸಪ್ತ ವಿಭೂಷಣ ಪ್ರಶಸ್ತಿ

jci belthangady saptha vibhushana prasastiಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವಲಯ 15ರಲ್ಲಿ ಅತ್ಯುತ್ತಮ ಘಟಕವಾಗಿದ್ದು ವಿವಿಧ ಸಮಾಜಮುಖಿ ಜನಪರ ಯೋಜನೆಗಳ ಮೂಲಕ ಕಾರ್ಯಕ್ರಮಗಳು ಮಾಡುತ್ತಿದ್ದು, ವಿಶೇಷ ಕಾರ್ಯಕ್ರಮಗಳ ಆಯೋಜನೆಗೆ ಜೆಸಿಐಯಲ್ಲಿ ಕೊಡಮಾಡುವ ಸಪ್ತ ವಿಭೂಷಣ ಪ್ರಶಸ್ತಿಗೆ ಭಾಜನವಾಗಿದೆ.
ಮೇ.28 ರಂದು ವಿಟ್ಲದ ಆತಿಥ್ಯದಲ್ಲಿ ನಡೆದ ಮಧ್ಯಂತರ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ವಲಯಾಧ್ಯಕ್ಷ ಸಂತೋಷ್ ಜಿ, ಕಾರ್ಯಕ್ರಮ ವಿಭಾಗದ ನಿರ್ದೇಶಕ ಅನಿಲ್ ಕುಮಾರ್, ವಲಯ ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜರವರಿಗೆ ನೀಡಿದರು.
ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನಿಕಟ ಪೂರ್ವಾಧ್ಯಕ್ಷ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯಾ, ಕಾರ್ಯದರ್ಶಿ ರಂಜಿತ್ ಹೆಚ್.ಡಿ, ಕೋಶಾಧಿಕಾರಿ ವಿಶಾಲ್ ಅಗಸ್ಟಿನ್, ಉಪಾಧ್ಯಕ್ಷರಾದ ಪ್ರಶಾಂತ್ ಲಾಯಿಲ, ಪ್ರಸಾದ್ ಬಿ.ಎಸ್ ಕಕ್ಕಿಂಜೆ, ಸದಸ್ಯ ಸತೀಶ್ ಸುವರ್ಣ ಗೇರುಕಟ್ಟೆ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.