ಯಕ್ಷಗಾನ ಮೇರು ಕಲಾವಿದ ಕೆ. ಗೋವಿಂದ ಭಟ್ಟರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ

GOVINDA BHAT 1ಬೆಳ್ತಂಗಡಿ : ಪ್ರಸಕ್ತ 2016ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ತೆಂಕುತಿಟ್ಟು ಯಕ್ಷಗಾನದ ಮೇರು ಕಲಾವಿದ ಸೂರಿಕುಮೇರಿ ಕೆ. ಗೋವಿಂದ ಭಟ್ಟರಿಗೆ ಲಭಿಸಿದೆ.
ಇವರು ಈ ಸಾಲಿನ ಪ್ರಶಸ್ತಿ ಪುರಸ್ಕೃತರಾದವರ ಪೈಕಿ ಕರ್ನಾಟಕದ ಏಕೈಕ ಯಕ್ಷಗಾನ ಕಲಾವಿದರು. ತೆಂಕುತಿಟ್ಟು ಕೋಳ್ಯೂರು ರಾಮಚಂದ್ರ ರಾಯರಿಗೆ ಈ ಗೌರವ ಸಂದಿತ್ತು. ಗೋವಿಂದ ಭಟ್ಟರು 66 ವರ್ಷಗಳ ಕಾಲ ಯಕ್ಷಗಾನ ತಿರುಗಾಟದ ಅನುಭವ ಹೊಂದಿದ್ದು, 50 ವರ್ಷಗಳ ಕಾಲ ಧರ್ಮಸ್ಥಳ ಮೇಳವೊಂದರಲ್ಲೇ ಕಲಾಸೇವೆ ಮಾಡಿದ ಗೌರವಕ್ಕೆ ಪಾತ್ರರಾಗಿದ್ದಾರೆ.
ಒಟ್ಟು 43 ಮಂದಿಗೆ ಪುರಸ್ಕಾರ ದೊರೆತಿದ್ದು, ಅಸ್ಸಾಂನ ಗುವಾಹಾಟಿಯಲ್ಲಿ ನಡೆದ ಅಕಾಡೆಮಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಸಂಗೀತ, ನಾಟಕ, ರಂಗಭೂಮಿ, ಜನಪದ, ಗೊಂಬೆಕುಣಿತ ಮೊದಲಾದ ಪ್ರಕಾರಗಳಿಗೆ ಈ ಗೌರವ ನೀಡಲಾಗುತ್ತದೆ. ಪ್ರಶಸ್ತಿ 1 ಲಕ್ಷ ರೂ. ನಗದು ತಾಮ್ರ ಪತ್ರ ಒಳಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.