ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ವಿಸ್ತೃತ ಕಟ್ಟಡದ ಉದ್ಘಾಟನೆ

bank 2

bank

bank1ಬೆಳ್ತಂಗಡಿ : ಪ್ರಾ.ಸ.ಕೃ.ಪ ಮತ್ತು ಗ್ರಾ.ಅ. ಬ್ಯಾಂಕ್‌ನ ಉದ್ಘಾಟನಾ ಸಮಾರಂಭವು ಇಂದು(ಮೇ.29) ಬ್ಯಾಂಕ್‌ನ ಕಛೇರಿಯಲ್ಲಿ ನಡೆಯಿತು. ಕಛೇರಿಯ ಉದ್ಘಾಟನೆಯನ್ನು ಅರಣ್ಯ ಮತ್ತು ಪರಿಸರ ಇಲಾಖೆ ಹಾಗೂ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೆರವೇರಿಸಿದರು.
ನೂತನ ಸಭಾಭವನದ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ತಿಪಟೂರು ಕ್ಷೇತ್ರ ಶಾಸಕ ಕೆ. ಷಡಕ್ಷರಿ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಠೇವಣಿ ಪತ್ರ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕ.ರಾ.ಸ.ಕೃಷಿ ಮತ್ತು ಗ್ರಾ.ಅ. ಬ್ಯಾಂಕ್‌ನ ಜಿಲ್ಲಾ ನಿರ್ದೇಶಕ ಸುದರ್ಶನ್ ಜೈನ್, ಪಟ್ಟಣ ಪಂಚಾಯತ್ ಅಧ್ಯಕ್ಷ ಎಂ. ನಾರಾಯಣ ರಾವ್, ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ, ಕ.ರಾ.ಸ.ಕೃಷಿ ಮತ್ತು ಗ್ರಾ.ಅ. ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕ ಬಿ.ಜಿ ಸುರೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.