HomePage_Banner_
HomePage_Banner_
HomePage_Banner_

ಬುದ್ಧ, ಬಸವ, ಅಂಬೇಡ್ಕರ್ ಜನ್ಮದಿನಾಚರಣೆ

meravani ge

meravani ge 1

meravani ge 2

meravani ge 3meravani ge 4ಬೆಳ್ತಂಗಡಿ : ಬೆಳ್ತಂಗಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಹಾಗೂ ಡಾ| ಬಿ.ಆರ್ ಅಂಬೇಡ್ಕರ್‌ರವರ ಜನ್ಮದಿನಾಚರಣಾ ಸಮಿತಿ ಇವುಗಳ ಆಶ್ರಯದಲ್ಲಿ ವಿಶ್ವಕ್ಕೆ ಶಾಂತಿಯ ಸಂದೇಶಗಳನ್ನು ಸಾರಿದ ಮಹಾ ಮಾನವತಾವಾದಿಗಳಾದ ಬುದ್ಧ, ಬಸವ, ಅಂಬೇಡ್ಕರ್ ಜನ್ಮಾದಿನಾರಣೆ ಪ್ರಯುಕ್ತ ಇಂದು(ಮೇ.29) ಅಂಬೇಡ್ಕರ್ ಮೈದಾನದಿಂದ ಎಸ್ ಡಿ ಎಂ ಕಲಾಭವನ ವರೆಗೆ ವರ್ಣರಂಜಿತ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಶೇಖರ್ ಕುಕ್ಕೇಡಿ, ವಸಂತ ಬಿ ಕೆ, ಚಂದು ಎಲ್, ರಂಜನ್ ಗೌಡ, ಕೊರಗಪ್ಪ ನಾಯ್ಕ, ಪ್ರಭಾಕರ ಶೆಟ್ಟಿ ಉಪ್ಪಡ್ಕ ಮೊದಲಾದವರು ಭಾಗಿಯಾಗಿದ್ದರು.

ನಂತರ ಶ್ರೀ ಮಂಜುನಾಥ ಸ್ವಾಮಿ ಕಲಾಭವನ(ಸಮಾಜ ಮಂದಿರ) ಬೆಳ್ತಂಗಡಿಯಲ್ಲಿ ಸಭಾ ಕಾರ್ಯಕ್ರಮದ  ಉದ್ಘಾಟನೆ ನಡೆಯಿತು. ಇದೇ ಸಂದರ್ಭದಲ್ಲಿ ತಾಲೂಕಿನ ದಲಿತ ಚಳುವಳಿಯ ಹಿರಿಯ ಮುಖಂಡರುಗಳನ್ನು, ತಾಲೂಕಿನ ಪ.ಜಾತಿ ಪಂಗಡದಿಂದ ವಿವಿಧ ಕ್ಷೇತ್ರಗಳಿಗೆ ನಾಮನಿರ್ದೇಶನಗೊಂಡ ಸದಸ್ಯರುಗಳನ್ನು, ಪ.ಜಾತಿ ಪಂಗಡದಿಂದ ಆಯ್ಕೆಯಾದ ಚುನಾಯಿತ ಜನಪ್ರತಿನಿಧಿಗಳಾದ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರುಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳನ್ನು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಾಲೂಕಿನ ಪ.ಜಾತಿ ಪಂಗಡದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.