HomePage_Banner_
HomePage_Banner_
HomePage_Banner_

ನಡ ಗ್ರಾಮದ ಅಡಿಕೆ ಕಳವು ಆರೋಪಿಗಳ ಬಂಧನ

Advt_NewsUnder_1

nadaಬೆಳ್ತಂಗಡಿ : ನಡ ಗ್ರಾಮದ ಮಂಜೊಟ್ಟಿ ನಿವಾಸಿ ತೋಮಸ್ ಎಂಬವರ ಮನೆಯಿಂದ ಮೇ. 15 ರಂದು ಸುಮಾರು ರೂ. 1.5ಲಕ್ಷ ಮೌಲ್ಯದ ಸುಲಿದ ಅಡಿಕೆಯನ್ನು ಕಳವು ಮಾಡಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದ ಮೂರು ಆರೋಪಿಗಳನ್ನು ಹಾಗೂ ಮೇ.24 ರಂದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಕೆ ಗಂಗಾಧರ ಕೆ.ವಿ, (37ವ)ಕಾಸರಗೋಡು, ಎರ್ನಾಕುಲಂ ಜಿಲ್ಲೆ ಆಲುವಾ ತಾಲೂಕಿನ ಕುಟ್ಟಾಪಿ ಯಾನೆ ಕೆ ಎಸ್ ಶೈನ್(30ವ), ಎರ್ನಾಕುಲಂ ಜಿಲ್ಲೆ ಆಲುವಾ ತಾಲೂಕಿನ ರಘು ಕೆ.ಬಿ,(27ವ), ಎಂಬವರನ್ನು ದಸ್ತಗಿರಿ ಮಾಡಿದ್ದು ಒಬ್ಬ ಆರೋಪಿ ಶೈನ್ ಎಂಬಾತನು ತಲೆಮರೆಸಿಕೊಂಡಿದ್ದಾನೆ. ಆರೋಪಿಗಳಿಂದ 9.6 ಕ್ವಿಂಟಾಲ್ ಸುಲಿದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು, ಮೋಟಾರ್ ಸೈಕಲ್ ಸಹಿತ ಒಟ್ಟು ರೂ. 10 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಕಾರ್ಯಚರಣೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್‌ಐ ರವಿ ಬಿಎಸ್, ಎಎಸ್‌ಐ ಕರುಣಾಕರ, ದೇವಪ್ಪ, ಸಿಬ್ಬಂದಿಗಳಾದ ರಾಜೇಶ್, ಲಾರೆನ್ಸ್ ಪಿ.ಆರ್, ವೆಂಕಟೇಶ್, ಇ.ಜಿ ತೋಮಸ್, ಪ್ರವೀಣ್, ಹರೀಶ್, ಡ್ಯಾನಿ, ಶಿವರಾಮ ರೈ, ಸತೀಶ್, ರಾಜ ಬೆಣ್ಣಿ, ಸಂತೋಷ್, ಆನಂದ, ಮಧು, ಧರ್ಮಪಾಲ್‌ರವರು ಭಾಗವಹಿಸಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.