HomePage_Banner_
HomePage_Banner_
HomePage_Banner_

ವೇಣೂರು: ಅನಾರೋಗ್ಯದಿಂದ ಬಳಲುತ್ತಿರುವ ರಮ್ಯಾಗೆ ಡಿಸ್ಟಿಂಕ್ಷನ್

Advt_NewsUnder_1

ramya 1

ramyaವೇಣೂರು: ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಬಡತನವಾಗಲಿ, ಅನಾರೋಗ್ಯವಾಗಲಿ ಅಡ್ಡಿಯಾಗದು ಎಂಬುವುದಕ್ಕೆ ಬಜಿರೆ ಗ್ರಾಮದ ಮುದ್ದಾಡಿಯ ಕು| ರಮ್ಯಾ ದೇವಾಡಿಗಳೇ ಸಾಕ್ಷಿ.
ವೇಣೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ 2016-17ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ 578 ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣಳಾಗಿ ಶಾಲೆಯಲ್ಲೇ ತೃತೀಯ ಸ್ಥಾನ ಪಡೆಯುವ ಮೂಲಕ ಬಡತನವನ್ನೇ ಮರೆಯಾಗಿಸಿದ್ದಾಳೆ. ಬಡತನ ಅನ್ನೋದು ಯಾವತ್ತೂ ಶಾಪವಲ್ಲ. ಭವಿಷ್ಯದಲ್ಲಿ ಯಾವುದೇ ರಂಗದಲ್ಲಿ ಧುಮುಕಿ ಸಾಧನೆ ಮಾಡಲು ಅದು ಅಡ್ಡಿಯಾಗುವುದಿಲ್ಲ. ಗ್ರಾಮೀಣ ಭಾಗಗಳಲ್ಲಿ ಅದೆಷ್ಟೋ ಬಡ ಕುಟುಂಬದ ವಿದ್ಯಾರ್ಥಿಗಳು ನಾನಾ ರಂಗದಲ್ಲಿ ಸಾಧನೆ ಮಾಡಿ ಎಲೆಮರೆಯ ಕಾಯಿಗಳಂತೆ ತೆರೆಮರೆಯಲ್ಲೇ ಇರುತ್ತಾರೆ. ಇದಕ್ಕೆ ಉದಾಹರಣೆ ವೇಣೂರು ವಲಯ ಬಜಿರೆ ಗ್ರಾಮದ ಮುದ್ದಾಡಿ ಮನೆ ನಾರಾಯಣ ದೇವಾಡಿಗ-ಶಕುಂತಳಾ ದಂಪತಿಯ ಪುತ್ರಿ ರಮ್ಯಾ.
ಬಡತನದ ಕುಟುಂಬ: ಈ ಬಡ ದಂಪತಿಗೆ ಮೂವರು ಮಕ್ಕಳಿದ್ದು ಈಕೆಯೇ ದೊಡ್ಡವಳು. ಎರಡನೆಯವನು ರತನ್ 7ನೇ ತರಗತಿಯಲ್ಲಿ ಕಲಿಯುತ್ತಿದ್ದರೆ ರಕ್ಷತ್ 5ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ. ನಾರಾಯಣ ದೇವಾಡಿಗರು ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ ತಾಯಿ ಶಕುಂತಳಾ ಬಜಿರೆ ಶಾಲಾ ಬಿಸಿಯೂಟದ ಅಡುಗೆ ಕೆಲಸ ಮಾಡುತ್ತಿದ್ದಾರೆ. ರಮ್ಯಾಳ ಶಿಕ್ಷಣದ ಆಸಕ್ತಿ ಹಾಗೂ ಶಾಲೆಯ ಶಿಕ್ಷಕರು ಹಾಗೂ ಪೋಷಕರ ಪ್ರೋತ್ಸಾಹ ಈ ಮಟ್ಟಕ್ಕೇರುವಂತೆ ಮಾಡಿದೆ.
ಏನಿದು ಅನಾರೋಗ್ಯ?:
ರಮ್ಯಾ 4 ವರ್ಷವಳಿದ್ದಾಗ ಕಾಲಿಗೆ ಕಲ್ಲು ತಾಗಿ ಉಂಟಾದ ನೋವು ಇಂದು ಕಾಲು ಆನೆಕಾಲಿನಂತಾಗಿ ಜೀವಕ್ಕೆ ಕಂಟಕ ತಂದೊಡ್ಡಿದೆ. ವಿವಿಧ ಕಡೆಯ ಆರ್ಯುವೇದ ಹಾಗೂ ಮಂಗಳೂರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಿರಂತರ ಚಿಕಿತ್ಸೆ ಕೊಡಿಸಿದರೂ ಫಲ ನೀಡಲಿಲ್ಲ. ಕೊನೆಗೆ ವೈದ್ಯರೊಬ್ಬರ ಸಲಹೆಯಂತೆ ಕೇರಳ ಕಾಸರಗೋಡಿನಲ್ಲಿರುವ ಐಎಡಿ ಆರ್ಯುವೇದ ಆಸ್ಪತ್ರೆಯಿಂದ ತಜ್ಞ ವೈದ್ಯರುಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆನೆಕಾಲು ರೋಗ ಅಲ್ಲದಿದ್ದರೂ ಅದೇ ಸ್ಥಿತಿಯಲ್ಲಿ ರಮ್ಯಾಳ ಕಾಲು ಊತುಕೊಂಡಿದೆ. ಬ್ಯಾಂಡೇಜ್ ಹಾಕದೆ ನಡೆದಾಡುವಂತಿಲ್ಲ. ದೀರ್ಘ ಕಾಲದ ನಿರಂತರ ಚಿಕಿತ್ಸೆ ಹಾಗೂ ಯೋಗದಿಂದ ರೋಗ ನಿಯಂತ್ರಣ ಬರಬಹುದೆಂದು ವೈದ್ಯರು ತಿಳಿಸಿದ್ದಾರೆ. ಆದರೆ ಅನಾರೋಗ್ಯದ ಚಿಂತೆಯನ್ನೇ ಮರೆತು ಶೈಕ್ಷಣಿಕ ಕ್ಷೇತ್ರದಲ್ಲಿ ಈ ಮಟ್ಟದ ಸಾಧನೆಗೈದಿರುವುದು ನಿಜವಾಗಿಯೂ ಶ್ಲಾಘನೀಯ. ತಂದೆ-ತಾಯಿಯ ಸಂಪಾದನೆಯಲ್ಲಿ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವಾಗ ಮಗಳ ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬ ದಾನಿಗಳ ಮೊರೆ ಹೋಗಿದೆ. ಮಕ್ಕಳ ಶಿಕ್ಷಣ ಹಾಗೂ ಮಗಳ ಚಿಕಿತ್ಸೆಗೆ ನೆರವಾಗಬಯಸುವವರು ರಮ್ಯಾಳ ವೇಣೂರು ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ 01502210046504 (IFSC No. SYNB0000150) ಹಣ ಕಳುಹಿಸಬಹುದು. ಅಥವಾ ಶಕುಂತಳಾ ರವರ ಮೊಬೈಲ್ ಸಂಖ್ಯೆ 9844792031 ಯನ್ನು ಸಂಪರ್ಕಿಸಬಹುದಾಗಿದೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.