HomePage_Banner_
HomePage_Banner_
HomePage_Banner_

ಅನುಗ್ರಹ ಸ್ಕೂಲ್ ಕಂಪೆನಿ ಜನೋಪಯೋಗಿಯಾಗಿ ಕೆಲಸ ನಿರ್ವಹಿಸುತ್ತಿದೆ : ಫಾ| ಸಲಿನ್ ಜೋಸೆಫ್ ಅನುಗ್ರಹ ಸ್ಕೂಲ್ ಬುಕ್ ಕಂಪೆನಿಯಲ್ಲಿ ಅಧೃಷ್ಟ ಚೀಟಿ ಡ್ರಾ ಕಾರ್ಯಕ್ರಮ

Advt_NewsUnder_1

anugraha school book compeniಬೆಳ್ತಂಗಡಿ : ಅನುಗ್ರಹ ಸ್ಕೂಲ್ ಬುಕ್ ಕಂಪೆನಿಯು ಕೇವಲ ವ್ಯಾಪಾರ ಮತ್ತು ಲಾಭದ ದೃಷ್ಟಿಕೋನ ಮಾತ್ರ ಇಟ್ಟುಕೊಳ್ಳದೆ ಜನೋಪಯೋಗಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬೆಳ್ತಂಗಡಿ ಸೈಂಟ್ ಥೋಮಸ್ ಕಾಲೇಜಿನ ಫಾ| ಸಲಿನ್ ಜೋಸೆಫ್ ಹೇಳಿದರು.
ಅನುಗ್ರಹ ಸ್ಕೂಲ್ ಬುಕ್ ಕಂಪೆನಿ ವತಿಯಿಂದ ಸಂಸ್ಥೆಯ ಉದ್ಘಾಟನೆಯ ಪ್ರಯುಕ್ತ ಘೋಷಿಸಿದ್ದ ಅದೃಷ್ಟವಂತ ಗ್ರಾಹಕ ಲಕ್ಕೀ ಕೂಪನ್ ಇದರ ಡ್ರಾ ಕಾರ್ಯಕ್ರಮವನ್ನು ಮೇ 22 ರಂದು ಸಂತೋಮ್ ಟವರ್ ಬೆಳ್ತಂಗಡಿಯಲ್ಲಿರುವ ಅನುಗ್ರಹ ಸ್ಕೂಲ್ ಬುಕ್ ಕಂಪೆನಿಯಲ್ಲಿ ನೆರವೇರಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲ ತಲ್‌ಹತ್ ಎಂ.ಜಿ, ಮಳಿಗೆಯ ಮಾಲಕರಾದ ಅಶ್ರಫ್ ಫೈಝಿ ಸವಣಾಲು, ಅವರ ತಂದೆಯವರಾದ ಇಸುಬು ಸವಣಾಲು, ಗ್ರಾಹಕ ಪ್ರತಿನಿಧಿಯಾದ ಲೆತೀಫ್ ಮದ್ದಡ್ಕ, ಸೈಂಟ್ ತೋಮಸ್ ಕಾಲೇಜು ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಅಕ್ಕಪಕ್ಕದ ಮಳಿಗೆದಾರರು ಉಪಸ್ಥಿತರಿದ್ದರು. ಪತ್ರಕರ್ತ ಲ| ಅಶ್ರಫ್ ಆಲಿಕುಂಞಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಹಕರ ಸಮ್ಮುಖ ನಡೆದ ಅದೃಷ್ಟದ ಆಯ್ಕೆಯಲ್ಲಿ ಉಮಾಶ್ರೀ ಕೊಯ್ಯೂರು ಅವರು ಬೆಲೆಬಾಳುವ ಲ್ಯಾಪ್‌ಟಾಪ್ ಗೆದ್ದುಕೊಂಡರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.