HomePage_Banner_
HomePage_Banner_

ಚೆಸ್ ಪಂದ್ಯಾಟ ಇಶಾ ಶರ್ಮಗೆ ಚಿನ್ನದ ಪದಕ

isha shrama prasasti

isha sharma prarsti  1ಬೆಳ್ತಂಗಡಿ : ಉಜಿರೆ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಇಶಾ ಶರ್ಮ ಇರಾನ್‌ನಲ್ಲಿ ಮೇ 1ರಿಂದ ಮೇ 11ರ ವರೆಗೆ ಜರುಗಿದ ಏಷ್ಯಾ ಮಟ್ಟದ ಕಿರಿಯರ ವಿಭಾಗದ ಚೆಸ್ ಪಂದ್ಯಾಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮೇ 20ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಉಜಿರೆಯ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೋ. ದಿನೇಶ್ ಚೌಟ ಈ ವಿಷಯವನ್ನು ತಿಳಿಸಿದರು. ಏಷಿಯನ್ ಜ್ಯೂನಿಯರ್‍ಸ್ ರ್‍ಯಾಪಿಡ್ ಚಾಂಪಿಯನ್‌ಶಿಪ್ ಶೀರ್ಷಿಕೆಯಡಿ ಜರುಗಿದ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಅಧ್ಯಯನ ನಿರತರಾಗಿದ್ದಾಗಲೇ ಅಂತರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದ ಮೊದಲ ಪ್ರತಿಭಾನ್ವಿತ ವಿದ್ಯಾರ್ಥಿನಿ ಎಂಬ ಹಿರಿಮೆಗೆ ಪಾತ್ರರಾಗಿ, ತಾಲೂಕಿನ ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.
ಈಕೆ ಇದಕ್ಕೂ ಮೊದಲು ಹೈದಾರಾಬಾದ್‌ನಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಚೆಸ್ ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ. ಚೆಸ್ ಮಾತ್ರವಲ್ಲದೆ ಕಲಿಕೆಯಲ್ಲಿಯೂ ಈಕೆಯ ಸಾಧನೆ ಅತ್ಯುತ್ತಮವಾಗಿದೆ. ಶಾರ್ಜಾ, ದುಬೈ, ಮಲೇಷಿಯಾ ಮತ್ತು ಬಾಂದ್ರಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಜಾಗತಿಕ ಮನ್ನಣೆ ಪಡೆದಿದ್ದಾರೆ. ರಾಜಮಂಡ್ರಿ, ಚೆನ್ನೈ, ಪಶ್ಚಿಮ ಬಂಗಾಳ, ದೆಹಲಿ, ಆಂಧ್ರಪ್ರದೇಶದಲ್ಲಿ ಆಯೋಜಿಸಲ್ಪಟ್ಟ ರಾಷ್ಟ್ರಮಟ್ಟದ ಚೆಸ್ ಕ್ರೀಡಾಕೂಟಗಳಲ್ಲೂ ಮಿಂಚಿದ್ದಾರೆ.ಕಲಬುರ್ಗಿ, ಶಿವಮೊಗ್ಗ ಮತ್ತು ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ಚೆಸ್‌ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.
ಇಶಾ ಶರ್ಮರ ತಾಯಿ ಡಾ| ಶ್ರೀವಿದ್ಯಾ ಮಾತನಾಡಿ, ವುಮೆನ್ ಇಂಟರ್‌ನ್ಯಾಶನಲ್ ಮಾಸ್ಟರ್ ಆಗಿ ಆಯ್ಕೆಯಾಗಲು ಈಗಾಗಲೇ ಶಾರ್ಜಾದಲ್ಲಿ ಒಂದು ನರ್ಮ್ ಪಡೆದಿರುವ ಇಶಾ ಶರ್ಮ ಇನ್ನೆರಡು ಅಂಕ ದೊರತಲ್ಲಿ ಕರ್ನಾಟಕದ ಪ್ರಥಮ ಮಹಿಳಾ ಇಂಟರ್‌ನ್ಯಾಶನಲ್ ಚೆಸ್ ಮಾಸ್ಟರ್ ಆಗಲಿದ್ದಾಳೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಎಂ ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ್ ಹೆಗ್ಡೆ, ಇಶಾಶರ್ಮ, ಡಾ| ಶ್ರೀಹರಿ, ಎಸ್‌ಡಿಎಂ ಸ್ಪೋಟ್ಸ್ ಕ್ಲಬ್‌ನ ಕಾರ್ಯದರ್ಶಿ ಬಾಲಭಾಸ್ಕರ್, ದೈಹಿಕ ಶಿಕ್ಷಣ ನಿರ್ದೇಶಕರಾದ ರಮೇಶ್, ಸಂದೇಶ್ ಪೂಂಜ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.