HomePage_Banner_
HomePage_Banner_
HomePage_Banner_

ಮಠ ದೇವಸ್ಥಾನ ನೂತನ ಸಭಾಭವನ, ಕಲಾವೇದಿಕೆ ಉದ್ಘಾಟನೆ

Advt_NewsUnder_1

kadirudyavara

kadirudyavara1

kadirudyavara2

kadirudyavara3

ಕಡಿರುದ್ಯಾವರ : ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಕಡಿರುದ್ಯಾವರದ ಬ್ರಹ್ಮಕಲಶೋತ್ಸವ ಅಂಗವಾಗಿ ಮೇ.7ರಂದು ಬೆಳಿಗ್ಗೆ ಗಣಪತಿ ಹವನ ನಡೆದು ಶ್ರೀ ಲಕ್ಷೀವೆಂಕಟೇಶ್ವರ ದೇವರ ಪ್ರತಿಷ್ಠೆ, ನಿದ್ರಾಕಲಶಾಭಿಷೇಕ, ಜೀವ ಕಲಶಾಭಿಷೇಕ, ನಾಗದೇವರಗೆ ನವಕ ಕಲಶಾಭಿಷೇಕ, ಪರಿವಾರ ದೈವಗಳಿಗೆ ಕಲಶಾಭಿಷೇಕ ಈ ವೈದಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿತು.
ಸಭಾಭವನದ ಉದ್ಘಾಟನೆಯನ್ನು ಮಂಗಳೂರು ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ನೆರವೇರಿಸಿದರು. ಕಲಾವೇದಿಕೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಉದ್ಘಾಟಿಸಿದರು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೆ. ಸುಬ್ರಾಯ ಶೆಣೈ ವಹಿಸಿದ್ದರು. ಅತಿಥಿಗಳಾಗಿ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ. ಸೋಮೇಗೌಡ, ಗೋಪಾಲ ಗೌಡ ಕಿನ್ನಿಮಜಲು, ಬೆಳ್ತಂಗಡಿ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬೆಳ್ತಂಗಡಿ ಪಿಡಬ್ಲ್ಯೂಡಿ ಗುತ್ತಿಗೆದಾರ ರವಿಕುಮಾರ್, ಸುಂದರ ಹೆಗ್ಡೆ ವೇಣೂರು, ಉಜಿರೆ ಪ್ರಕಾಶ್ ಎಲೆಕ್ಟೋನಿಕ್ಸ್‌ನ ಪುಷ್ಪರಾಜ ಶೆಟ್ಟಿ, ಬಂಡಾಜೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಂಜನ್ ಜಿ. ಗೌಡ, ಆನುವಂಶಿಕ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ವಳಂಬ್ರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ ವಳಂಬ್ರ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿನಯಚಂದ್ರ ಗೌಡ ವಳಂಬ್ರ, ಜೀರ್ಣೋದ್ಧಾರ ಸಮಿತಿ ಕಾರ‍್ಯಾಧ್ಯಕ್ಷ ತೀರ್ಥಪ್ರಸಾದ ಗೌಡ ವಳಂಬ್ರ, ಬ್ರಹ್ಮಕಲಶೋತ್ಸವ ಸಮಿತಿ ಕಾರ‍್ಯಾಧ್ಯಕ್ಷ ಅಶೋಕ್ ಕುಮಾರ್ (ಮಠ), ಕಡಿರುದ್ಯಾವರ, ಬ್ರಹ್ಮಕಲಶೋತ್ಸವ ಸಮಿತಿ ಕಾರ‍್ಯದರ್ಶಿ ಗಣೇಶ ಗೌಡ ವಕೀಲರು, ಜೀರ್ಣೋದ್ಧಾರ ಸಮಿತಿ ಕಾರ‍್ಯದರ್ಶಿ ಉದಯಾಕರ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಆನಂದ ಗೌಡ ಬಿ.ಎ. ಬರಮೇಲು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.