ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಕಡಿರುದ್ಯಾವರ ಬ್ರಹ್ಮಕಲಶೋತ್ಸವ ಪ್ರಾರಂಭ

mata

mata1

mata2 mata3

ಕಡಿರುದ್ಯಾವರ : ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಕಡಿರುದ್ಯಾವರ ಇಲ್ಲಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮಗಳಿಗೆ ಇಂದು(ಮೇ.5) ಚಾಲನೆ ದೊರೆತಿದೆ.
ಬೆಳಿಗ್ಗೆ 8.00ಗಂಟೆಗೆ ವೈದಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡು, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ,ಗಣಪತಿ ಹೋಮ, ಉಗ್ರಾಣ ಮುಹೂರ್ತವನ್ನು ಸೂರಜ್ ಅಡೂರು, ಕಡಿರುದ್ಯಾವರ ಉದ್ಘಾಟಿಸಿದರು. ಕಾರ್ಯಾಲಯ ಉದ್ಘಾಟನೆಯನ್ನು ಕೆ. ವಿನಾಯಕ ಪ್ರಭು ಆಲಂದಡ್ಕ ಅವರ ಮೊಮ್ಮಗ ಮಾ| ಅಮೈ ಶೆಣೈ ಕಡಿರುದ್ಯಾವರ ನೆರವೇರಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಂಜನ್ ಜಿ. ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೆ. ಸುಬಾಯ ಶೆಣೈ ಉಜಿರೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ ವಳಂಬ್ರ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿನಯಚಂದ್ರ ಗೌಡ ವಳಂಬ್ರ, ಜೀರ್ಣೋದ್ಧಾರ ಸಮಿತಿ ಕಾರ‍್ಯಾಧ್ಯಕ್ಷ ತೀರ್ಥಪ್ರಸಾದ ಗೌಡ ವಳಂಬ್ರ, ಬ್ರಹ್ಮಕಲಶೋತ್ಸವ ಸಮಿತಿ ಕಾರ‍್ಯಾಧ್ಯಕ್ಷ ಅಶೋಕ್ ಕುಮಾರ್ (ಮಠ), ಕಡಿರುದ್ಯಾವರ, ವಿಶೇಷ ಸಲಹೆಗಾರ ಡಾ| ರಾಮಯ್ಯ ಯು. ಗೌಡ ವಳಂಬ್ರ, ಯು.ಎಸ್.ಎ., ಬ್ರಹ್ಮಕಲಶೋತ್ಸವ ಸಮಿತಿ ಕಾರ‍್ಯದರ್ಶಿ ಗಣೇಶ ಗೌಡ ವಕೀಲರು, ಜೀರ್ಣೋದ್ಧಾರ ಸಮಿತಿ ಕಾರ‍್ಯದರ್ಶಿ  ಉದಯಾಕರ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಆನಂದ ಗೌಡ ಬಿ.ಎ. ಬರಮೇಲು, ಅಡೂರು ವೆಂಕಟರಾಯ, ಮಂಜುನಾಥ ಕಾಮತ್, ಶಿವಯ್ಯ ಗೌಡ, ವಸಂತಿ ನಾರಾಯಣ ಗೌಡ, ಸೂರಜ್ ವಳಂಬ್ರ, ಸುರೇಖ ವಳಂಬ್ರ, ಶ್ರೀನಿವಾಸ ಗೌಡ ವಳಂಬ್ರ, ನಾರಾಯಣ ಗೌಡ ದೇವಸ್ಯ, ಭರತ್ ಇಂದಬೆಟ್ಟು, ಸುಧೀರ್ ವಳಂಬ್ರ, ಸಂತೋಷ್ ವಳಂಬ್ರ, ಸುದರ್ಶನ್ ರಾವ್ ಗಜಂತೋಡಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.