ಮಲವಂತಿಗೆಯ ಸುರೇಶ್ ನಾಯ್ಕರನ್ನು ಕೊಂದು ಧರ್ಮಸ್ಥಳ ಪಟ್ರಮೆ ರಸ್ತೆಯಲ್ಲಿ ಎಸೆದ ತಂಡ 6 ಮಂದಿ ಕೊಲೆ ಆರೋಪಿಗಳ ಬಂಧನ: ಊರವರಿಂದ ಪೊಲೀಸರಿಗೆ ಅಭಿನಂದನೆ: ಭಗ್ನ ಪ್ರೇಮಿ ಎಣೆದ ಸಂಚಿಗೆ ಅಮಾಯಕ ಬಲಿ

suresh nayka

ಕೊಲೆಯಾಗಿರುವ ಅಮಾಯಕ ಸುರೇಶ್ ನಾಯ್ಕ::::

11 (1)

ಆರೋಪಿಗಳ ಪತ್ತೆ ಬಗ್ಗೆ ಎಸ್.ಪಿ ಭೂಷಣ್ ಗುಲಾಬ್ ರಾವ್ ಬೊರಸೆ ಮಂಗಳೂರಿನಲ್ಲಿ ಪ್ರೆಸ್ ಮೀಟ್ ::::

 

11

ನಾಗರಿಕರಿಂದ ಪೊಲೀಸರಿಗೆ ಅಭಿನಂದನೆ:::

111111

ಕೊಲೆ ಆರೋಪಿಗಳ ಜೊತೆ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ಅವರ ಯಶಸ್ವಿ ತನಿಖಾ ತಂಡ_::::

ಧರ್ಮಸ್ಥಳ: ಇಲ್ಲಿನ ಪಟ್ರಮೆ ರಸ್ತೆಯ ಸಮೀಪ ಎ. 30 ರಂದು ಅಪರಿಚಿತ ಗಂಡಸಿನ ಶವ ಬೆಂಕಿ ಹಚ್ಚಿ ಬಹುತೇಕ ಬೆಂದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ. 4 ರಂದು ಈ ಕೊಲೆಗೈದ ಎಲ್ಲಾ ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ನತದೃಷ್ಟ ವ್ಯಕ್ತಿಯನ್ನು ಸುರೇಶ್ ನಾಯ್ಕ ಮಲವಂತಿಗೆ ಎಂದು ಗುರುತಿಸಲಾಗಿದೆ.
ಕೊಲೆಗಾರರ ಪೈಕಿ ಪ್ರಧಾನ ಆರೋಪಿ ನಾವೂರು ಗ್ರಾಮದ ಶ್ರೀ ಆದಿಶಕ್ತಿ ಮಹಾಮ್ಮಾಯಿ ದೇವಸ್ಥಾನದ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದ ಅರ್ಚಕ ಆನಂದ ನಾಯ್ಕ, ಅವರ ಸಂಗಡಿಗರಾದ ಚಾರ್ಮಾಡಿ ಮಾರಿಗುಡಿ ಬಳಿ ನಿವಾಸಿ ವಿನಯ್, ಬೆಳ್ತಂಗಡಿ ಚರ್ಚ್ ರೋಡ್ ನಿವಾಸಿ ಪ್ರವೀಣ್ ನಾಯ್ಕ್, ಬಂಟ್ವಾಳ ತಾಲೂಕು ಪುದು ಗ್ರಾಮದ ಲೋಕೇಶ, ಮೂಡುಕೋಡಿ ಗ್ರಾಮದ ಪ್ರಕಾಶ್ ಮತ್ತು ಮೇಲಂತಬೆಟ್ಟು ಗ್ರಾಮದ ನಾಗರಾಜ ಮೂಲ್ಯ ಎಂಬವರೆಂದು ಗುರುತಿಸಲಾಗಿದೆ.
ಸುರೇಶ್ ಅವರಿಗೆ ವಿವಾಹ ನಿಶ್ಚಿತಾರ್ಥಕ್ಕೆ ತಯಾರಿ ನಡೆದಿದ್ದ ಯುವತಿಯನ್ನು ಆನಂದ ನಾಯ್ಕ ಅವರು ಪ್ರೀತಿಸುತ್ತಿತ್ತು, ಈ ಬಗ್ಗೆ ಅವರ ವಿವಾಹ ನಿಶ್ಚಿತಾರ್ಥವನ್ನು ತಪ್ಪಿಸುವ ಉದ್ಧೇಶದಿಂದ ಆರೋಪಿ ಆನಂದ ನಾಯ್ಕ ಅವರ ಸೂಚನೆ ಮೇರೆಗೆ ಪ್ರವೀಣ್ ನಾಯ್ಕ ಬೆಳ್ತಂಗಡಿ ಮತ್ತು ಅವರ ಸಂಗಡಿಗರು ಒಟ್ಟು ಸೇರಿ ಸುರೇಶ್ ಅವರನ್ನು ಕೊಲೆಗೆ ಸಂಚು ರೂಪಿಸಿದ್ದಾಗಿದೆ. ಆ ಪ್ರಯುಕ್ತ ಯುವಕ ಸುರೇಶ್ ಅವರನ್ನು ಎ. ೨೯ರಂದು, ಗಂಗಾ ಕಲ್ಯಾಣ ಯೋಜನೆಯಲ್ಲಿ ಹಣ ಸಿಗುವ ಮಾಹಿತಿ ನೀಡುವುದಾಗಿ ಕರೆಸಿಕೊಂಡು ನಾಗರಾಜ್ ಮೂಲ್ಯ ಅವರ ಓಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಂತೆ ಸೋಮಂತ್ಕಡ -ದಿಡುಪೆ ರಸ್ಥೆಯಲ್ಲಿ ಕುತ್ತಿಗೆಗೆ ನೈಲಾನ್ ಹಗ್ಗದಿಂದ ಬಿಗಿದು ಕೊಲೆಗೈದು ಬಳಿಕ ಗೋಣಿಚೀಲದಲ್ಲಿ ಸುತ್ತಿ ಧರ್ಮಸ್ಥಳ- ಪಟ್ರಮೆ ರಸ್ತೆಯ ಬದಿ ಎಸೆದು ಹೋಗಿದ್ದರು. ಶವದ ಗುರುತು ಪತ್ತೆಯಾಗದಿರಲಿ ಎಂದು ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದರು.
ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಅವರ ನೇತೃತ್ವದ ವಿಶೇಷ ತನಿಖಾ ತಂಡ ಪ್ರಕರಣದ ಜಾಡು ಹಿಡಿದು, ಮೊಬೈಲ್ ಟ್ರೇಸಿಂಗ್ ಮೂಲಕ ಇಡೀ ಕೊಲೆ ಪ್ರಕರಣವನ್ನು 48 ಗಂಟೆಗಳೊಳಗಾಗಿ ಪತ್ತೆಹಚ್ಚಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂಬಂಧ ಮಲವಂತಿಗೆ ಗ್ರಾಮಸ್ಥರು ಇಲ್ಲಿನ ತಾ.ಪಂ ಸದಸ್ಯ ಜಯರಾಮ ಎ, ಸಾಮಾಜಿಕ ಕಾರ್ಯಕರ್ತರಾದ ವೀರೇಶ್ವರ ಮರಾಠೆ, ದಿನೇಶ್ ಗೌಡ ಅವರ ನೇತೃತ್ವದಲ್ಲಿ ಸುಮಾರು ೫೦ಕ್ಕೂ ಅಧಿಕ ಮಂದಿ ಬೆಳ್ತಂಗಡಿ ಠಾಣೆಗೆ ಆಗಮಿಸಿ ಪೊಲೀಸರುನ್ನು ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.