ಧರ್ಮಸ್ಥಳ ಪಟ್ರಮೆ ರಸ್ತೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ : ಪ್ರಕರಣ ಭೇದಿಸಿದ ಪೊಲೀಸರು

Advt_NewsUnder_1
Advt_NewsUnder_1

  dharmasthala shava copyಧರ್ಮಸ್ಥಳ : ಇಲ್ಲಿನ ಪಟ್ರಮೆ ರಸ್ತೆಯ ಸಮೀಪ ಎ.೩೦ ರಂದು ಅಪರಿಚಿತ ಗಂಡಸಿನ ಶವ ಬೆಂಕಿ ಹಚ್ಚಿಕೊಂಡು ಬಹುತೇಕ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಭಾಗಗಳು ಬಹುತೇಕ ಸುಟ್ಟು ಕರಕಲಾಗಿದ್ದು, ಇದೊಂದು ವ್ಯವಸ್ಥಿತ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಪೊಲೀಸರಿಗೆ ಶಂಕೆ ಮೂಡಿತ್ತಾದರೂ ಪ್ರಾರಂಭಿಕ ಹಂತದ ತನಿಖೆಯ ವೇಳೆಯೇ ಇದು ಕೊಲೆ ಪ್ರಕರಣ ಎಂದು ದೃಢಪಟ್ಟಿದೆ. ಧರ್ಮಸ್ಥಳ ಪಟ್ರಮೆ ರಸ್ತೆಯಲ್ಲಿ ಧರ್ಮಸ್ಥಳಕ್ಕಿಂತ ಸುಮಾರು 3 ಕಿ.ಮೀ. ದೂರದಲ್ಲಿ ಈ ಘಟನೆ ಬೆಳಕಿಗೆ ಬಂದಿತ್ತು. ಊರವರು ಮಾತ್ರ ಹೆಚ್ಚಾಗಿ ಬಳಸುವ ಈ ರಸ್ತೆಯ ಮೂಲಕ ಕೇವಲ 6-7 ಕಿ.ಮೀ. ಪ್ರಯಾಣಿಸಿದರೆ ಪಟ್ರಮೆ ಊರು ಸಿಗುತ್ತದೆ. ಹೆಚ್ಚಾಗಿ ವಾಹನ ಮತ್ತು ಜನ ಸಂಚಾರ ಇಲ್ಲದ ಈ ರಸ್ತೆಯಲ್ಲಿ ಈ ಗಂಡಸಿನ ಮೃತದೇಹ ಪತ್ತೆಯಾಗಿತ್ತು. ದೇಹ ಇದ್ದ ಜಾಗದಲ್ಲೂ ಕೂಡ ಬೆಂಕಿಯಿಂದ ಸುಟ್ಟ ಕುರುಹು ಕಂಡು ಬಂದಿತ್ತು. ದೇಹದ ಮೇಲೆ ಇದ್ದ ಪ್ಲಾಸ್ಟಿಕ್ ಗೋಣಿ ಚೀಲ ಕೂಡ ಉರಿದುಹೋಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ವ್ಯಕ್ತಿ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಸುರೇಶ್ ನಾಯ್ಕ(29ವ) ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಗಳಾದ ಆನಂದ ನಾಯ್ಕ ಸುಲ್ಕೇರಿ, ಲೋಕೇಶ್ ಮೂಲ್ಯ ಫರಂಗಿಪೇಟೆ, ಚರ್ಚ್ ರೋಡ್ ಬೆಳ್ತಂಗಡಿಯ ಪ್ರವೀಣ್ ನಾಯ್ಕ, ವಿನಯ ಪೂಜಾರಿ ಚಾರ್ಮಾಡಿ, ನಾಗರಾಜ್ ಮೂಲ್ಯ ಪಕ್ಕಿದಕಲ ಬೆಳ್ತಂಗಡಿ, ಪ್ರಕಾಶ್ ನಾಯ್ಕ ಮೂಡುಕೋಡಿ ವೇಣೂರು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.