ಬೆಳ್ತಂಗಡಿ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ವತಿಯಿಂದ ರಾಷ್ಟ್ರಾಧ್ಯಂತ ಹೋರಾಟಗಳನ್ನು ನಡೆಸಲಾಗುತ್ತಿದ್ದು ಅದರ ಎರಡನೇ ಹಂತದ ಕಾರ್ಯಕ್ರಮವಾಗಿ ಎ. 25 ರಂದು ದೇಶಾಧ್ಯಂತ ಎಲ್ಲಾ ಶಿಕ್ಷಣ ಇಲಾಖೇ ಕಚೇರಿ ಮುಂದೆ ಶಿಕ್ಷಕರ ಏಕದಿನ ಮೌನ ಧರಣಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಇಒ ಕಚೇರಿ ಎದುರು ಕೂಡ ನಡೆಯಿತು.
7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಪ್ರಾಥಮಿಕ ಶಿಕ್ಷಣ ಮಂಡಳಿ ರಚಿಸಬೇಕು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಎಲ್ಕೆಜಿ, ಯುಕೆಜಿ ಆರಂಭಿಸಬೇಕು, ಶಾಲೆಗೊಬ್ಬ ಮುಖ್ಯೋಪಾಧ್ಯಾಯ ನೇಮಕ, ಶಿಕ್ಷಕ ಶಿಕ್ಷಕಿ ವಿದ್ಯಾರ್ಥಿ ಅನುಪಾತ ಮಾಡಬೇಕು ಎಂಬಿತ್ಯಾಧಿ ಪ್ರಮುಖ ಬೇಡಿಕೆಗಳು ಈ ಬಾರಿಯ ಹೋರಾಟದಲ್ಲಿತ್ತು.