HomePage_Banner_
HomePage_Banner_

ಕಕ್ಕಿಂಜೆ: ಐದು ಜೋಡಿ ಸಾಮೂಹಿಕ ವಿವಾಹ

kakkinje samuhika vivaha copyಕಕ್ಕಿಂಜೆ : ಮನಾರತ್ ಅಲ್ ಮಸಾಅದ್ ವೆಲ್ಫೇರ್ ಅಸೋಸಿಯೇಶನ್ ಇದರ ವತಿಯಿಂದ 2ನೇ ವರ್ಷದ 5 ಜೋಡಿ ಸಾಮೂಹಿಕ ವಿವಾಹ ಸಮಾರಂಭ ಎ.16 ರಂದು ಜರುಗಿತು.
ಸಾಮೂಹಿಕ ವಿವಾಹ ಪುಣ್ಯ ಕಾರ್ಯವಾಗಿದ್ದು ಬಡ ಕುಟುಂಬಗಳ ಯುವತಿಯರಿಗೆ ಬದುಕನ್ನು ನೀಡುತ್ತದೆ. ಮದುವೆಗೆ ಸಾಲ ಮಾಡಿ ಅದನ್ನು ತೀರಿಸಲು ಜೀವನವಿಡೀ ಪರದಾಡುವುದನ್ನು ತಪ್ಪಿಸಲು ಸರಳ ಸಾಮೂಹಿಕ ವಿವಾಹಗಳಿಂದ ಸಾಧ್ಯ ಎಂದು ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ವಸಂತ ಬಂಗೇರರು ಹೇಳಿದರು. ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ನಿಖಾಹ್ ನೇತೃತ್ವ ವಹಿಸಿದ್ದರು.
ಕಕ್ಕಿಂಜೆ ಎಂಬ ಈ ಪ್ರದೇಶದಲ್ಲಿ 5 ಪವನ್ ಚಿನ್ನ, 25 ಸಾವಿರ ನಗದು, ಮದುವೆಯ ಪೂರ್ಣ ಖರ್ಚು ವೆಚ್ಚಗಳನ್ನು ಭರಿಸಿ ಎರಡು ವರ್ಷಗಳಲ್ಲಿ 16 ಜೋಡಿ ಮದುವೆ ಮಾಡಿ ಮನಾರತ್ ಅಲ್ ಮಸಾಅತ್ ವೆಲ್ಫೇರ್ ಸಮಿತಿಯು ಬಡ ಹೆಣ್ಣು ಮಕ್ಕಳ ಕಣ್ಣೀರೊರೆಸುವ ಕಾರ್ಯವನ್ನು ಮಾಡುತ್ತಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ದಾರುಸ್ಸಲಾಂ ದಅವಾ ಕಾಲೇಜು ಬೆಳ್ತಂಗಡಿ ಇದರ ಪ್ರಾಂಶುಪಾಲರಾದ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ನೆರವೇರಿಸಿ ಶುಭ ಹಾರೈಸಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷರಾದ ಕೆ.ಪಿ. ಅಬ್ದುಲ್ ಜಬ್ಬಾರ್ ಉಸ್ತಾದ್ ದುವಾ ನೆರವೇರಿಸಿದರು. ಕಕ್ಕಿಂಜೆ ಮುದರ್ರಿಸ್ ಐ.ಕೆ. ಮೂಸಾ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕರಾದ ಕೆ. ವಸಂತ ಬಂಗೇರ, ಕೆ.ಪಿ. ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್. ಮುಹಮ್ಮದ್, ಬೆಳ್ತಂಗಡಿ ದವ್‌ವಾ ಕಾಲೇಜು ಚೇರ್‌ಮೆನ್ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್, ಸಲೀಂ ತಂಙಳ್, ಹೈದ್ರೋಸ್ ತಂಙಳ್ ನಂದನ, ಬೆಳ್ತಂಗಡಿ ಖತೀಬ್ ಹನೀಫ್ ದಾರಿಮಿ, ಸೂರಲ್‌ಪಾಡಿ ಖತೀಬ್ ಶಾಫಿ ಇರ್ಪಾನಿ ಸಾಂದರ್ಭಿಕವಾಗಿ ಮಾತನಾಡಿದರು. ಬಶೀರ್ ದಾರಿಮಿ ಬೆಳ್ತಂಗಡಿ, ಹಂಝ ಮುಸ್ಲಿಯಾರ್ ಚಕ್ಕಮಕ್ಕಿ, ಕಕ್ಕಿಂಜೆ ಮಸೀದಿ ಅಧ್ಯಕ್ಷ ಎ. ಅಬ್ದುಲ್ಲ ಹಾಜಿ, ಹಸೈನಾರ್ ಹಾಜಿ, ಮೊದಿನ್ ಕುಂಞಿ ಹಾಜಿ, ಹಮ್ಮಬ್ಬ ಹಾಜಿ, ಅಡ್ಡೂರ್ ಹಾಜಿ, ಸ್ವಾಲಿ ಹಾಜಿ, ಸಾಜಿಲ್ ಉಜಿರೆ, ದ.ಕ. ಜಿಲ್ಲಾ ಮುಸ್ಲಿಂ ಐಕ್ಯತಾ ಸಮಿತಿಯ ಅಧ್ಯಕ್ಷ ಕೆಂಫಿ ಮುಸ್ತಫ, ಹನೀಫ್ ಗೋಲ್ತಮಜಲು, ಬಿಎಂ. ಅಬ್ದುಲ್ ಹಮೀದ್, ನಝೀರ್ ಮಠ, ಎಪಿಎಂಸಿ ಸದಸ್ಯ ಗಫೂರ್ ಪುದುವೆಟ್ಟು, ಮುಹಮ್ಮದ್ ನೆರಿಯ, ಅದ್ದು ಬೀಟಿಗೆ, ಕಾರ್ಯದರ್ಶಿ ಬಶೀರ್, ಸಮಿತಿಯ ಉಪಾಧ್ಯಕ್ಷರಾದ ರಹ್ಮಾನ್ ಕೆ.ಎ., ಖಾದರ್ ಕೆ.ಎ, ಹಮೀದ್ ಚಾರ್ಮಾಡಿ, ಸಂಚಾಲಕರಾದ ಅಬ್ದುಲ್ಲ ಎ.ಕೆ., ಶರೀಫ್ ಹೆಚ್.ಎ., ಇಲ್ಯಾಸ್ ಅಹ್ಮದ್, ಮಸೀದಿ ಕಾರ್ಯದರ್ಶಿ ದಾವೂದ್, ಹನೀಫ್ ಪಿ.ಕೆ, ಅಶ್ರಫ್ ಹೆಚ್.ಎ, ಇಸ್ಮಾಯಿಲ್ ಹನೀಫ್, ಹಾರಿಸ್ ಹೋಟೆಲ್ ಮಾಲಕ ಅಶ್ರಫ್, ಯು.ಕೆ. ರಶೀದ್, ಬಶೀರ್ ವಗ್ಗ, ಅಹ್ಮದ್ ಪಿ.ಕೆ., ಅಹ್ಮದ್ ಬಣ್‌ಕಲ್, ಇಸ್ಮಾಯಿಲ್ ಇಂಡಿಯನ್ ಚಿಕನ್, ಅಹ್ಮದ್ ಪಿ.ಕೆ. ಮೊದಲಾದವರು ಉಪಸ್ಥಿತರಿದ್ದರು. ಕಕ್ಕಿಂಜೆ ಮನಾರತ್ ಅಲ್ ಮಸಾಅದ್ ವೆಲ್ಫೇರ್ ಸಮಿತಿಯ ಅಧ್ಯಕ್ಷ ಹಸನಬ್ಬ ಹಾಜಿ ಚಾರ್ಮಾಡಿ ಸ್ವಾಗತಿಸಿದರು.
ಕೆ.ಎಂ. ಕೂಡುಂಗಾಯಿ ಹಾಗೂ ಸಮಿತಿ ಸದಸ್ಯ ಶರೀಫ್ ಕಕ್ಕಿಂಜೆ ವಂದಿಸಿ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.