HomePage_Banner_
HomePage_Banner_
HomePage_Banner_

ಧರ್ಮಸ್ಥಳದಲ್ಲಿ 500 ಮಂದಿ ಪಾನಮುಕ್ತರ ಶತಮಾನೋತ್ಸವ ಪಾನಮುಕ್ತರಿಗೆ ದೇವರು ಭಾಗ್ಯದ ಬಾಗಿಲು ತೆರೆದಿದ್ದಾರೆ: ಡಾ| ಹೆಗ್ಗಡೆ

Advt_NewsUnder_1

janajagruthi vedike madyavarjana shibira copyಧರ್ಮಸ್ಥಳ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ಮದ್ಯವರ್ಜನ ಶಿಬಿರಗಳಲ್ಲಿ ಹುಕ್ಕೇರಿ, ಸಾಗರ, ದಾವಣಗೆರೆ, ಚಿತ್ರದುರ್ಗ, ಹೊಸನಗರ, ಕಡೂರು, ಹಾವೇರಿ, ಬೆಳಗಾಮ್ ಕಡೆಯಿಂದ ಒಟ್ಟು 500 ಮಂದಿ ಪಾನಮುಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶತದಿನೋತ್ಸವ ಮತ್ತು ದೃಢಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂಧರ್ಭದಲ್ಲಿ ಧರ್ಮಸ್ಥಳದ ಮಹೋತ್ಸವದಲ್ಲಿ ಹಮ್ಮಿಕೊಳ್ಳಲಾದ ಸಭಾ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿಗಳಾದ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನೂರು ದಿನದ ಅಗ್ನಿಪರೀಕ್ಷೆಯಿಂದ ಪಾರಾಗಿ ಕ್ಷೇತ್ರಕ್ಕೆ ಬರುವ ಅರ್ಹತೆ, ಯೋಗ್ಯತೆಯಿಂದಲೇ ಪರಿವರ್ತನೆಯಾಗಿ ಬಂದಿರುವುದು ಅಭಿನಂದನೀಯವಾದುದು. ದೇವರು ಭಾಗ್ಯದ ಬಾಗಿಲು ತೆರೆದಿದ್ದಾರೆ. ಅಮಲಿನ ಪ್ರವಾಹದಲ್ಲಿ ಕೊಚ್ಚಿ ಹೋಗುವ ಕುಟುಂಬವನ್ನು ಶಿಬಿರವೆಂಬ ಹಗ್ಗದ ಮೂಲಕ ಮೇಲಕ್ಕೆತ್ತಿ ರಕ್ಷಿಸಲಾಗಿದೆ. ಇದನ್ನು ಉಳಿಸಿಕೊಂಡು ಮನೆಯಲ್ಲಿ ಸೌಹಾರ್ಧತೆಯ ಜೀವನ ನಡೆಸಿ ಎಂದು ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್.ಎಚ್.ಮಂಜುನಾಥ್‌ರವರು, ಚೌಕಬಾರ ಗ್ರಾಮೀಣ ಜಾನಪದ ಕ್ರೀಡೆಯ ಮೂಲಕ ಸಕಾರಾತ್ಮಕವಾದ ಶಕ್ತಿಯಿಂದ ನಕರಾತ್ಮಕವಾದ ಶಕ್ತಿಯನ್ನು ಸೋಲಿಸಿದಂತೆ ಶಿಬಿರದ ಮೂಲಕ ಮನಸ್ಸು ಗಟ್ಟಿಯಾದ ನವಜೀವನ ಸದಸ್ಯರ ಸಂಕಲ್ಪವನ್ನು ಗಟ್ಟಿಗೊಳಿಸಿ ಸಂಬಂಧವನ್ನು ಬಲಪಡಿಸಿ ಜ್ಞಾನಿಗಳನ್ನಾಗಿ ಪರಿವರ್ತಿಸುವ ವೇದಿಕೆಯ ಪ್ರಯತ್ನ ಮಹತ್ವಕಾಂಕ್ಷೆಯದ್ದಾಗಿದೆ ಎಂದು ಮಾಹಿತಿ ನೀಡಿದರು. ಇದೇ ಸಂಧರ್ಭದಲ್ಲಿ ರಾಜ್ಯದ 4 ಕಡೆಗಳಾದ ತೀರ್ಥಹಳ್ಳಿ, ಸಾಗರ, ನವಲಗುಂದ, ಹರಪ್ಪನಹಳ್ಳಿಗಳಲ್ಲಿ ಶಿಬಿರಗಳು ನಡೆಯುತ್ತಿದೆ. ಒಟ್ಟು 413 ಶಿಬಿರಾರ್ಥಿಗಳು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜನಜಾಗೃತಿ ವೇದಿಕೆಯ ನಿರ್ದೇಶಕರಾದ ವಿವೇಕ್ ವಿ.ಪಾಸ್ ತಿಳಿಸಿದರು
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಕರಿಬಸಮ್ಮ, ಮಂಜುನಾಥ್, ಕಡೂರಿನ ಗಿರೀಶ್, ಮಂಜುನಾಥ್, ಲೋಕೇಶ್ವರ, ಮುಕುಂದ, ಸಾಗರದ ದೇವರಾಜ್, ನವೀನ್ ಕುಮಾರ್, ಬೆಳಗಾವಿಯ ಅನಿಲ್ ಶಂಕರ ಗೌಡ, ರಾಜು ಬೆಲ್ಲದ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಶಿಬಿರಾಧಿಕಾರಿ ಮನೋಹರ್, ದಿವಾಕರ್ ಉಪಸ್ಥಿತರಿದ್ದರು. ಭಾಗವಹಿಸಿದ್ದ ನವಜೀವನ ಸದಸ್ಯರಿಗೆ ಹೆಮ್ಮೆಯ ನವಜೀವನ ಸದಸ್ಯ ಎಂಬ ಬ್ಯಾಡ್ಜ್ ನೀಡಲಾಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.