ಉಜಿರೆ: ದೇವಿಕಿರಣ್ ಕಲಾನಿಕೇತನದ ನೃತ್ಯಾರ್ಪಣ

ujire devikirana nruthyarpana copyಉಜಿರೆ : ಭಾರತೀಯ ಸಂಸ್ಕೃತಿಯ ಪ್ರತೀಕಗಳಾದ ಸಂಗೀತ, ನೃತ್ಯ, ಯಕ್ಷಗಾನ, ಭರತನಾಟ್ಯ ಮೊದಲಾದ ಕಲೆಗಳಿಗೆ ದೇವಸ್ಥಾನ ಆಶ್ರಯತಾಣವಾಗಿದೆ. ವಿದ್ಯಾ ಕೇಂದ್ರಗಳ ಜತೆಗೆ ಉಜಿರೆ ದೇವಸ್ಥಾನ ಪರಿಸರ ವಿವಿಧ ಸಾಂಸ್ಕೃತಿಕ ಕಲೆಗಳ ಆವಾಸ ಸ್ಥಾನವಾಗಿ ಕಲಾಭಿಮಾನಿಗಳ ಪ್ರೋತ್ಸಾಹ ತೃಪ್ತಿ ನೀಡಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯರು ನುಡಿದರು.
ಅವರು ಎ.17 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆದ ದೇವಿಕಿರಣ್ ಕಲಾನಿಕೇತನ ಉಜಿರೆ ಇದರ 7ನೇ ವರ್ಷದ ವಾರ್ಷಿಕೋತ್ಸವ ನೃತ್ಯಾರ್ಪಣ 2017 ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ವಕಲಾ ನಿಕೇತನದ ನಿರ್ದೇಶಕ ಕರ್ನಾಟಕ ಕಲಾ ಶ್ರೀ ಕುದ್ಕಾಡಿ ವಿಶ್ವನಾಥ ರೈ ಗುರುವಂದನೆ ಸ್ವೀಕರಿಸಿ ದೈಹಿಕ, ಮಾನಸಿಕ ವೈಚಾರಿಕ ಅಂಶಗಳನ್ನೊಳಗೊಂಡ ಭರತನಾಟ್ಯ ಶ್ರೀಮಂತ ಕಲೆಯೆಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಕುದ್ಕಾಡಿ ವಿಶ್ವನಾಥ ರೈ ನಯನಾ ವಿ.ರೈ ದಂಪತಿಗಳು ಹಾಗೂ ಶೃತಿಲಯ ಕ್ಲಾಸಿಕಲ್ಸ್ ನಿರ್ದೇಶಕಿ ಶ್ಯಾಮಲಾ ನಾಗರಾಜ್ ಅವರನ್ನು ಗುರುವಂದನೆಯಿಂದ ಅಭಿನಂದಿಸಲಾಯಿತು. ಸಮ್ಮಾನಿತರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ದೇವಿಕಿರಣ್ ಕಲಾನಿಕೇತನದ ಶಿಕ್ಷಕಿ ಪೃಥ್ವಿ ಕಿರಣ್ ಪ್ರಸ್ತಾಪಿಸಿದರು.
ಸ್ವಾತಿ ಜಯರಾಂ, ಡಾ. ಶೃತಿಕಿರಣ್ ಮೊದಲಾದವರು ಉಪಸ್ಥಿತರಿದ್ದರು. ಚಂದ್ರಪ್ಪ ವಿರೂಪಿಸಿದ ಕಾರ್ಯಕ್ರಮದಲ್ಲಿ ಮೇದಿನಿ ಗೌಡ ವಂದಿಸಿದರು. ಕಲಾನಿಕೇತನದ ವಿದ್ಯಾರ್ಥಿಗಳಿಂದ ಭರತನಾಟ್ಯ ನೃತ್ಯ ಪ್ರದರ್ಶಿಸಲ್ಪಟ್ಟಿತು. ಹಾಡುಗಾರಿಕೆಯಲ್ಲಿ ವಸಂತ ಕುಮಾರ್ ಗೋಸಾಳ ಕಾಸರಗೋಡು, ಮೃದಂಗದಲ್ಲಿ ಬಾಲಚಂದ್ರ ಭಾಗವತ,ಉಡುಪಿ,ಕೊಳಲಿನಲ್ಲಿ ಕೃಷ್ಣಗೋಪಾಲ ಪುಂಜಾಲಕಟ್ಟೆ ,ಕೀ ಬೋರ್ಡ್‌ನಲ್ಲಿ ಸಾಯಿನಾರಾಯಣ್ ಕಲ್ಲಡ್ಕ ಮತ್ತು ನಟುವಾಂಗದಲ್ಲಿ ಸ್ವಾತಿಜಯರಾಂ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.