HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಮಂಡಲಕ್ಕೊಂದು ಮನೆ ಯೋಜನೆಯ ಶುಭಾರಂಭ

melanthabettuಮೇಲಂತಬೆಟ್ಟು : ಭಾರತ ರತ್ನ ಡಾ. ಬಿ. ಆರ್.ಅಂಬೇಡ್ಕರ್ ಅವರ 125ನೇ ಜನ್ಮ ಜಯಂತಿಯ ಅಂಗವಾಗಿ, ಪ್ರಧಾನಿ ನರೇಂದ್ರ ಮೋದಿಯವರ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಘೋಷದ ಅಡಿಯಲ್ಲಿ ಬಿಜೆಪಿ ಯುವ ಮೋರ್ಚಾ, ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಯೋಜಿಸಲಾದ ಮಂಡಲಕ್ಕೊಂದು ಮನೆ ಯೋಜನೆಯನ್ನು ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಕೆಲ್ಲಕೆರೆಯ ಕಾಲನಿಯಲ್ಲಿ ಶುಭಾರಂಭ ಮಾಡಲಾಯಿತು. ಈ ಕುಟುಂಬಕ್ಕೆ ಸದೃಢ ಗ್ರಹ ನಿರ್ಮಾಣ ಮೊದಲಾಗಿ ಕುಟುಂಬಸ್ಥರ ಸರ್ವತೋಮುಖ ಅಭಿವೃದ್ಧಿಗೆ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕಂಕಣಭದ್ಧವಾಗಿದೆ.
ಬೆಳ್ತಂಗಡಿ ಯುವ ಮೋರ್ಚಾ ಅಧ್ಯಕ್ಷರಾದ ಸಂಪತ್ ಸುವರ್ಣ ಹಾಗೂ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ಅವರ ನೇತೃತ್ವದಲ್ಲಿ ಈ ಕಾರ್ಯ ನೆರವೇರಲಿದೆ. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ರಂಜನ್ ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ರೋಹಿತ್ ಪುಂಜಾಲಕಟ್ಟೆ, ಚಂದ್ರಹಾಸ ಮೇಲಂತಬೆಟ್ಟು, ಸತೀಶ್ ಗ್ರಾಮ ಪಂಚಾಯತ್ ಸದಸ್ಯರು ಮೇಲಂತಬೆಟ್ಟು, ಉಮೇಶ್ ಮಡಂತ್ಯಾರ್ ಮತ್ತಿತರರು ಭಾಗವಹಿಸಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ, ದಕ್ಷಿಣ ಕನ್ನಡ ಜಿಲ್ಲೆ ಇದರ ಈ ಯೋಜನೆಗೆ ಶುಭಕೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.