HomePage_Banner_
HomePage_Banner_
HomePage_Banner_

ಶಾಲಾ ದಾಖಲಾತಿಗೆ ಜನ್ಮ ದಿನಾಂಕ ಕಡ್ಡಾಯ

Advt_NewsUnder_1

ಬೆಳ್ತಂಗಡಿ : 2017-18ನೇ ಸಾಲಿನಿಂದ 1ನೇ ತರಗತಿಗೆ ಸೇರ‍್ಪಡೆಗೊಳ್ಳಬೇಕಾದರೆ ಮಗುವಿಗೆ ಖಡ್ಡಾಯವಾಗಿ 5 ವರ್ಷ 10 ತಿಂಗಳು ಆಗಬೇಕು ಎಂದು ಸರಕಾರ ಆದೇಶ ನೀಡಿದ್ದು,10ದಿನ ಕಡಿಮೆಯಾದರೂ ಮಗುವನ್ನು ಶಾಲೆಗೆ ಸೇರ‍್ಪಡೆಗೊಳಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವರ್ಷದಿಂದ ಮಗು ಒಂದನೇ ತರಗತಿಗೆ ಸೇರಬೇಕಾದರೆ 5 ವರ್ಷ 10 ತಿಂಗಳು ತುಂಬಲೇ ಬೇಕು ಎಂಬ ನಿಯಮ ಜಾರಿ ಮಾಡಲಾಗಿದೆ. 1 ದಿನ ಕಡಿಮೆಯಾದರೂ ಮಗು ತರಗತಿಗೆ ಸೇರಲು ಅವಕಾಶ ಇಲ್ಲ. 5 ವರ್ಷ 10 ತಿಂಗಳಿಗೆ 2 ಅಥವಾ 2 ದಿನ ಕಡಿಮೆ ಇದ್ದರೂ ಆ ಮಗುವಿನ ಪ್ರವೇಶದ ಅರ್ಜಿಯನ್ನು ಕಂಪ್ಯೂಟರ್ ಸ್ವೀಕರಿಸುವುದಿಲ್ಲ,
ಕಂಪ್ಯೂಟರ್ ಅಂತಹ ಮಗುವಿನ ದಾಖಲಾತಿಗೆ ಅರ್ಹತೆಯನ್ನು ತೋರಿಸುತ್ತಿಲ್ಲ. ಇದರಿಂದಾಗಿ ಇಡೀ ವರ್ಷದ ಶಿಕ್ಷಣ ಮಗುವಿಗೆ ನಷ್ಟವಾಗಲಿದೆ. ಮಗು ಎಸ್.ಎಸ್.ಎಲ್.ಸಿ ಆಗುವಾಗ ಮತ್ತೆ ಜನ್ಮ ದಿನಾಂಕವನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಬೇಕಾಗುವುದರಿಂದ ಆ ಸಂದರ್ಭ ಜನ್ಮ ದಿನಾಂಕ ಹೊಂದಾನಿಕೆಯಾಗದೇ ಇದ್ದರೆ ಅಥವಾ ನಿಗದಿತ ವಯಸ್ಸು ಆಗದೇ ಇದ್ದರೆ ಆ ವರ್ಷ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಬಾರದೇ ಉಂಟಾಗಬಹುದಾದ ಸಮಸ್ಯೆಯ ಹಿನ್ನಲೆಯಲ್ಲಿ ಸರಕಾರ ಈ ನಿಯಮವನ್ನು ಜಾರಿ ಮಾಡಿದೆ. ಆದರೆ ಇದು ಕನ್ನಡ ಶಾಲೆಗಳಿಗೆ ಸೇರುವ ಮಕ್ಕಳಿಗೆ ಮಾತ್ರ ಹೆಚ್ಚು ಸಮಸ್ಯೆಯಾಗುತ್ತದೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ 3ವರ್ಷ 10 ತಿಂಗಳಲ್ಲಿ ಎಲ್.ಕೆ.ಜಿಗೆ ಸೇರ‍್ಪಡೆಯಾಗುತ್ತಿರುವು ದರಿಂದ ಈ ಸಮಸ್ಯೆ ಆ ಮಕ್ಕಳಿಗೆ ಉಂಟಾಗದು.
ಸಮಸ್ಯೆ ಹೇಗೆ?: ಅಂಗನವಾಡಿಗೆ 3 ವರ್ಷ ದಾಟಿದ ಮಗುವನ್ನು ಕಳುಹಿಸಲಾಗುತ್ತದೆ. ಅಲ್ಲಿಯ ಶಿಕ್ಷಣದ ಬಳಿಕ 1ನೇ ತರಗತಿಗೆ ಸೇರಿಸಲಾಗುತ್ತದೆ. ಆದರೆ ಎಲ್.ಕೆ.ಜಿ, ಯು.ಕೆ.ಜಿ ದಾಖಲಾತಿ ಸಂದರ್ಭದಲ್ಲೇ ವಯಸ್ಸಿನ ಆಧಾರದಲ್ಲೇ ಶಾಲೆಗೆ ದಾಖಲಾತಿ ಮಾಡಲಾಗುತ್ತಿದೆ. ಅಂತಹ ಮಗುವಿಗೆ ಮುಂದಿನ ತರಗತಿಗೆ ಹೋಗಲು ಸಮಸ್ಯೆಯಾಗುವುದಿಲ್ಲ. ಆದರೆ ಕನ್ನಡ ಮಾಧ್ಯಮ ಶಾಲೆಗೆ ಸರಕಾರದ ಈ ಹೊಸ ನಿಯಮ ಸಂಕಷ್ಟ ತರಲಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.