ಪಡ್ಡಂದಡ್ಕ: ಸಾಮೂಹಿಕ ವಿವಾಹ ಸಮಾರಂಭ ಸಾಮೂಹಿಕ ವಿವಾಹದಿಂದ ನೆಮ್ಮದಿಯ ಜೀವನ: ಶಾಸಕ ಬಂಗೇರ

paddandaka samuhika vivaha copyಪಡ್ಡಂದಡ್ಕ : ಆರ್ಥಿಕವಾಗಿ ಸೊರಗಬಾರದೆಂಬುದು ಸಾಮೂಹಿಕ ವಿವಾಹ ಸಮಾರಂಭದ ಉದ್ದೇಶವಾಗಿದ್ದು, ಅದೊಂದು ಪುಣ್ಯದ ಕೆಲಸವಾಗಿದೆ. ಸರಳತೆ ಪ್ರತೀಕವಾಗಿರುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾದವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ರಾಜ್ಯ ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಮಾ.26ರಂದು ಎಸ್‌ಕೆಎಸ್‌ಎಸ್ ಎಫ್ ಪಡ್ಡಂದಡ್ಕ ಶಾಖೆ ಆಶ್ರಯದಲ್ಲಿ ನೂರುಲ್ ಹುಧಾ ಜುಮ್ಮಾ ಮಸೀದಿ ಪಡ್ಡಂದಡ್ಕ ಇಲ್ಲಿ ಜರಗಿದ 4ನೇ ವರ್ಷದ ಸರಳ ಸಾಮೂಹಿಕ ವಿವಾಹ ಮತ್ತು ಸನ್ಮಾನ ಸಮಾರಂಭದಲ್ಲಿ ಮಸೀದಿ ಆವರಣದ ಇಂಟರ್‌ಲಾಕ್ ಹೊರಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳದ ಡಾ| ವೀರೇಂದ್ರ ಹೆಗ್ಗಡೆಯವರ ಕಾರ್ಯ ಯೋಜನೆಯಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ನಡೆಯುತ್ತಿದೆ. ಎಸ್‌ಕೆಎಸ್‌ಎಸ್‌ಎಫ್ ಕೂಡಾ ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪಾಣಕ್ಕಾಡ್ ಅಸ್ಸಯ್ಯದ್ ಶಫೀಕ್ ಅಲೀ ಶಿಹಾಬ್ ತಂಙಳ್ ಆಶೀರ್ವಚನ ನೀಡಿದರು. ಜಿಲ್ಲಾ ಸಮಸ್ತ ಕೇಂದ್ರ ಮುಶಾವರದ ಸದಸ್ಯರು ಪಡ್ಡಂದಡ್ಕ ಜುಮ್ಮಾ ಮಸೀದಿಯ ಖಾಝಿ ಅಲ್‌ಹಾಜ್ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ನೇತೃತ್ವ ವಹಿಸಿದ್ದರು. ಪಡ್ಡಂದಡ್ಕ ನೂರುಲ್ ಹುಧಾ ಜಮ್ಮಾ ಮಸೀದಿಯ ಅಧ್ಯಕ್ಷ ಬಿ. ಮಹಮ್ಮದ್ ಗಾಂಧಿನಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತೋಡಾರು ಶಂಸುಲ್ ಉಲಮಾ ಕಾಲೇಜಿನ ಅಧ್ಯಕ್ಷ ಕೆ.ಎಂ. ಉಸ್ಮಾನುಲ್ ಫೈಝಿ ಪ್ರಾಸ್ತಾವಿಕವಾಗಿ ಮಾತನಾ ಡಿದರು. ರಾಜ್ಯ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಅನೀಸ್ ಕೌಸರಿ, ದ.ಕ. ಜಿಲ್ಲಾಧ್ಯಕ್ಷ ಇಸ್ಹಾಕ್ ಫೈಝಿ, ಕುಂಬ್ರ ಕೆಐಸಿ ಮೆನೇಜರ್ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಎಪಿಎಂಸಿ ಸದಸ್ಯ ನ್ಯಾಯವಾದಿ ಕೇಶವ ಬೆಳಾಲು, ಹೊಸಂಗಡಿ ಗ್ರಾ.ಪಂ. ಸದಸ್ಯ ಹರಿಪ್ರಸಾದ್ ಪಿ., ರೋಷನ್ ಮೊರಾಸ್, ಅಕ್ಬರ್ ಆಲಿ, ಶ್ರೀಪತಿ ಉಪಾಧ್ಯಾಯ, ಎಚ್. ಮಹಮ್ಮದ್, ಖಾಲಿದ್ ಪುಲಾಬೆ, ಇಸ್ಮಾಯಿಲ್ ಪೆರಿಂಜೆ, ಎಸ್‌ಕೆಎಸ್‌ಎಸ್‌ಎಫ್ ಪಡ್ಡಂದಡ್ಕ ಶಾಖೆಯ ಗೌರವಾಧ್ಯಕ್ಷ ಡಾ| ಎಂ.ಕೆ. ಗರ್ಡಾಡಿ, ಪಡ್ಡಂದಡ್ಕ ದಾರುನ್ನೂರ್ ಎಜ್ಯುಕೇಶನ್ ಸೆಂಟರ್‌ನ ಬಿಲ್ಡಿಂಗ್ ಮೆನೇಜರ್ ಅಬ್ದುಲ್ ಲತೀಫ್, ಎಸ್‌ವೈಎಸ್ ಗುರುಪುರ ವಲಯದ ಅಧ್ಯಕ್ಷ ಪಿ. ಅಬ್ದುಲ್ ರಹಿಮಾನ್ ಪೆರಿಂಜೆ, ಎಸ್‌ಕೆಎಸ್‌ಎಸ್‌ಎಫ್ ಮೂಡಬಿದಿರೆ ವಲಯದ ಅಧ್ಯಕ್ಷ ಅಝೀಜ್ ಮಾಲಿಕ್, ದ.ಕ. ಜಿಲ್ಲಾ ಮದರಸ ಮೇನೆಜ್‌ಮೆಂಟ್ ಕೋಶಾ ಧಿಕಾರಿ ಶಾಹುಲ್ ಹಮೀದ್ ಹಾಜಿ ಮೆಟ್ರೋ, ದಾರುನ್ನೂರ್ ಎಜ್ಯುಕೇಶನ್ ಸೆಂಟರ್ ಕಾಶಿಪಟ್ಣ ಇದರ ಅಧ್ಯಕ್ಷ ಪಿ.ಎಚ್. ಅಹ್ಮದ್ ಹುಸೈನ್, ಹೊಸಂಗ ಡಿ ಜುಮ್ಮಾ ಮಸೀದಿಯ ಹೆಚ್. ಶೇಖಬ್ಬ ಸೇರಿದಂತೆ ವಿವಿಧ ಮಸೀದಿಗಳ ಧರ್ಮಗುರುಗಳು, ಎಸ್‌ಕೆಎಸ್ ಎಸ್‌ಎಫ್ ಪದಾಧಿಕಾರಿಗಳು ಉಪಸ್ಥಿತರಿ ದ್ದರು.
ಇರ್ಫಾನ್ ಮೌಲವಿ ಕಲಾಯಿ ನಿರೂಪಿಸಿ ಮಹಮ್ಮದ್ ಶಾಫಿ ಕಿರೋಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.