ಉಜಿರೆ ಜನಾರ್ದನ ಸೊಸೈಟಿಯಿಂದ ಅಧ್ಯಕ್ಷರಿಗೆ ಗೌರವ ಸಮ್ಮಾನ

Kevudelu Gangadhar rao sanmana copyಉಜಿರೆ : ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಸಂಘದ ಅಧ್ಯಕ್ಷ ಎಸ್. ಗಂಗಾಧರ ರಾವ್ ಕೆವುಡೇಲು ಮತ್ತು ಗೀತಾ ದಂಪತಿಗಳಿಗೆ ಅವರ ಷಷ್ಟ್ಯಬ್ದಿ ಪ್ರಯುಕ್ತ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ನಿರ್ದೇಶಕ ಮಂಡಳಿ ಹಾಗೂ ಸಲಹಾ ಸಮಿತಿ ಸದಸ್ಯರು ಮಾ.24 ರಂದು ಸಂಘದ ಕಛೇರಿಯಲ್ಲಿ ಸರಳ ಕಾರ್ಯಕ್ರಮದಲ್ಲಿ ಸಮ್ಮಾನಿಸಿ ಗೌರವಿಸಿದರು. ನಿರ್ದೇಶಕ ಎಂ. ನಾರಾಯಣ ಭಟ್ ಅಭಿನಂದಿಸಿದರು. ಉಪಾಧ್ಯಕ್ಷ ನಾಗೇಶ ರಾವ್, ನಿರ್ದೇಶಕ ರಾದ ರಾಮ ಭಟ್ ಅಲೆವೂರಾಯ, ಲಕ್ಷ್ಮೀನಾರಾಯಣ ಭಟ್, ಶೋಭಾ ಸುರೇಶ್, ವಿಜಯಾ ಪ್ರಸಾದ್, ಸಲಹಾ ಸಮಿತಿ ಸದಸ್ಯರಾದ ರಾಘವೇಂದ್ರ ಬೈಪಾಡಿತ್ತಾಯ, ರಾಜಪ್ರಸಾದ್ ಪೋಳ್ನಾಯ, ಬಾಲಕೃಷ್ಣ ಅರಿಪ್ಪಾಡಿ ತ್ತಾಯ, ಡಾ. ಎಂ.ಎಂ. ದಯಾಕರ್, ಎಸ್. ಆರ್. ಪಟವರ್ಧನ್ (ಆಂತರಿಕ ಲೆಕ್ಕ ಪರಿಶೋಧಕ), ಸಿಬ್ಬಂದಿ ದಿವ್ಯಾ ಭಟ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ಜಿ.ಎಂ. ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀನಿವಾಸ ಮುಚ್ಚಿಂತ್ತಾಯ ಸ್ವಾಗತಿಸಿ, ಚಂದ್ರಶೇಖರ ಭಟ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.