HomePage_Banner_
HomePage_Banner_

ಪುದುವೆಟ್ಟು ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನ ಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷರಾಗಿ ಡಿ. ವೀರೇಂದ್ರ ಹೆಗ್ಗಡೆ

puduvettu.jpg1ಪುದುವೆಟ್ಟು: ಮಿಯಾರು ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಸಾಗುತ್ತಿದ್ದಂತೆ, ಮೇ 7ರಿಂದ 12ರ ವರೆಗೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಮಾ. 19ರಂದು ನಡೆದ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಗಿದೆ. ಗೌರವ ಅಧ್ಯಕ್ಷರಾಗಿ ಪೂಜ್ಯ ಡಾ| ವೀರೇಂದ್ರ ಹೆಗ್ಗಡೆ, ಅಧ್ಯಕ್ಷರಾಗಿ ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಪ್ರಧಾನ ಕಾರ್ಯದರ್ಶಿ ಪುದುವೆಟ್ಟು ಗಣೇಶ, ಕಾರ್ಯದರ್ಶಿ ಕರಂಬಾರು ರಾಧಾಕೃಷ್ಣ, ಉಪಾಧ್ಯಕ್ಷರುಗಳಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ವಲಯ ಮೇಲ್ವಿಚಾರಕ ಮಾಧವ, ಮಠ ಗಂಗಾಧರ ಗೌಡ, ಮುಜಾರ್ ದಡ್ಡು ದಾಮೋದರ ಗೌಡ, ಕೆರೆಕೋಡಿ ದಿನೇಶ್, ಸುರಳ್ಳಿ ಸುಂದರ ಪೂಜಾರಿ, ಬಲ್ಕಾಡು ಗೋಪಾಲಕೃಷ್ಣ ಇವರನ್ನು ಆಯ್ಕೆ ಮಾಡಲಾಯಿತು. ಕೋರ್ಜೆ ಅಜಯ್ ಜೈನ್, ಅರಸೊಳಿಗೆ ನಂದ ಕುಮಾರ್, ಮಠ ಕಿರಣ್ ಕುಮಾರ್, ಅಡ್ಯ ಹರೀಶ, ಸಾಂತ್ಯಾಯ ಗುತ್ತು ದಿನೇಶ್ ಜೊತೆ ಕಾರ್ಯದರ್ಶಿಗಳಾಗಿದ್ದಾರೆ. ಚಂದ್ರಶೇಖರ ಭಟ್ ಪಿ. ಕೋಶಾಧಿ ಕಾರಿಯಾಗಿ ಆಯ್ಕೆಯಾಗಿದ್ದಾರೆ. ಹಾಗೂ ಅದೇ ದಿನ ಬ್ರಹ್ಮಕಲಶೋತ್ಸವ ವ್ಯವಸ್ಥೆಗಾಗಿ ಉಪಸಮಿತಿಗಳನ್ನು ರಚಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.