ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 84 ಶುದ್ಧಗಂಗಾ ಘಟಕಗಳ ಅನುಷ್ಠಾನ

Advt_NewsUnder_1
Advt_NewsUnder_1
Advt_NewsUnder_1

dharmasthala shudda ganga gataka copy

dharmasthala shudda ganga gataka udhgatane copyಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ರಾಜ್ಯದ ಅತೀ ಪ್ಲೋರೈಡ್ ಯುಕ್ತ ಜಿಲ್ಲೆಗಳಲ್ಲಿ ಶುದ್ಧ ಗಂಗಾ ಕುಡಿಯುವ ನೀರಿನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. 2009 ರಲ್ಲಿ ಈ ಕಾರ್ಯಕ್ರಮವು ಪ್ರಾರಂಭಗೊಂಡಿದ್ದು, ಕಳೆದ 8 ವರ್ಷಗಳಿಂದ ಕರ್ನಾಟಕ ರಾಜ್ಯದಾದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳ ಶುದ್ಧಗಂಗಾ ಕುಡಿಯುವ ನೀರಿನ ಘಟಕಗಳು ಕಾರ್ಯಾಚರಿಸುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಯಲ್ಲಿ ರಾಜ್ಯದಲ್ಲಿಯೇ ಮೊದಲ ಶುದ್ಧಗಂಗಾ ಘಟಕವನ್ನು ಪ್ರಾರಂಭಿಸಲಾಗಿತ್ತು. ಈ ಕಾರ್ಯಕ್ರಮದ ಯಶಸ್ವಿನ ಪರಿಣಾಮದಿಂದಾಗಿ ಇದೀಗ ರಾಜ್ಯದಲ್ಲಿ ಒಟ್ಟು 284 ಶುದ್ಧಗಂಗಾ ಘಟಕಗಳು ಕಾರ್ಯಾಚರಿಸುತ್ತಿವೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು – 37, ಹಾಸನ -7, ತುಮಕೂರು -39, ಬೆಳಗಾಂ -4, ಹಾವೇರಿ- 13, ಧಾರವಾಡ- 04, ಚಿತ್ರದುರ್ಗ -27, ಬಳ್ಳಾರಿ -3, ದಾವಣಗೆರೆ- 22, ಆನೆಕಲ್ಲು- 01, ಕೊಪ್ಪಳ – 19, ರಾಯಚೂರು- 2, ಕೋಲಾರ- 3, ಮೈಸೂರು, ಚಾಮರಾಜನಗರ- 3, ಗದಗಜಿಲ್ಲೆಯಲ್ಲಿ- 16 ಘಟಕಗಳು ಹೀಗೆ ಒಟ್ಟು 200 ಘಟಕಗಳು ಶುದ್ಧನೀರನ್ನು ಒದಗಿಸಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಇದರಿಂದಾಗಿ ರಾಜ್ಯದ 33,908 ಕುಟುಂಬಗಳ ಸದಸ್ಯರು ಪ್ರತಿನಿತ್ಯ 10,87,480 ಲೀ. ಶುದ್ಧಕುಡಿಯುವ ನೀರನ್ನು ಬಳಕೆ ಮಾಡುತ್ತಿದ್ದಾರೆ. ಅತಿಯಾದ ಪ್ಲೋರೈಡ್‌ನಿಂದ ನರಮಂಡಲಕ್ಕೆ, ಕ್ಯಾನ್ಸರ್, ಪ್ಲೋರೋಸಿಸ್, ಕೀಲುನೋವು, ಕಿಡ್ನಿಕ್ಯಾನ್ಸರ್, ಕರುಳು ನೋವು, ವಾಂತಿ ಬೇಧಿ, ಹೃದಯದ ಕಾಯಿಲೆಗಳಂತ ಭೀಕರರೋಗ ಭಾದೆಗೆ ತುತ್ತಾಗುವುದನ್ನು ಮನಗಂಡ ಸಂಸ್ಥೆಯ ಅಧ್ಯಕ್ಷರಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ಅನುಷ್ಠಾನಗೊಳಿಸುವ ಮೂಲಕ ಪರಿಹಾರೋಪಾಯವನ್ನು ಕಂಡುಕೊಂಡರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್. ಮಂಜುನಾಥ್‌ರವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ. ಪ್ರಸ್ತುತ ವರ್ಷರಾಜ್ಯದ ಹಾಸನ ಜಿಲ್ಲೆಯ- 50 ಘಟಕಗಳು, ದಾವಣಗೆರೆ- 17, ಕಡೂರು -1, ದೊಡ್ಡಬಳ್ಳಾಪುರ – 1, ಚಾಮರಾಜನಗರ- 2, ಚಿಕ್ಕಮಗಳೂರು -3, ದೇವನಹಳ್ಳಿ – 4, ಹೀಗೆ ಒಟ್ಟು 84 ಶುದ್ಧಗಂಗಾ ಘಟಕಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಘಟಕಗಳು ನಿರ್ಮಾಣ ಹಂತದಲ್ಲಿವೆ. ಅವುಗಳಲ್ಲಿ 30 ಘಟಕಗಳಿಂದ ಶುದ್ಧ ಕುಡಿಯುವ ನೀರು ವಿತರಣೆ ಮಾಡಲು ಚಾಲನೆ ನೀಡಲಾಗಿದ್ದು, ಇದುವರೆಗೂ ಒಟ್ಟು 230 ಘಟಕಗಳಿಂದ ಶುದ್ಧಕುಡಿಯುವ ನೀರನ್ನು ವಿತರಿಸಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.