ಶಿಶಿಲ : ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮ ಬೈದರ್ಕಳ ಹಾಗೂ ಪರಿವಾರ ದೈವಗಳ ಕ್ಷೇತ್ರ ಶಿಶಿಲ ಇಲ್ಲಿಗೆ ಬ್ರಹ್ಮ ಬೈದರ್ಕಳ ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಯ ವೈಭವದ ಶೋಭಾಯಾತ್ರೆಯು ಮಾ. 26ರಂದು ಮಂಗಳೂರು ಕಂಕನಾಡಿಯಿಂದ ಹೊರಡಿತು.
ಬೆಳಿಗ್ಗೆ 9.ಕ್ಕೆ ಮಂಗಳೂರು ಕಂಕನಾಡಿ ಗರಡಿಯಿಂದ ಹೊರಟು ಮಂಗಳೂರು, ಬಿ.ಸಿ ರೋಡ್, ಪುಂಜಾಲಕಟ್ಟೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಕೊಕ್ಕಡ, ಅರಸಿನಮಕ್ಕಿ, ಶಿಶಿಲ, ಒಟ್ಲ ಗರಡಿ ತಲುಪಿತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಸೇರಿ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಿದರು.