ಮಡಂತ್ಯಾರಿನಲ್ಲಿ ನೂತನ ಸೇಕ್ರೆಡ್ ಹಾರ್ಟ್ ಫಾರ್ಮಾ ಉದ್ಘಾಟನೆ

Advt_NewsUnder_1
Advt_NewsUnder_1

madanthyar farma copy

madanthyar farma 1 copyಮಡಂತ್ಯಾರು : ಮಡಂತ್ಯಾರು ಆಶೀರ್ವಾದ್ ಸಭಾಂಗಣದ ಕಟ್ಟಡದಲ್ಲಿ ಔಷಧಿಗಳು ಹಾಗೂ ಅದಕ್ಕೆ ಸಂಬಂಧಿತವಾದ ಕಾಸ್ಮೆಟಿಕ್ ಹಾಗೂ ಇತರ ದಿನ ಬಳಕೆ ವಸ್ತುಗಳ ಹೋಲ್‌ಸೇಲ್ ಮತ್ತು ರಿಟೈಲ್ ವಿಶೇಷ ಮಾರಾಟ ಕೇಂದ್ರವಾದ ಸೇಕ್ರೆಡ್ ಹಾರ್ಟ್ ಫಾರ್ಮಾ ಇದರ ಉದ್ಘಾಟನೆಯು ಮಾ.19 ರಂದು ಜರುಗಿತು.
ಶಾಸಕ ವಸಂತ ಬಂಗೇರ ಅವರು ರಿಬ್ಬನ್ ಕತ್ತರಿಸಿ ನೂತನ ಸಂಸ್ಥೆ ಉದ್ಘಾಟನೆ ನಡೆಸಿದ್ದಲ್ಲದೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನಗೊಳಿಸಿದರು. ಇದಕ್ಕೂ ಮುನ್ನ ಮಳಿಗೆಯ ನಾಮಫಲಕವನ್ನು ಮಾಲಕರ ತಾಯಿ, ಆಲಿಸ್ ಡಿಸೋಜಾ ಅನಾವರಣಗೊಳಿಸಿದರು. ಮುಖ್ಯ ಅತಿಥಿ ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಪ್ರಾಂಶುಪಾಲರೂ ಆಗಿರುವ ಧರ್ಮಗುರುಗಳಾದ ರೆ. ಫಾ| ಜೆರೋಮ್ ಡಿಸೋಜಾ ಅವರು ಆಶೀರ್ವಚನ ವಿಧಿ ಪೂರೈಸಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ವಸಂತ ಬಂಗೇರ ಅವರು ಮಾತನಾಡಿ, ಆಯುರ್ವೇದ ವೈದ್ಯಕೀಯ ಶಾಸ್ತ್ರದಲ್ಲಿ ಹಾವು ಕಡಿತದಂತಹ ಪ್ರಕರಣ ಆದಾಗ ಸತ್ತಂತೆ ಇದ್ದವರನ್ನು ಮತ್ತೆ ಬದುಕಿಸಿದ ಉದಾಹರಣೆಗಳೂ ಕೂಡ ನಮ್ಮ ಕಣ್ಣಮುಂದೆಯೇ ಇವೆ. ಮಿನಿ ದುಬಾಯಿಯಂತೆ ಇರುವ ಮಡಂತ್ಯಾರು ನಗರಕ್ಕೆ ಇಂತಹ ಮಳಿಗೆಗಳು ಆವಶ್ಯಕವಾಗಿದ್ದು, ಈ ಮಳಿಗೆ ಮತ್ತು ನಗರ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು. ಅತಿಥಿಯಾಗಿ ಆಶೀರ್ವದಿಸಿದ ರೆ. ಫಾ. ಜೆರೋಮ್ ಡಿಸೋಜಾ ಅವರು, ವೈದ್ಯಕೀಯ ಕ್ಷೇತ್ರ ಬೆಳೆದಂತೆ ಹೊಸ ಹೊಸ ರೋಗಗಳು ಉಲ್ಬಣಗೊಳ್ಳುತ್ತಿದೆ. ಔಷಧೀಯ ಗಿಡಮೂಲಿಕೆಗಳು ಪರಿಸರ ವಿರೋಧಿ ಕ್ರಮಗಳಿಂದಾಗಿ ನಾಶವಾಗುತ್ತಿದೆ. ಅಂತಹ ಸಂದಿಗ್ಧತೆಯಲ್ಲಿರುವ ಸಮಾಜಕ್ಕೆ ಈ ಮಳಿಗೆಯಿಂದ ಅವಶ್ಯಕತೆ ಈಡೇರಲಿ ಎಂದರು. ಜಮೀಯತುಲ್ ಫಲಾಹ್ ಮಾಜಿ ಜಿಲ್ಲಾಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರು ಮಾತನಾಡಿ, ಸ್ವದೇಶದಲ್ಲಿ ಕಲಿತ ವಿದ್ಯೆಯನ್ನು ಬಳಸಿ ಪರದೇಶಕ್ಕೆ ಹೋಗಿ ಕರ್ತವ್ಯ ನಿರ್ವಹಿಸುವುದಕ್ಕಿಂತ ಸ್ವದೇಶದಲ್ಲೇ ಸ್ವಂತ ಉದ್ದಿಮೆ ಸ್ಥಾಪಿಸಿ ತಮ್ಮತನ ಮೆರೆಯುವುದೇ ಲೇಸು. ಆ ನಿಟ್ಟಿನಲ್ಲಿ ಅಂದ್ರಾದೆ ಕುಟುಂಬ ಹೆಜ್ಜೆ ಇಟ್ಟಿದ್ದು ಸ್ವಾಗತಾರ್ಹ ಎಂದರು. ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಎಸ್. ಬೇಬಿ ಸುವರ್ಣ, ಮಡಂತ್ಯಾರು ಶ್ರೇಯಾ ಕ್ಲಿನಿಕ್‌ನ ಡಾ. ಜೆ. ಆರ್. ಸೇರಾ, ಆಶಾದೀಪ ಕೇಂದ್ರದ ಸುಪಿರಿಯರ್ ಫಾ| ಸಿರಿಲ್ ಮಿನೇಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಕೋರಿದರು.
ಮಳಿಗೆಯ ಮಾಲಕರಾದ ಸ್ಟೀವ್ ಅಂದ್ರಾದೆ ಅವರ ಸಹೋದರಿ ಕು. ಸ್ಟೆಫಿ ಅಂದ್ರಾದೆ ಸ್ವಾಗತಿಸಿದರು. ಸ್ಟೀವ್ ಅಂದ್ರಾಜೆ, ಅವರ ತಂದೆ, ವಿದೇಶಿ ಉದ್ಯೋಗಿಯಾಗಿರುವ ಜಾರ್ಜ್ ಅಂದ್ರಾದೆ ಮತ್ತು ತಾಯಿ ಜೂಲಿಯಾನಾ ಅಂದ್ರಾದೆ ಹಾಗೂ ಕುಟುಂಬಸ್ಥರು ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು. ಮಳಿಗೆಗೆ ಸಹಕಾರ ನೀಡಿದ ಮಾಲಕರ ಮಾವ ವಿನ್ಸೆಂಟ್ ಡಿಸೋಜಾ, ಸ್ಥಳೀಯರಾದ ಜೆರಾಲ್ಡ್ ಕೊರೆಯ, ಪದ್ಮನಾಭ ಸಾಲಿಯಾನ್, ವಿನ್ಸೆಂಟ್ ಡಿಸೋಜಾ ಅವರನ್ನು ವಿಶೇಷವಾಗಿ ಗುರುತಿಸಲಾಯಿತು. ಫ್ರಾನ್ಸಿಸ್ ವಿ.ವಿ. ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.