ಗುರುವಾಯನಕೆರೆ : ಇಲ್ಲಿಯ ಅಭಯ ಆಸ್ಪತ್ರೆ ಹತ್ತಿರ ಅಭಯ ಆಗ್ರೋ ಸೆಂಟರ್ ಮಾ. 16ರಂದು ಶುಭಾರಂಭಗೊಂಡಿತು.
ಉದ್ಘಾಟನೆಯನ್ನು ಬೆಳ್ತಂಗಡಿ ಅಭಯ ಆಸ್ಪತ್ರೆ ಶ್ರೀಹರಿ ಭಟ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಗೋಪಾಲಕೃಷ್ಣ ಮಡಂತ್ಯಾರು, ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಭಿಡೆ, ಬೆಳ್ತಂಗಡಿ ತಾಲೂಕು ಕಾಂಗ್ರೇಸ್ ಯುವಮೋರ್ಚಾ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಮುಗುಳಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀಣಾ ಸವಣಾಲು, ರಾಮಚಂದ್ರ ಭಟ್ ಸವಣಾಲು, ಪ್ರಭಾಕರ್ ಭಟ್ ಸವಣಾಲು ಉಪಸ್ಥಿತರಿದ್ದರು. ಬಂದಂತಹ ಅತಿಥಿಗಳನ್ನು ಮಾಲಕ ಗುರುಪ್ರಸಾಶ್ ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು. ನಮ್ಮಲ್ಲಿ ಕೃಷಿಗೆ ಬೇಕಾದ ಕೀಟನಾಶಕ ಹಾಗೂ ರಸಗೊಬ್ಬರಗಳು ದೊರೆಯುತ್ತದೆ.