HomePage_Banner_
HomePage_Banner_
HomePage_Banner_

ಮಂಂಜುಶ್ರೀ ರೋವರ‍್ಸ್ ಘಟಕದ ವಾರ್ಷಿಕ ದಿನಾಚರಣೆ

itiವೇಣೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ, ವೇಣೂರು ಇಲ್ಲಿನ ಮಂಂಜುಶ್ರೀ ರೋವರ‍್ಸ್ ಘಟಕದ ವಾರ್ಷಿಕ ದಿನಾಚರಣೆಯು ಸಂಸ್ಥೆಯ ಸಭಾಭವನದಲ್ಲಿ ಜರಗಿತು. ಮಡಂತ್ಯಾರು ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶಾಂತರಾಮ ಪ್ರಭು ಸಮಾರಂಭವನ್ನು ಉದ್ಘಾಟಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ನಡೆದು ಬಂದ ದಾರಿ ಹಾಗೂ ಉದ್ದೇಶಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಮುಖ್ಯ ಅತಿಥಿಗಳಾಗಿ ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ. ಸಂಜಯ್ ಬಿ. ರೋವರ‍್ಸ್‌ಗಳಿಗೆ ಮುಂದಿನ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಲು ಸಾಧ್ಯ ಎಂದರು. ಸಂಸ್ಥೆಯ ಪ್ರಾಚಾರ್ಯ ಸದಾನಂದ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮತ್ತು ಗೌರವ ಸಲಹೆಗಾರ ಎಂ.ಆರ್. ಜೈನ್ ರೋವರ‍್ಸ್‌ಗಳಿಗೆ ಶುಭವನ್ನು ಹಾರೈಸಿದರು. ಉದಯ ಶೆಟ್ಟಿಗಾರ್ ವರದಿ ವಾಚಿಸಿ, ಸುನಿಲ್ ಅನಿಸಿಕೆಯನ್ನು ಹೇಳಿದರು. ರೋವರ‍್ಸ್ ಲೀಡರ್ ಜಾಕೋಬ್ ಟಿ.ವಿ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಸತೀಶ್ ವೈ.ಜೆ ಪೂಜಾರಿ ವಂದಿಸಿ, ರಿತೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.